ಡ್ಯಾನ್ಸರ್‌ ಡ್ರೋನ್‌.. ಸೈಂಟಿಸ್ಟ್ ಅಲ್ವಾ? – ಪ್ರತಾಪ್‌ ಟ್ಯಾಲೆಂಟ್‌ ಒಂದಾ ಎರಡಾ?
ಒಳ್ಳೆ ಕೆಲಸ ಮಾಡಿದ್ರೂ ಟ್ರೋಲ್‌ ಯಾಕೆ?

ಡ್ಯಾನ್ಸರ್‌ ಡ್ರೋನ್‌.. ಸೈಂಟಿಸ್ಟ್ ಅಲ್ವಾ? – ಪ್ರತಾಪ್‌ ಟ್ಯಾಲೆಂಟ್‌ ಒಂದಾ ಎರಡಾ?ಒಳ್ಳೆ ಕೆಲಸ ಮಾಡಿದ್ರೂ ಟ್ರೋಲ್‌ ಯಾಕೆ?

ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ರನ್ನರ್‌ ಅಪ್‌ ಡ್ರೋನ್ ಪ್ರತಾಪ್‌ ಸದ್ಯ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಬರೀ ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಡ್ರೋನ್‌ ಈಗ ಒಳ್ಳೆ ಕೆಲಸಗಳಿಂದ ಮನೆಮಾತಾಗಿದ್ದಾರೆ. ಇದೀಗ ಡ್ರೋನ್‌ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಡ್ರೋನ್‌ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಇವನು ಸೈಂಟಿಸ್ಟ್ ಅಲ್ಲ ಅಂತಾ ನೆಟ್ಟಿಗರು ಟ್ರೋಲ್‌ ಮಾಡ್ತಾ ಇದ್ದಾರೆ.. ಅಷ್ಟಕ್ಕೂ ಡ್ರೋನ್‌ ಟ್ರೋಲ್‌ ಆಗಿದ್ದು ಯಾಕೆ? ವೈರಲ್‌ ಆದ ವಿಡಿಯೋದಲ್ಲಿ ಏನಿದೆ ಅನ್ನೊ ಮಾಹಿತಿ ಇಲ್ಲಿದೆ.

ಇದನ್ನೂ ಓದಿ :  KLಗೆ RCB ಬಾಗಿಲು ಬಂದ್? – ಫಾಫ್ OUT.. ಪಾಂಡ್ಯ CAPTAIN?

ಡ್ರೋನ್‌ ಪ್ರತಾಪ್‌ ತಾನು ಸಂಶೋಧಕ ಎಂದು ಹೇಳಿ ರಾಜ್ಯದ ಜನರನ್ನ ನಂಬಿಸಿ, ಮೋಸ ಮಾಡಿದ್ದಾನೆ ಎಂಬ ಆರೋಪ ಇತ್ತು.  ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ನಲ್ಲಿ ಡ್ರೋನ್‌ ಪ್ರತಾಪ್‌ ತಾನು ಮಾಡಿದ ಎಲ್ಲದಕ್ಕೂ ರಾಜ್ಯದ ಜನರ ಮುಂದೆ ಕ್ಷಮೆಯನ್ನೂ ಕೇಳಿದ್ದಾರೆ.  ಡ್ರೋನ್‌ ಬಿಗ್‌ಬಾಸ್‌ ಗೆ ಹೋಗಿ ಬಂದ್ಮೇಲೆ ಒಳ್ಳೆ ಹೆಸರನ್ನ ಪಡೆದುಕೊಂಡಿದ್ದಾರೆ.. ಸಮಾಜ ಮುಖಿ ಕಾರ್ಯಗಳಿಂದಲೇ ತನ್ನನ್ನ ತಾನು ತೊಡಗಿಸಿಕೊಂಡಿದ್ದಾರೆ.. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಮಾನವೀಯತೆ ಮೆರಿತಾ ಇದ್ದಾರೆ.. ಆದ್ರೆ, ಏನೇ ಮಾಡಿದ್ರೂ ಡ್ರೋನ್‌ ಪ್ರತಾಪ್ ಟ್ರೋಲ್ ಆಗೋದು ಮಾತ್ರ ಹಾಗೇನೇ ಮುಂದುವರೆದಿದೆ. ಇದೀಗ ಡ್ರೋನ್ ಪ್ರತಾಪ್ ಮಾಡಿರೋ ಡ್ಯಾನ್ಸ್ ವೊಂದು ವೈರಲ್ ಆಗಿದ್ದು, ಈ ಹೊಸ ಟ್ಯಾಲೆಂಟ್ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ..

ಬಿಗ್‌ ಬಾಸ್‌ ಗೆ ಹೋಗಿ ಬಂದ್ಮೇಲೆ ಪ್ರತಾಪ್‌  ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.  ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ನಂತರ ಕಾಲೇಜುಗಳು, ಕೆಲವೊಂದು ಉದ್ಘಾಟನಾ ಸಮಾರಂಭ, ಸಭಾಕಾರ್ಯಕ್ರಮಗಳಿಗೆ ಡ್ರೋನ್ ಪ್ರತಾಪ್‌ ರನ್ನ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಹೀಗೆ ಅತಿಥಿಯಾಗಿ ಹೋದಾಗ ಡ್ರೋನ್ ಪ್ರತಾಪ್ ಹಾಡು, ಡ್ಯಾನ್ಸ್‌, ಭಾಷಣ ಅಂತಾ ಎಲ್ಲರಿಗೂ ಮನರಂಜನೆ ನೀಡಿ, ತನ್ನ ಟ್ಯಾಲೆಂಟ್‌ ಏನು ಅಂತಾ ಪ್ರೂವ್‌ ಮಾಡ್ತಿದ್ದಾರೆ..

ಇತ್ತೀಚೆಗೆ ಖಾಸಗಿ ಕಾಲೇಜೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಡ್ರೋನ್ ಪ್ರತಾಪ್ ಅಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಭರ್ಜರಿಯಾಗಿ ಸ್ಟೆಪ್ಸ್‌ ಹಾಕಿದ್ರು.. ಸುಮಾರು 10-12 ಕಾಲೇಜು ಯುವತಿಯರೊಂದಿಗೆ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ರು. ಈ ವೇಳೆ ಪ್ರತಾಪ್ ಡ್ಯಾನ್ಸ್ ನೋಡಿದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ. ಕೆಲವರು ಡ್ರೋನ್‌ ಪ್ರತಾಪ್ ಡ್ಯಾನ್ಸ್ ಟ್ಯಾಲೆಂಟ್ ಗೆ ಗೇಲಿ ಮಾಡಿದ್ದಾರೆ.  ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕಾಲೇಜು ಹುಡುಗಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ.. ಇನ್ನು ಕೆಲವರು ಡ್ರೋನ್‌ ಡ್ಯಾನ್ಸ್‌ ಅನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಡ್ರೋನ್‌ ಡ್ಯಾನ್ಸ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ಈಗ ಭಾರಿ ವೈರಲ್‌ ಆಗುತ್ತಿದೆ.. ಡ್ರೋನ್‌ ಡ್ಯಾನ್ಸ್‌ ಅನ್ನ ಕೆಲವರು ಡ್ರೋಲ್‌ ಮಾಡ್ತಾ ಇದ್ದಾರೆ.. ಇವನು ಸೈಂಟಿಸ್ಟ್ ಅಲ್ವಾ..? ಅದ್ಯಾವಾಗ ಡ್ಯಾನ್ಸರ್ ಆಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಅಣ್ಣನ ಡ್ಯಾನ್ಸ್ ಸೂಪರ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿಯೂ ಕಾಮೆಂಟ್ ಮಾಡಿದ್ದಾರೆ ಬಿಡಿ. ಆದ್ರೆ, ಒಬ್ಬ ವ್ಯಕ್ತಿಯನ್ನ ಈ ರೀತಿ ಟ್ರೋಲ್ ಮಾಡಿ ಖುಷಿ ಪಡೋದು ಕೂಡಾ ಸರೀನಾ ಎಂದು ಕೆಲವರು ಪ್ರಶ್ನೆ ಮಾಡ್ತಿದ್ದಾರೆ. ಡ್ರೋನ್ ಪ್ರತಾಪ್ ಬದಲಾಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ನಂತರ ಇತ್ತೀಚೆಗೆ ಕೆಲವು ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ಮಾಡ್ತಿದ್ದಾರೆ. ಆದ್ರೆ, ಡ್ರೋನ್ ಪ್ರತಾಪ್ ಈಗಲಾದರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಅನ್ನೋ ಸಲಹೆಯನ್ನೂ ಕೆಲವ್ರು ನೀಡಿದ್ದಾರೆ. ಅದೇನೇ ಇರಲಿ, ಡ್ರೋನ್‌ ಪ್ರತಾಪ್‌ ಒಂಥರಾ ಮಲ್ಟಿ ಟ್ಯಾಲೆಂಟೆಡ್ ಸೆಲೆಬ್ರಿಟಿ. ಅತ್ತ ಸೈಂಟಿಸ್ಟ್ , ಇತ್ತ ರಿಯಾಲಿಟಿ ಸ್ಟಾರ್, ಮತ್ತೊಮ್ಮೆ ಡ್ಯಾನ್ಸರ್, ಮತ್ತೊಮ್ಮೆ ಕಾಮಿಡಿಯನ್.. ಒಟ್ನಲ್ಲಿ, ಡ್ರೋನ್ ಟ್ಯಾಲೆಂಟ್ ನ್ನ ಹೊರಗೆ ತರೋ ಮಂದಿಗೆ ಶಹಬ್ಬಾಸ್ ಹೇಳಲೇಬೇಕು ಬಿಡಿ.

Shwetha M

Leave a Reply

Your email address will not be published. Required fields are marked *