ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಶೋ- ಹೊರ ರಾಜ್ಯಕ್ಕೆ ಸೆಟ್ ಶಿಫ್ಟ್

ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಶೋ-  ಹೊರ ರಾಜ್ಯಕ್ಕೆ ಸೆಟ್ ಶಿಫ್ಟ್

ಬಿಗ್ ಬಾಸ್ ತಪ್ಪು ಮಾಡಿಲ್ಲ ಅಂದ್ರೂ ಜಾಲಿವುಡ್ ಸ್ಪಡಿಯೋ ಮಾಡಿರೋ ತಪ್ಪಿಗೆ ನೂರಾರು ಕನಸುಗಳನ್ನ ಇಟ್ಕೊಂಡು ಬಂದಿರೋ ಸ್ವರ್ಥಿಗಳು.. 700ಕ್ಕೂ ಹೆಚ್ಚು ಕಾರ್ಮಿಕರು.. ಇದ್ದನ್ನೇ ನಂಬಿಕೊಂಡಿದ್ದ ಸಾಕಷ್ಟು ಜನ ಇವತ್ತು ಕಣ್ಣೀರು ಹಾಕುವಂತೆ ಆಗಿದೆ. ಸದ್ಯಕ್ಕೆ ಈ ಸಲ ಅದ್ಧೂರಿಯಾಗಿ ಹಾಕಿದ್ದ ಕನ್ನಡ ಬಿಗ್​​ಬಾಸ್ ಸೀಸನ್ 12  ಸೆಟ್  ಬಂದ್ ಆಗಿದೆ. ಮಾಲಿನ್ಯ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬಿಗ್​​ಬಾಸ್ ಮನೆ ಇರುವ ಜಾಲಿವುಡ್ ಸ್ಟುಡಿಯೋ ಅನ್ನು ನಿನ್ನೆ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿದ್ದ ಎಲ್ಲ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿದೆ. ಆದರೆ ರೆಸಾರ್ಟ್​​​ನಲ್ಲಿಯೂ ಸಹ ಬಿಗ್​​ಬಾಸ್ ಸ್ಪರ್ಧಿಗಳಿಗೆ ಕೆಲವು ಕಠಿಣ ನಿಯಮಗಳನ್ನು ಹೇರಲಾಗಿದ್ದು, ಅಲ್ಲಿಯೂ ‘ಬಿಗ್​​ಬಾಸ್ ಶೋ’ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬಿಗ್‌ಬಾಸ್ ಶೋ ಎಪಿಸೋಡ್ ಎಷ್ಟು ರೆಡಿ ಇದೆ ಗೊತ್ತಾ? – ಆಮೇಲೆ ಬಿಗ್‌ಬಾಸ್ ಶೋ ಕಥೆಯೇನು?

ಈಗಲ್ ಟನ್ ರೆಸಾರ್ಟ್​​​ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸುಮಾರು 12 ಕೋಣೆಗಳನ್ನು ಸ್ಪರ್ಧಿಗಳಿಗಾಗಿ ಬುಕ್ ಮಾಡಲಾಗಿದೆ. 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿ ಇರಿಸಲಾಗಿದೆ. ಲಭ್ಯವಿರುವ ಮಾಹಿತಿಯಂತೆ, ಬಿಗ್​​ಬಾಸ್ ಸ್ಪರ್ಧಿಗಳ ಕೋಣೆಯಲ್ಲಿರುವ ಟಿವಿಗಳನ್ನು ತೆಗೆದು ಹಾಕಲಾಗಿದೆ. ಹೊರಗಿನ ಪ್ರಪಂಚದೊಂದಿಗೆ ಸಂಪರ್ಕವಿಲ್ಲದೆ ಬಿಗ್​​ಬಾಸ್ ಸ್ಪರ್ಧಿಗಳು ರೆಸಾರ್ಟ್​​ನಲ್ಲಿ ಇರಬೇಕಿದೆ.

ನಿನ್ನೆ ರೆಸಾರ್ಟ್​​ಗೆ ಕರೆದುಕೊಂಡು ಬಂದ ಬಳಿಕ ಸ್ಪರ್ಧಿಗಳೊಟ್ಟಿಗೆ ಬಿಗ್​​ಬಾಸ್ ಆಯೋಜಕರು ಸಭೆ ನಡೆಸಿದ್ದು, ಪರಿಸ್ಥಿತಿ ವಿವರಿಸಿದ್ದಾರೆ. ಎಲ್ಲ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಹಾಗೂ ರೆಸಾರ್ಟ್​​ನಲ್ಲಿ ಇದ್ದಾಗಲೂ ಸಹ ಕೆಲವು ನಿಯಮಗಳ ಪಾಲನೆ ಮಾಡಬೇಕೆಂದು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಟಿವಿ ವೀಕ್ಷಿಸುವಂತಿಲ್ಲ. ಮೊಬೈಲ್ ಬಳಕೆ ಇಲ್ಲ, ಬಿಗ್​​ಬಾಸ್ ಸ್ಪರ್ಧಿಗಳು ಮತ್ತು ಆಯೋಜಕರ ಹೊರತಾಗಿ ಇನ್ಯಾರೊಂದಿಗೂ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ರೆಸಾರ್ಟ್​​ನ ಸಿಬ್ಬಂದಿಯ ಜೊತೆಗೂ ಮಾತುಕತೆ ಆಡುವಂತಿಲ್ಲ ಅನ್ನೋ ನಿಯಮವನ್ನ ಹಾಕಲಾಗಿದೆ.

ಆಯೋಜಕರು ಮತ್ತು ಜಾಲಿವುಡ್ ಸ್ಟುಡಿಯೋನವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಒಂದೊಮ್ಮೆ ನ್ಯಾಯಾಲಯದಲ್ಲಿ ಹಿನ್ನಡೆ ಆದಲ್ಲಿ, ಹೊರ ರಾಜ್ಯದಲ್ಲಿ ರೆಡಿ ಇರುವ ಸೆಟ್​​ಗೆ ಬಿಗ್​​ಬಾಸ್ ಕನ್ನಡ ಕಾರ್ಯಕ್ರಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಸಲಿಗೆ ಆರಂಭದ ಮೂರು ಶೋಗಳು ಹೊರ ರಾಜ್ಯಗಳಲ್ಲಿಯೇ ನಡೆಸಲಾಗಿತ್ತು. ಆ ನಂತರ ಸುದೀಪ್ ಒತ್ತಾಸೆಯ ಕಾರಣಕ್ಕೆ ಕರ್ನಾಟಕದಲ್ಲಿಯೇ ಬಿಗ್​​ಬಾಸ್ ಮನೆ ನಿರ್ಮಾಣ ಆರಂಭಿಸಲಾಯ್ತು. ಈಗ ಇಲ್ಲಿ ಸಮಸ್ಯೆ ಆಗಿರುವ ಕಾರಣ ಮತ್ತೆ ಹೊರರಾಜ್ಯಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ಅಂದ್ರೆ ಬೇರೆ ರಾಜ್ಯದಲ್ಲಿ ಯಾವ ಸೆಟ್‌ ಖಾಲಿ ಇದೆ ಆ  ಸೆಟ್‌ಗೆ ಸದ್ಯ ಕನ್ನಡದ ಬಿಗ್ ಬಾಸ್ ಶಿಫ್ಟ್ ಆಗಲಿದೆ.

ಈ ಮಧ್ಯೆ ರಕ್ಷಿತಾ ಅವರ ವಿಡಿಯೋ ಒಂದು ಸಖತ್ ಟ್ರೋಲ್ ಆಗ್ತಿದೆ. ಬಂದ ದಿನವೇ ಮನೆಯಿಂದ ಹೊರ ಆಗಿದ್ದ ರಕ್ಷೀತಾ ಅವರನ್ನ ಒಂದು ವಾರದ ನಂತ್ರ ಬಿಗ್ ಬಾಸ್‌ ಮನೆಯೊಳಗೆ ಕರೆಸಲಾಗಿತ್ತು. ಆಗ ಸುದೀಪ್ ನೀವು ಯಾರನ್ನ ಮನೆಯಿಂದ ಹೊರ ಹಾಕ್ತೀರಾ ಅಂತ ರಕ್ಷೀತಾ ಶೆಟ್ಟಿಯನ್ನ ಕೇಳಿದ್ರು. ಆಗ ರಕ್ಷೀತಾ ನಾನು ಎಲ್ಲರನ್ನೂ ಹೊರ ಹಾಕ್ತೀನಿ ಅಂತ ಹೇಳಿದ್ರು. ಅವರ ಹೇಳಿದ ಎರಡೇ ದಿನಕ್ಕೆ ಎಲ್ಲರೂ ಮನೆಯಿಂದ ಹೊರ ಹೊಗಿದ್ದಾರೆ. ಇದ್ದನ್ನೇ ಈ ಟ್ರೋಲ್ ಮಾಡ್ತಾ ಇದ್ದು. ಇದ್ರಲ್ಲಿ ರಕ್ಷೀತಾ ಕೈವಾಡ ಇದೆ ಅಂತ ಕೇಳಿ ತಮಾಷೆ ಮಾಡ್ತಿದ್ದಾರೆ. ಆ ವಿಡಿಯೋ ತುಣುಕನ್ನ ವೈರಲ್ ಕೂಡ ಮಾಡ್ತಿದ್ದಾರೆ. ಬಟ್ ಅದೇನೆ ಇದ್ರೂ ಈ ತರ ಆಗಿದ್ದು ನಿಜಕ್ಕೂ ಬೇಸರ, ಯಾಕಂದ್ರೆ ಒಂದು ಶೋ ಅಂದ್ರೆ ಅರಲ್ಲಿ ನೂರಾರು ಜನ ಕೆಲಸ ಮಾಡ್ತಾ ಇರ್ತಾರೆ. ಹೊಸ ಹೊಸ ಕನಸುಗಳನ್ನ ಇಟ್ಟುಕೊಂಡು ಬಂದು ಇರ್ತಾರೆ. ಬಟ್ ಬಿಗ್ ಬಾಸ್ ಇತಿಹಾಸದಲ್ಲಿ ಈ ತರಗ ಘಟನೆ ಇದೇ ಮೊದಲು ಅನ್ಸುತ್ತೆ.. ನಮ್ಮ ಅಧಿಕಾರಿಗಳು ಬಿಗ್ ಬಾಸ್‌ ಮನೆಯ ವಿಷ್ಯದಲ್ಲಿ ತೋರಿಸಿದ ಸ್ಪೀಡ್‌ನ ಬೇರೆ ಕಾರ್ಖಾನೆ, ಹೊಂಡ ಬಿದ್ದ ರೋಡ್ ವಿಷ್ಯದಲ್ಲಿ ತೋರಿಸಿದ್ರೆ ನಮ್ಮ ರಾಜ್ಯ ಇಷ್ಟೋತ್ತಿದೆ  ಸಿಂಗಾಪುರ ಆಗ್ತಾ ಇತ್ತು. ಬಟ್ ಇಲ್ಲಿ ಯಾರು ಯಾರ ಒತ್ತಡಕ್ಕೆ ಮಣಿದ್ರೂ ಅನ್ನೋದು ಕೂಡ ಈಗ ರಾಜ್ಯದಲ್ಲಿ ಚರ್ಚೆ ಆಗ್ತಾ ಇದೆ.

 

Kishor KV