ಗೆಸ್ಟ್ ಹುಚ್ಚಾಟಕ್ಕೆ ಗಿಲ್ಲಿ ಗಪ್ ಚುಪ್ – ಮಂಜು & ರಜತ್ ಬಂದಿದ್ದು ಇದಕ್ಕೇನಾ?
ಗಿಲ್ಲಿ ಫ್ರೀ ಬಿಟ್ರೆ ರೋಸ್ಟ್ ಅಲ್ಲ ಊಸ್ಟ್!

ಗಿಲ್ಲಿ ಗಿಲ್ಲಿ ಗಿಲ್ಲಿ.. ಕರ್ನಾಟಕದ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯದ್ದೇ ಮಾತು.. ಮಂಡ್ಯದಿಂದ ಇಂಡಿಯಾ ತನಕ ಗಿಲ್ಲಿಯ್ದದ್ದೇ ಹವಾ.. ಇಲ್ಲಿ ಗಿಲ್ಲಿಗೆ ಈ ರೇಂಜ್ ಫ್ಯಾನ್ಸ್ ಹುಟ್ಟುವುದ್ದಕ್ಕೆ ಕಾರಣ, ಬಿಗ್ಬಾಸ್ನಲ್ಲಿ ಇವರ ಆಟ.. ನಿಜಕ್ಕೂ ಈ ಹುಡುಗನಿಗೆ ಏನ್ ಟ್ಯಾಲೆಂಟ್ ಇದೆ ಅನ್ಸುತ್ತೆ.. ಇಡೀ 12 ಸೀಸನ್ನಲ್ಲಿ ಈ ತರ ಯಾರು ಬಂದಿಲ್ಲ. ಫುಲ್ಲಿ ಲೋಡೆಂಡ್ ಟ್ಯಾಲೆಂಟ್ ಗನ್ ಅಂದ್ರೆ ಅದು ಗಿಲ್ಲಿ.. ಮಾತಿಗೂ ಸೈ, ಕಾಮಿಡಿಗೂ ಜೈ.. ಡ್ಯಾನ್ಸ್ ಬರಲ್ಲ ಅಂತ ಇಲ್ಲ ಹಾಡು ಹೇಳಲ್ಲ ಅಂತ ಇಲ್ಲ.. ಎದುರಾಳಿ ಎಷ್ಟೇ ದೊಡ್ಡ ವ್ಯಕ್ತಿ ಆಗಲಿ, ಎಷ್ಟೇ ಬಿಲ್ಡಪ್ ಕೊಡ್ಲಿ ಗಿಲ್ಲಿ ಮಾತಿನಿಂದಲೇ ಅವರನ್ನ ಮಕಾಡೆ ಮಲಗಿಸುತ್ತಾರೆ. ಅದ್ದಕ್ಕೆ ಗಿಲ್ಲಿ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದು. ಆದ್ರೆ ಈ ವಾರ ಗಿಲ್ಲಿನ ಬಿಗ್ಬಾಸ್ ಮನೆಗೆ ಹೋಗಿರೋ 5 ಜನ ಹಳೇ ಸ್ಪರ್ಧಿಗಳು ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ಸುತ್ತೆ. ಈ ವಾರ ಬಿಗ್ ಬಾಸ್ಗೆ ಸೀಸನ್ 11 ರ ಸ್ಪರ್ಥಿಗಳಾಗಿದ್ದ ತ್ರಿವಿಕ್ರಮ್, ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಬಿಗ್ ಬಾಸ್ಗೆ ಬಂದಿದ್ದಾರೆ. ಇವರೆಲ್ಲಾ ಗೆಸ್ಟ್ ಅಂತೆ, ಮಂಜಣ್ಣನ ಬ್ಯಾಚಲ್ ಪಾರ್ಟಿ ಬಿಗ್ ಬಾಸ್ನಲ್ಲಿ ಅನ್ನೋ ಟಾಸ್ತ್ ಅಂತ ಕೊಟ್ಟಿದ್ದಾರೆ.
ಈ ಗೇಮ್ನಲ್ಲಿ ಗಿಲ್ಲಿನ ಮಂಜುಣ್ಣ, ರಜತ್ ಬೇಕಾ ಬಿಟ್ಟಿ ಟಾರ್ಗೆಟ್ ಮಾಡ್ತಿದ್ದಾರೆ. ಗಿಲ್ಲಿನ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ಪರ ಸಾಕಷ್ಟು ಕಮೆಂಟ್ ಬರುತ್ತಿದ್ದು, ಗಿಲ್ ಫ್ಯಾನ್ಸ್ ರೊಚ್ಚಿಗೆದ್ದು ರಜತ್ ಮತ್ತು ಮಂಜಣ್ಣ ಆಚೆ ಕಳುಹಿಸಿ. ಅವರಿಬ್ಬರದ್ದು ಓವರ್ ಆಯ್ತು.. ಇವರ ಕಳೆದ ಸೀಸನ್ನಲ್ಲಿ ಏನ್ ಮಾಡಿದ್ದಾರೆ ಅನ್ನೋದ್ದನ್ನ ನಾವ್ ನೋಡಿದ್ದೇವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ.. ಮನೆಯವರ ಊಟ ಮಾಡಬೇಡ ಅಂತ ಹೇಳುವುದ್ದಕ್ಕೆ ನೀನ್ ಯಾರು.. ನಿಮ್ಗೆ ಊಟ ಹಾಕ್ತಾ ಇದ್ದಾರೆ ತಾನೇ ಅಂತ ಸೋಷಿಯಲ್ ಮೀಡಿಯಾದಲ್ಲಿ ಮಂಜಣ್ಣ ಮತ್ತು ರಜತ್ಗೆ ಉಗೀತಾ ಇದ್ದಾರೆ. ಅಷ್ಟೇ ಇವೆಲ್ಲಾ ಬಿಗ್ ಬಾಸ್ ಮನೆಯಲ್ಲಿ ಇಟ್ಕೋ, ಬಿಗ್ ಬಾಸ್ ಮನೆಯಲ್ಲಿ ಬೇಡ ಅಂತ ಹೇಳುತ್ತಿದ್ದಾರೆ. ಕಲರ್ಸ್ ಕನ್ನಡ ಫ್ರೋಮೋ ಬಿಟ್ಟಾಗ ಅದರಲ್ಲಿ 100 ಕಾಮೆಂಟ್ಗಳಲ್ಲಿ 95 ಕಾಮೆಂಟ್ಗಳು ಗಿಲ್ಲಿ ಪರವಾಗಿಯೇ ಇರ್ತಾವೆ.. ನನ್ನ ಪ್ರಕಾರ ಒಂದು ವಾರದ ಮಟ್ಟಿಗೆ ಮನೆಗೆ ಹೋಗಿರೋ ಮಂಜಣ್ಣ ಮತ್ತು ರಜತ್ ಜನರ ಕೆಂಗಣ್ಣಿಗೆ ಗುರಿಯಾದು ಪಕ್ಕಾ.. ಇವರು ಹೋದಲ್ಲಿ ಬಂದಲ್ಲಿ ಗಿಲ್ಲಿ ಫ್ಯಾನ್ಸ್ ಗಿಲ್ಲಿಗೇ ಜೈ ಕಾರ ಹಾಕ್ತಾರೆ ಅನ್ಸುತ್ತೆ.. ಯಾಕಾದ್ರೂ ಗೆಸ್ಟ್ ಆಗಿ ಬಿಗ್ಬಾಸ್ಗೆ ಹೋದ್ನೋ ಅಂತ ಅನ್ಸುತ್ತೆ.. ಗಿಲ್ಲಿಗೆ ಇರೋ ಫ್ಯಾನ್ಸ್ ಹೃದಯದಿಂದ ಫ್ಯಾನ್ಸ್ ಆದವರು ಅನ್ನೋದು ಸೋಷಿಯಲ್ ಮೀಡಿಯಾ ನೋಡಿದ್ರೆ ಗೊತ್ತಾಗುತ್ತೆ..
ಜನ ಮಂಜಣ್ಣ ಮತ್ತು ರಂಜತ್ಗೆ ಬೈಯೋದ್ದಕ್ಕೆ ಕಾರಣ ಗಿಲ್ಲಿ ಏನ್ ಮಾಡಿದ್ರೂ ತಪ್ಪು ಅನ್ನೋ ರೇಂಜ್ಗೆ ಇವರಿಬ್ಬರು ಆಡ್ತಾ ಇದ್ದಾರೆ. ಬಿಗ್ಬಾಸ್ನನ್ನೇ ಇವರು ನಡೆಸ್ತಾ ಇದ್ದಾರೆ, ನಾವು ಸಿನಿಯರ್ ಅನ್ನೋ ಅಹಂ ಇವರಿಬ್ಬರಲ್ಲಿ ಎದ್ದು ಕಾಣ್ತಾ ಇದೆ.. ಅದರಲ್ಲೂ ಮಂಜಣ್ಣ ಅಂತ ಸೇಮ್ ಕುಡುಕರು ಹೇಗ್ ಮಾಡ್ತಾರೆ ಹಾಗೇ ಮಾಡ್ತಾ ಇದ್ದಾರೆ. ಇದ್ರ ಮಧ್ಯೆ ಮನೆಯ ಕ್ಯಾಪ್ಟನ್ ಅಭಿಷೇಕ್ ಕೂಡ ಗಿಲ್ಲಿಯದ್ದೇ ತಪ್ಪು ಅನ್ನೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ರೂಲ್ಸ್ ಬುಕ್ನಲ್ಲಿ ಯಾರ್ ಯಾರ್ ಏನ್ ಕೆಲಸ ಮಾಡಬೇಕು ಅಂತ ಮೊದ್ಲೆ ಹೇಳಿದ್ದಾರೆ. ಗಿಲ್ಲಿ ಸಪ್ಲೈಯರ್ ಅಂತ ಹೇಳಿದ್ದಾರೆ ಅದೇ ಡ್ರೆಸ್ ಕೊಟ್ಟಿದ್ದಾರೆ. ಆದ್ರೆ ಮಂಜಣ್ಣ ಬೇಕ್ ಬೇಕಂತ ಎಲ್ಲಾ ಚೆಲ್ಲಿ ಗಿಲ್ಲಿನೇ ಕ್ಲೀನ್ ಮಾಡ್ಬೇಕು ಅಂತ ಹೇಳ್ತಾ ಇದ್ದಾರೆ. ಅದು ಕ್ಲಿನಿಂಗ್ ಡಿಪಾರ್ಟೆಮೆಂಟ್ ಕೆಲಸ. ಮ್ಯಾನೇಜರ್ ಆಗಿರೋ ಅಭಿಷೇಕ್ ಗೆಸ್ಟ್ಗಳ ತಾಳಕ್ಕೆ ತಕ್ಕಂತೆ ಕುಣಿಯುದೆ, ಗಿಸ್ಟ್ಗಳು ಏನ್ ಹೇಳಿದ್ರು ಅದ್ದಕ್ಕೆ ಓಕೆ ಅನ್ನದೇ ತಮ್ಮ ಸ್ಟಾಫ್ ಪರವಾಗಿ ನಿಲ್ಲಬೇಕು.. ಗಿಲ್ಲಿ ಎರಡು ಮಾತು ಬಿಟ್ರೆ, ಸರಿಯಾಗಿ ಆಟ ಆಡ್ತಾ ಇದ್ದಾರೆ. ಅಶ್ವಿನಿಯವರು ಕೂಡ ಈ ಗೇಮ್ನ ಚೆನ್ನಾಗಿ ಆಡ್ತಾ ಇದ್ದಾರೆ. ಗಿಲ್ಲಿ ಇವರ ಟಾರ್ಚರ್ಗೆ ಸ್ವಲ್ಪ ಕುಗ್ಗಿ ಹೋದಂತೆ ಕಾಣ್ತಾ ಇತ್ತು. ಬೇಜಾರ್ನಲ್ಲಿದ್ದ ಗಿಲ್ಲಿಗೆ ಅಶ್ವಿನಿ ಸಮಾಧಾನ ಮಾಡಿದ್ದಾರೆ. ಬೇಜಾರ್ ಮಾಡ್ಕೋಬ್ಯಾಡ ಚೆನ್ನಾಗಿ ಆಡ್ಯಾ ಇದ್ಯಾ ಅಂತ ಹೇಳಿ ಸಮಾಧಾನ ಮಾಡಿದ್ದಾರೆ. ಇದು ಇಷ್ಟ ಆಯ್ತು. ಗಿಲ್ಲಿ ಹೊರಿನಿವರು ಬಂದು ಮನೆಯವರಿಗೆ ಹೇಳಿದಾಗ ಬೇಜಾರ್ ಆಗುತ್ತೆ ಅಂತ ಹೇಳಿದ್ದಾರೆ. ಅದ್ದಕ್ಕೆ ಅಶ್ವಿನಿ ಗೌಡ ಕೂಡ ಹೌದು ಎಂದಿದ್ದಾರೆ. ಇವರಿಬ್ಬರು ಜಗಳ ಬಿಟ್ಟು, ಸ್ನೇಹಿತರ ಜೊತೆ ಇರೋದು ಕೂಡ ಜನಕ್ಕೆ ಇಷ್ಟ ಆಗ್ತಾ ಇದೆ.
ಗಿಲ್ಲಿಯಿಂದಲೇ ಈ ಸಲದ ಟಿಆರ್ಪಿ ಹೆಚ್ಚಾಗಿದೆ. ಜನ ಕೂಡ ಅದ್ದನ್ನೇ ಕಮೆಂಟ್ಗಳಲ್ಲಿ ಹಾಕುತ್ತಿದ್ದಾರೆ. ಗಿಲ್ಲಿಗಾಗಿಯೇ ನಾವು ಬಿಗ್ ಬಾಸ್ ನೋಡ್ತಾ ಇರೋದ್ ಅಂತ. ಅಪ್ಪಿ ತಪ್ಪಿ ಗಿಲ್ಲಿ ಸೈಲೆಂಟ್ ಆದ್ರೆ ಬಿಗ್ಬಾಸ್ಗೆ ಪ್ರೋಮೋಕ್ಕೆ ಹಾಕೋಕೆ ಯಾವ ಕಂಟೆಂಟ್ ಕೂಡ ಇರಲ್ಲ. ಗಿಲ್ಲಿ ಸೈಲೆಂಟ್ ಆಗಿದ್ದಕ್ಕೆಬಿಗ್ ಬಾಸ್ ಪ್ರೋಮೋ ನೋಡುವುದ್ದಕ್ಕೂ ಇಷ್ಟ ಆಗ್ತಾ ಇಲ್ಲ. ಗಿಲ್ಲಿ ಬಿಗ್ಬಾಸ್ ಮನೆಯಲ್ಲಿ ಮಾತಾಡಿಲ್ಲ ಅಂದ್ರೆ ಬಿಗ್ ಬಾಸ್ ಮನೆ ಉಪ್ಪಿಲ್ಲದ ಸಾರಿನಂತೆ ಆಗ್ತುತ್ತೆ. ಗೆಸ್ಟ್ ಬಂದ್ರೂ ಕೂಡ ಗಿಲ್ಲಿಯಿಂದ ಕಂಟೆಂಟ್ ಸಿಗ್ತಾ ಇದೆ ಹೊರತು, ಗೆಸ್ಟ್ನಿಂದ ಬಿಗ್ಬಾಸ್ಗೆ ಕಂಟೆಂಟ್ ಇಲ್ಲ. ಗಿಲ್ಲಿ ಅಂತೂ ಗೆಸ್ಟ್ಗಳನ್ನ ಸರಿಯಾಗೇ ಉರ್ಸಿ ಬಿಟ್ಟಿದ್ದಾರೆ.
ಇನ್ನೊಂದು ವಿಷ್ಯ ಅಂದ್ರೆ ಮಂಜಣ್ಣ ಗಿಲ್ಲಿನ ತುಂಬಾ ಟಾರ್ಗೆಟ್ ಮಾಡ್ತಾ ಇದ್ದಾರೆ. ಸಪ್ಲೈಯರ್ ತಪ್ಪು ಮಾಡಿದ್ರೆ ಮ್ಯಾನೇಜರ್ಗೆ ಹೇಳಬೇಕು, ಅವರು ಶಿಕ್ಷೆ ಕೊಡಬೇಕು. ಆದ್ರೆ ಇಲ್ಲಿ ಬಂದಿರೋ ಗೆಸ್ಟ್ ಶಿಕ್ಷೆ ಕೊಡುವುದಂತೆ ಅದ್ದಕ್ಕೆ ಅಭಿಷೇಕ್ ಸರಿ ಸರಿ ಅಂತ ಹೇಳದಂತೆ. ಗೆಸ್ಟ್ ಹೇಳಿದ್ದಂತೆ ಮಾಡೋದ್ ಅಂತೆ. ಇಲ್ಲಿ ಅಭಿಷೇಕ್ ಕ್ಯಾಪ್ಟನ್ಸಿ ಸರಿಯಾಗಿಲ್ಲ. ಮ್ಯಾನೇಜರ್ ಕೆಲಸ ಸರಿಯಾಗಿ ಮಾಡ್ತಿಲ್ಲ. ಗೆಸ್ಟ್ ಮತ್ತು ಸಿಬ್ಬಂದಿ ನಡುವೆ ಸೇತುವೆ ಆಗಿ ಕೆಲಸ ಮಾಡಬೇಕಿತ್ತು. ಸಿಬ್ಬಂದಿ ತಪ್ಪು ಮಾಡಿದ್ರೆ ಬೈಯುವ ಮ್ಯಾನೇಜರ್ ಗೆಸ್ಟ್ ತಪ್ಪು ಮಾಡಿದ್ರೆ ನೀವು ಹೀಗೆಲ್ಲಾ ಮಾಡಬಾರದು ಅಂತ ಹೇಳಬೇಕು. ಪಾಯಿಂಟ್ಸ್ ಕೊಡ್ತಾರೆ ಅಂತ ಅವರ ಮಾತುಗಳನ್ನ ಹೇಳುವುದ್ದಕ್ಕೆ ಆಗಲ್ಲ. ಹಾಗೇ ಸಿಬ್ಬಂದಿ ಮೇಲೆ ಗೆಸ್ಟ್ಗಳು ಹಕ್ಕು ಚಾಲಾಯಿಸೋಕೆ ಬಂದ್ರೆ ಬಿಡಬಾರದು ಮ್ಯಾನೇಜರ್.. ಗಿಲ್ಲಿ ಮಾಡಿರೋ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಹಾಗೇ ಗೆಸ್ಟ್ ಗಳು ಗಿಲ್ಲಿನೇ ಟಾರ್ಗೆಟ್ ಮಾಡೋದು ಎಷ್ಟು ಸರಿ. ಒಂದು ವೇಳೆ ಮ್ಯಾನೇಜರ್ ಆಗಿರೋ ಮನೆಯ ಕ್ಯಾಪ್ಟನ್ ಅಭಿಷೇಕ್ ಮನೆಯವರ ಪರವಾಗಿ ನಿಂತು ಗಿಸ್ಟ್ಗಳಿಗೂ ಬುದ್ದಿ ಹೇಳಿದ್ರೆ ಈ ಸಲದ ಕಿಚ್ಚನ ಚಪ್ಪಾಳೆ ಅಭಿಷೇಕ್ಗೆ ಸಿಗ್ತಾ ಇತ್ತು, ಈ ಟಾಸ್ಕ್ ಕೂಡ ಚೆನ್ನಾಗಿ ಹೋಗ್ತಾ ಇತ್ತು. ಎಲ್ಲೋ ಒಂದ್ಕಡೆ ಇತು ವೈಯಕ್ತಿ ದ್ವೇಷಕ್ಕೆ ಕಾರಣ ಆಯ್ತು.. ಅಹಂ ಅನ್ನೋದು ಮಂಜಣ್ಣ ಮತ್ತು ರಜತ್ ತಲೆಗೆ ಹತ್ತಿ ಗಿಲ್ಲಿನ ಟಾರ್ಗೆಟ್ ಮಾಡುವಂತೆ ಮಾಡಿದೆ.

ನೋಡಿರಿ

