ಮಚ್ಚು ಆಯ್ತು.. ಈಗ ಪೆಟ್ರೋಲ್ ಬಾಂಬ್ ರೀಲ್ಸ್! – ರಸ್ತೆಯಲ್ಲಿ ರಜತ್ ಸ್ಟಂಟ್.. ಸಾರ್ವಜನಿಕರಿಂದ ಆಕ್ರೋಶ!

ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ನ ವಿವಾದವೇ ಹುಡುಕಿಕೊಂಡು ಬರುತ್ತೋ ಅಥವಾ ವಿವಾದಗಳನ್ನ ಇವರೇ ಹುಡುಕಿಕೊಂಡು ಹೋಗುತ್ತಾರೋ ಗೊತ್ತಿಲ್ಲ. ಒಂದಾದ ಮೇಲೊಂದು ವಿಚಾರಕ್ಕೆ ಬುಜ್ಜಿ ಕೇಂದ್ರ ಬಿಂದುವಾಗಿದ್ದಾರೆ. ಇದೀಗ ರಜತ್ ರೀಲ್ಸ್ ಮಾಡಲು ಹೋಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ರಜತ್ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್ ಶೂಟ್ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಸೆ ಸೆರಗ ಸರ್ಸೆ ಸಾಂಗ್ ವಿವಾದ! – ಕ್ಷಮೆ ಕೇಳಿ 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಿಸಿದ ಸಂಜಯ್ ದತ್
ರಜತ್ ಈ ಹಿಂದೆ ವಿನಯ್ ಗೌಡ ಜೊತೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಅವರಿಬ್ಬರ ಮೇಲೆ ಎಫ್ಐಆರ್ ದಾಖಲಾಗಿತ್ತು. ಅಷ್ಟೇ ಅಲ್ಲ ಇಬ್ಬರು ಜೈಲುವಾಸ ಅನುಭವಿಸಿದ್ರು. ಅದಾದ ಬಳಿಕ ಬಿಗ್ಬಾಸ್ ಡಾಗ್ ಸತೀಶ್ ಸ್ನೇಹಿತನಿಗೆ ಫೋನ್ ಮೂಲಕ ಬೆದರಿಕೆ ಹಾಕಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬೆದರಿಕೆ ಆಡಿಯೋ ಮತ್ತು ಮೆಸೇಜ್ಗಳಿಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗಲು ಪೊಲೀಸರು ರಜತ್ಗೆ ನೋಟಿಸ್ ನೀಡಿದ್ದರು. ಹೀಗೆ ಸಾಲು ಸಾಲು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಅವರು ಈಗ ಹೊಸ ರೀಲ್ಸ್ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಬುಜ್ಜಿ ಹೊಸ ರೀಲ್ಸ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ರಜತ್ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್ ಶೂಟ್ ಮಾಡಿರುವುದು ಕಂಡುಬಂದಿದೆ. ರಜತ್ ಒಂದು ಕವರ್ ಒಳಗೆ ಪೆಟ್ರೋಲ್ ಹಾಕಿ, ಅದರ ಮೇಲೆ ಕಲ್ಲಿಟ್ಟು ಅದನ್ನು ಸ್ಫೋಟಗೊಳಿಸುವ ರೀತಿಯಲ್ಲಿ ವೀಡಿಯೊ ಚಿತ್ರೀಕರಣ ನಡೆಸಿದ್ದಾರೆ. ಈ ಶೂಟಿಂಗ್ ನೇರವಾಗಿ ರಸ್ತೆಯ ಮೇಲೆಯೇ ನಡೆದಿರುವುದು ಇನ್ನಷ್ಟು ಆತಂಕಕಾರಿ ಸಂಗತಿಯಾಗಿದೆ. ಸಾಮಾನ್ಯವಾಗಿ ಜನ ಸಂಚಾರ ಇರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಮಾಡಿರುವುದು ಸಾರ್ವಜನಿಕ ಸುರಕ್ಷತೆಯನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ರಜತ್ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದು ಕೇವಲ ಗಮನ ಸೆಳೆಯಲು ಅಥವಾ ಫಾಲೋವರ್ಸ್ ಹೆಚ್ಚಿಸಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಕದಂತೆ ಕಾಣುವ ವಸ್ತುವನ್ನು ಬಳಸಿರುವುದು ಕಾನೂನುಬಾಹಿರವಾಗಿದ್ದು, ಇದು ಇತರರಿಗೆ ಕೆಟ್ಟ ಮಾದರಿಯನ್ನೂ ನೀಡುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ನೋಡಿರಿ

