ರೂಲ್ಸ್‌ ಬ್ರೇಕ್‌.. ಸಿಡಿದೆದ್ದ ಬಿಗ್ ಬಾಸ್ – ಕಂಟೆಂಟ್‌ ಗಾಗಿ ನಿಯಮ ಉಲ್ಲಂಘನೆ?
ಈ ಸ್ಪರ್ಧಿ ಹೊರ ಹೋಗೋದು ಫಿಕ್ಸ್?

ರೂಲ್ಸ್‌ ಬ್ರೇಕ್‌.. ಸಿಡಿದೆದ್ದ ಬಿಗ್ ಬಾಸ್ – ಕಂಟೆಂಟ್‌ ಗಾಗಿ ನಿಯಮ ಉಲ್ಲಂಘನೆ?ಈ ಸ್ಪರ್ಧಿ ಹೊರ ಹೋಗೋದು ಫಿಕ್ಸ್?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕೂತೂಹಲ ಮೂಡಿಸಿದೆ.. ಈ ಬಾರಿ ಸ್ವರ್ಧಿಗಳು ಒಂದಲ್ಲ ಒಂದು ನಿಯಮ ಉಲ್ಲಂಘನೆ ಮಾಡಿ ಬಿಗ್‌ ಬಾಸ್‌ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದೀಗ ಕೆಲ ಸ್ವರ್ಧಿಗಳು ಘನಘೋರ ತಪ್ಪು ಮಾಡಿದ್ದಾರೆ. ಕೆಲವರು ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ ನೀಡಲಾಗಿದೆ. ಅಷ್ಟಕ್ಕೂ ಸ್ವರ್ಧಿಗಳು ಮಾಡಿರೋ ತಪ್ಪಾದ್ರೂ ಏನು? ಬಿಗ್‌ ಬಾಸ್‌ ನೀಡಿದ ಶಿಕ್ಷೆಯಾದ್ರೂ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಿಯಲ್ ಹೀರೋ KL RAHUL – ವಿದ್ಯಾರ್ಥಿ ಶಿಕ್ಷಣಕ್ಕೆ ಬೆಳಕಾದ ಕನ್ನಡಿಗ

ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಬಹುದೊಡ್ಡ ತಪ್ಪೊಂದು ನಡೆದು ಹೋಗಿದೆ. ಬಿಗ್‌ ಬಾಸ್‌ ಮನೆಗೆ ಅದರದೇ ಆದ ಒಂದಿಷ್ಟು ನಿಯಮಗಳಿವೆ. ಇದನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ತಪ್ಪಿದ್ದಲ್ಲ.  ಬಿಗ್‌ ಬಾಸ್‌ ಮನೆಯಲ್ಲಿ ಎಂದೂ ನಡೆಯದ ಘನಘೋರ ತಪ್ಪು ಈ ಬಾರಿ ನಡೆದಿದೆ. ಇದು ಬಿಗ್‌ ಬಾಸ್‌ ಕೋಪಕ್ಕೆ ಕಾರಣವಾಗಿದೆ.

ಹೌದು, ನಿನ್ನೆಯ ಸಂಚಿಕೆಯಲ್ಲಿ ಬಿಗ್‌ ಬಾಸ್‌ ಸ್ವರ್ಗ ಮತ್ತು ನರಕವಾಸಿಗಳಿಗೆ ವಾರದ ಟಾಸ್ಕ್‌ ನೀಡಲು ಸಿದ್ಧತೆ ನಡೆಸಿದ್ದರು. ಸ್ವರ್ಗದ ಟೀಮ್‌ಗೆ ಕ್ಯಾಪ್ಟನ್‌ ಆಗಿ ತ್ರಿವಿಕ್ರಮ್‌ ಮತ್ತು ನರಕದ ತಂಡಕ್ಕೆ ಕ್ಯಾಪ್ಟನ್‌ ಆಗಿ ಶಿಶಿರ್‌ ಅವರನ್ನು ಸ್ಪರ್ಧಿಗಳೇ ಆಯ್ಕೆ ಮಾಡಿದರು. ಬಿಗ್‌ ಬಾಸ್‌ ನಿಯಮಗಳ ಪ್ರಕಾರ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು. ಇದು ಬಿಗ್‌ ಬಾಸ್‌ನ ಮಹತ್ವದ ನಿಯಮಗಳಲ್ಲಿ ಒಂದು. ಬ್ಲೈಂಡ್ಸ್ ಇಳಿಸಿದಾಗ ಅದರ ಆಚೆ ಟಾಸ್ಕ್‌ಗೆ ಸಿದ್ಧತೆ ನಡೆದಿರುತ್ತದೆ. ಈ ಕಾರಣದಿಂದ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು ಎಂಬ ರೂಲ್ಸ್‌ ಬಿಗ್‌ ಬಾಸ್‌ನಲ್ಲಿದೆ. ಮಾನಸಾ, ಶಿಶಿರ್‌, ಮೋಕ್ಷಿತಾ ಮತ್ತು ಜಗದೀಶ್‌ ಈ ಮೂಲ ನಿಯಮವನ್ನೇ ಬ್ರೇಕ್‌ ಮಾಡಿದ್ದಾರೆ. ಬ್ಲೈಂಡ್ಸ್ ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡಿದ್ದಾರೆ. ಮೊದಲು ಮಾನಸಾ ಈ ಕೆಲಸ ಮಾಡಿದ್ದು, ಶಿಶಿರ್‌ ಅವರ ಬಳಿ ಬಂದು ಟಾಸ್ಕ್‌ ಏನಿರಬಹುದೆಂದು ಚರ್ಚಿಸಿದ್ದಾರೆ. ಬಳಿಕ ಶಿಶಿರ್‌, ಮೋಕ್ಷಿತಾ ಕೂಡ ಬ್ಲೈಂಡ್ಸ್‌ ದಾಟಿ ಆಚೆ ಹೋಗಿ ನೋಡಿದ್ದಾರೆ. ಆ ನಂತರ ಬಟ್ಟೆ ಬದಲಿಸುವ ನೆಪದಲ್ಲಿ ಜಗದೀಶ್‌ ಕೂಡ ಬ್ಲೈಂಡ್ಸ್‌ ದಾಟಿದ್ದಾರೆ..  ಆಗಲೂ ಕ್ಯಾಪ್ಟನ್ ಹಂಸ ಏನೂ ಕೇಳಲಿಲ್ಲ. ಇತ್ತ ಶಿಶಿರ್‌, ಗೋಲ್ಡ್ ಸುರೇಶ್, ಮಾನಸಾ.. ಕೋರ್ ಸ್ಟ್ರೆಂಥ್ ಮೇಲೆ ಟಾಸ್ಕ್ ಇದೆ  ಅಂತ ಸ್ಟ್ರಾಟೆಜಿ ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ‘ಬಿಗ್ ಬಾಸ್’ ಕೆರದ್ದಾರೆ.. ಸ್ವರ್ಧಿಗಳಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್‌ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗೌರವಿಸದ ಸ್ಪರ್ಧಿಗಳಿಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದು ಆದೇಶಿಸಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಸಹ ನಾಮಿನೇಟ್ ಆಗಿದ್ದಿಲ್ಲ. ಆದರೆ ಮೂಲ ನಿಯಮದ ಉಲ್ಲಂಘನೆಯಿಂದಾಗಿ ಈ ವಾರದ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಹಂಸ ಕೂಡ ತಮ್ಮ ಇಮ್ಯನಿಟಿ ಕಳೆದು ಕೊಂಡು ನಾಮಿನೇಟ್‌ ಆಗಿದ್ದಾರೆ.

ಈ ಬೆನ್ನಲ್ಲೇ ದೊಡ್ಮೆನೆಯಲ್ಲಿ ಅಸಮಧಾನದ ಹೊಗೆ ಎದ್ದಿದೆ. ಎಲ್ಲರೂ ನಾಮಿನೇಟ್ ಆದ್ಮೇಲೆ, ಎಲ್ಲರಿಗೂ ರೂಲ್ಸ್‌  ಗೊತ್ತಿಲ್ವಾ? ಯಾಕೆ ಹೀಗೆ ಮಾಡ್ತೀರಾ? ಅಂತ ಐಶ್ವರ್ಯಾ, ಉಗ್ರಂ ಮಂಜು ಪ್ರಶ್ನಿಸಿದರು. ಅಗ,  ಇಲ್ಲೇ ಪ್ಯಾಂಟ್ ಬಿಚ್ಲಾ, ಇಲ್ಲೇ ಚಡ್ಡಿ ಬಿಚ್ಲಾ?  ಅಂತಾರೆ. ಏನು ಹೇಳೋದು ಇವರಿಗೆ? ಎಷ್ಟು ಶಿಕ್ಷೆ ಅಂತ ನಾನು ಕೊಡ್ಲಿ? ಅವರಿಗೆ ಜವಾಬ್ದಾರಿ ಇಲ್ವಾ? ಅಂತ ಜಗದೀಶ್ ಬಗ್ಗೆ ಹಂಸ ತಮ್ಮ ಅಸಮಾಧಾನವನ್ನ ಹೊರಹಾಕಿದ್ರು..

ಇದೀಗ ಮನೆಯಲ್ಲಿರುವ ಎಲ್ಲರೂ ನಾಮಿನೇಟ್‌ ಆದ ಕಾರಣ ಈ ವಾರದ ಎಲಿಮಿನೇಷನ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ತಪ್ಪನ್ನು ಮಾಡಿ ಮನೆಯ ಇತರ ಸದಸ್ಯರಿಗೆ ತೊಂದರೆ ನೀಡಿದ ಕಾರಣ.  ಮಾನಸಾ, ಶಿಶಿರ್‌, ಮೋಕ್ಷಿತಾ ಮತ್ತು ಜಗದೀಶ್‌ ಅವರಲ್ಲೇ ಒಬ್ಬರು ಎಲಿಮಿನೇಟ್‌ ಆಗಬಹುದು ಎಂದು ವೀಕ್ಷಕರು ಚರ್ಚೆ ನಡೆಸುತ್ತಿದ್ದಾರೆ.

ಇನ್ನು ಸ್ವರ್ಧಿಗಳು ಗೊತ್ತಿದ್ದೂ ಗೊತ್ತಿದ್ದೂ ನಿಯಮಗಳನ್ನ ಮುರಿಯುತ್ತಿದ್ದಾರೋ, ಗೊತ್ತಿಲ್ಲದೆ ರೂಲ್ಸ್ ಬ್ರೇಕ್ ಮಾಡ್ತಿದ್ದಾರೋ, ಬೇಕು ಬೇಕು ಅಂತ ಫುಟೇಜ್ ಸಲುವಾಗಿ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೋ.. ಅಥವಾ ಇದ್ರಿಂದಲಾದರೂ ತಾನು ಹೈಲೈಟ್‌ ಆಗ್ಲಿ ಅಂತಾ ಹೀಗೆಲ್ಲಾ ಮಾಡ್ತಿದ್ದಾರೋ ಗೊತ್ತಿಲ್ಲ. ಒಟ್ನಲ್ಲಿ ಕೆಲವರಂತೂ ನಿಯಮಗಳನ್ನ ಲಘುವಾಗಿ ಪರಿಗಣಿಸಿರುವ ಹಾಗಿದೆ.

Shwetha M

Leave a Reply

Your email address will not be published. Required fields are marked *