ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ.. ಕಾಮಿಡಿ ಕಿಂಗ್ ಗಿಲ್ಲಿ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ?

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಗೆದ್ದ ಬಳಿಕ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇವೆಲ್ಲದ್ರ ಮಧ್ಯೆ ಕಾಮಿಡಿ ಕಿಂಗ್ ಈಗ ತಮ್ಮ ಫಿಟ್ನೆಸ್ ಕಡೆ ಗಮನಕೊಟ್ಟಿದ್ದಾರೆ. ಜಿಮ್ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಗಿಲ್ಲಿಗೆ ಹೀರೋ ಆಗುವ ಅವಕಾಶ ಸಿಕ್ತಾ ಅನ್ನೋ ಕುತೂಹಲ ಫ್ಯಾನ್ಸ್ಗೆ ಮೂಡಿದೆ.
ಇದನ್ನೂ ಓದಿ: ಜೀಮ್ಗೆ ಬರುವ ಯುವತಿಯರೇ ಸಮೀರ್ ಟಾರ್ಗೆಟ್! – ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ!
ಗಿಲ್ಲಿನಟ ಸಿಕ್ಕಾಪಟ್ಟೆ ಬಿಗ್ಬಾಸ್ ಮನೆಯಲ್ಲಿದ್ದಾಗ ಸೋಫಾ, ಕುರ್ಚಿ ಮೇಲೆಯೇ ಒರಗಿಕೊಂಡು ಕುಳಿತಿರುತ್ತಿದ್ದರು. ಯಾವತ್ತೂ ಫಿಟ್ನೆಸ್ಗೆ ಎಂದಿಗೂ ಪ್ರಾಮುಖ್ಯತೆ ಕೊಟ್ಟಿರ್ಲಿಲ್ಲ. ಚೆನ್ನಾಗಿ ಕಾಣಬೇಕು ಅಂತ ಕನ್ನಡಿ ಮುಂದೆ ನಿಂತವರಲ್ಲ. ಸ್ಲೀವ್ಲೆಸ್ ಬನಿಯಾನ್ ಹಾಕಿಕೊಂಡು ದೊಡ್ಮನೆಯಲ್ಲಿರ್ತಿದ್ರು. ಆದ್ರೀಗ ಗಿಲ್ಲಿ ತಮ್ಮ ಫಿಟ್ನೆಟ್ ಕಡೆಗೆ ಗಮನಕೊಟ್ಟಿದ್ದಾರೆ. ಈಗ ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಗಿಲ್ಲಿಗೆ ಫಿಟ್ನೆಸ್ ಬಗ್ಗೆ ಕಾಳಜಿ ಬಂದಿದ್ದು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ‘ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇದೀಗ ಗಿಲ್ಲಿ ವರ್ಕೌಟ್ ಆರಂಭಿಸಿದ್ದು ನೋಡಿ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎನ್ನುವ ಕುತೂಹಲವೂ ಮೂಡಿದೆ. ಅವರಿಗೆ ಹೀರೋ ಆಗುವುದಕ್ಕಿಂತ, ನಿರ್ದೇಶನದಲ್ಲಿ ಸಾಕಷ್ಟು ಆಸಕ್ತಿ ಇದೆ.

ನೋಡಿರಿ

