ಅಗ್ನಿಪರೀಕ್ಷೆಯಲ್ಲ, ಆಟಾಟೋಪ..  BBKಗೆ ರೀಲ್ಸ್‌ ಸ್ಟಾರ್ಸ್‌ ಬಿಟ್ರೆ ಯಾರಿಲ್ವಾ? – ಸೆಲೆಬ್ರಿಟಿಗಳಿಗಿಲ್ಲದ ಟಾಸ್ಕ್‌ ಇವರಿಗ್ಯಾಕೆ?

ಅಗ್ನಿಪರೀಕ್ಷೆಯಲ್ಲ, ಆಟಾಟೋಪ..  BBKಗೆ ರೀಲ್ಸ್‌ ಸ್ಟಾರ್ಸ್‌ ಬಿಟ್ರೆ ಯಾರಿಲ್ವಾ? – ಸೆಲೆಬ್ರಿಟಿಗಳಿಗಿಲ್ಲದ ಟಾಸ್ಕ್‌ ಇವರಿಗ್ಯಾಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌ 13.. ಈ ಶೋ ಆರಂಭಕ್ಕೂ ಮುನ್ನವೇ ಅಸಲಿ ಆಟ ಶುರುವಾಗಿದೆ. ದೊಡ್ಮನೆಗೆ ಹೋಗಲು ಸಾಮಾನ್ಯ ಜನರ ಆಯ್ಕೆಗಾಗಿ ಅಗ್ನಿಪರೀಕ್ಷೆ ನಡೆಸಲಾಗುತ್ತಿದೆ. ಈ ಅಗ್ನಿಪರೀಕ್ಷೆಯ ಪ್ರೋಮೋಗಳನ್ನ ಬ್ಯಾಕ್‌ಟು ಬ್ಯಾಕ್‌ ರಿಲೀಸ್‌ ಮಾಡಲಾಗ್ತಿದೆ. ಆದ್ರೀಗ ವೀಕ್ಷಕರು ಮಾತ್ರ ಶೋ ವಿರುದ್ಧ ಅಸಮಾಧಾನ ಹೊರ ಹಾಕ್ತಿದ್ದಾರೆ. ಜನಸಾಮಾನ್ಯರು ಅಂದ್ರೆ ಯಾರು? ರೀಲ್ಸ್‌ ಸ್ಟಾರ್ಸ್‌ಗಳ? ಆಯ್ಕೆ ಪ್ರಕ್ರಿಯೆಯಲ್ಲಿ ವಿನಯ್, ಸಂಗೀತಾ, ಚಂದನ್‌, ಶ್ರುತಿ ಅವರನ್ನ ಬಿಟ್ಟು ಬೇರೆ ಯಾರೂ ಜಡ್ಜಸ್‌ ಆಗಿ ಸಿಕ್ಕಿಲ್ವಾ? ಸೆಲೆಬ್ರಿಟಿಗಳಿಗೆ ಇಲ್ಲದ ಟಾಸ್ಕ್‌ಗಳು ಸಾಮಾನ್ಯ ಜನರಿಗೆ ಯಾಕೆ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ: ಬ್ರಹ್ಮಗಂಟು ಧಾರಾವಾಹಿ ಅಂತ್ಯ – ಕಲಾವಿದರು ಭಾವುಕ.. ದೀಪಾ ವಿದಾಯ ಹೇಳಿದ್ದು ಹೇಗೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ದೊಡ್ಮನೆಗೆ ಹೋಗಲು ಸಾವಿರಾರು ಮಂದಿ ಅವರ ಪರಿಚಯದ ವಿಡಿಯೋಗಳನ್ನ ಕಳುಹಿಸಿದ್ರು. ಅಂತಿಮವಾಗಿ 60 ಜನರನ್ನ ಸೆಲೆಕ್ಟ್‌ ಮಾಡಲಾಗಿದೆ. ಇದೀಗ ಬಿಗ್‌ಬಾಸ್‌ ಅಗ್ನಿಪರೀಕ್ಷೆಯಲ್ಲಿ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ, ಶ್ರುತಿ, ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಈ ಸೀಸನ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡಲಿದ್ದಾರೆ. 60 ಸಾಮಾನ್ಯ ಜನರಿಗೆ ಇದೀಗ ವೇದಿಕೆಯಲ್ಲೇ ಟಫ್‌ ಟಾಸ್ಕ್‌ಗಳನ್ನ ನೀಡಲಾಗ್ತಿದೆ. ಇದ್ರ ಪ್ರೋಮೋ ಈಗಾಗಲೇ ರಿಲೀಸ್‌ ಮಾಡಲಾಗಿದೆ. ಈ ಪ್ರೋಮೋಗಳನ್ನ ನೋಡಿದ ವೀಕ್ಷಕರು ಶೋ ವಿರುದ್ದ ಸಿಟ್ಟಾಗಿದ್ದಾರೆ. ಜಡ್ಜಸ್‌ ಹಾಗೂ ಶೋ ಟೀಂ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ.

ಬಿಗ್‌ಬಾಸ್‌ ಮನೆ ಅಂದ್ಮೇಲೆ ವಿಭಿನ್ನ ಕ್ಷೇತ್ರದ ವಿಭಿನ್ನ ವ್ಯಕ್ತಿತ್ವದ ಜನರು ಇದ್ದೇ ಇರ್ತಾರೆ. ಇದೀಗ ದೊಡ್ಮನೆಗೆ ಹೋಗಲು ಸಾಮಾನ್ಯ ಜನರನ್ನ ಆಯ್ಕೆ ಮಾಡಲಾಗ್ತಿದೆ. ರಿಲೀಸ್‌ ಆಗಿರುವ ಪ್ರೋಮೋದಲ್ಲಿ, ಅಗ್ನಿಪರೀಕ್ಷೆಯ ಟಾಸ್ಕ್‌ಗಳು ಟಫ್‌ ಆಗಿದೆ. ಸ್ಪರ್ಧಿಗಳ ಸಹನೆ, ದೈಹಿಕ ಸಾಮರ್ಥ್ಯ, ಆಟದ ತಂತ್ರ ಹಾಗೂ ನಡೆನುಡಿಯನ್ನ ಪರೀಕ್ಷಿಸಲು ಜಡ್ಜ್‌ಗಳು ನೇರವಾಗಿ ವೇದಿಕೆಯಲ್ಲೇ ವಿಭಿನ್ನ ಟಾಸ್ಕ್‌ಗಳನ್ನ ನೀಡಿದ್ದಾರೆ. ಮುಖಕ್ಕೆ ಸಗಣಿ ಹಚ್ಚಿಕೊಳ್ಳೋದು, ತೆಳ್ಳನೆಯ ಹೆಣ್ಣುಮಗಳಿಗೆ ದೊಡ್ಡ ಟಯರ್ ಎತ್ತುವ ಟಾಸ್ಕ್, ಗಿನ್ನಿಸ್‌ ರೆಕಾರ್ಡ್‌ನ ಹರಿದು ಹಾಕೋದು, ಮೊಬೈಲ್‌ ನ ಕಲ್ಲಿಗೆ ಹೊಡೆದು ಪುಡಿಪುಡಿ ಮಾಡೋದು, ತಲೆ ಬೋಳಿಸಿಕೊಳ್ಳುವ ಟಾಸ್ಕ್ ಕೂಡ ಕೊಟ್ಟಿದ್ದಾರೆ. ಈ ಟಾಸ್ಕ್‌ಗಳನ್ನ ಪೂರ್ಣಗೊಳಿಸಲು ಸ್ಪರ್ಧಿಗಳು ಹರಸಾಹಸ ಪಡ್ತಿರೋದು ಪ್ರೋಮೋದಲ್ಲಿ ಕಾಣಿಸುತ್ತಿದೆ. ಸ್ಪರ್ಧಿಗಳ ಪ್ರತಿಯೊಂದು ನಡೆ ಹಾಗೂ ವರ್ತನೆಯನ್ನ ತೀರ್ಪುಗಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೆಲ ಸ್ಪರ್ಧಿಗಳ ಮೇಲೆ ಜಡ್ಜಸ್‌ ಸಿಟ್ಟಾಗಿದ್ದಾರೆ. ಅದ್ರಲ್ಲಿ ಅಮುಕು ಡುಮುಕು ಮಂಜ, ಗಂಗಕ್ಕ ವಿರುದ್ದ ಜಡ್ಜಸ್‌ ಸಿಟ್ಟಾಗಿರುವುದು ಪ್ರೋಮೋದಲ್ಲಿ ದೊಡ್ಡ ಹೈಲೈಟ್ ಆಗಿದೆ. ಹೌದು.. ಅಮುಕು ಡುಮುಕು ಮಂಜುಗೆ ಸಂಗೀತಾ ಇಂಪ್ರೆಸ್‌ ಮಾಡಲು ಹೇಳಲಾಗಿದೆ. ಆದ್ರೆ ಮಂಜು, ಇಲ್ಲಿ ನಾನು ಯಾರನ್ನೂ ಇಂಪ್ರೆಸ್‌ ಮಾಡೋಕೆ ಬಂದಿಲ್ಲ. ನಾನು ಹೀಗೆ ಇರೋದು ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಕೋಪಗೊಂಡ ವಿನಯ್‌ ಆಗಲ್ಲ ಅಂದರೆ, ಹೋಗ್ತಾ ಇರು ಎಂದಿದ್ದಾರೆ. ಆ ಕ್ಷಣದಲ್ಲೇ ಸ್ಟೇಜ್‌ನಿಂದ ಹೊರನಡೆದಿದ್ದಾರೆ.

ಇನ್ನು ಸೋಶಿಯಲ್‌ ಮೀಡಿಯಾ ಸ್ಟಾರ್‌ ಗಂಗಕ್ಕ ವರ್ತನೆಗೆ ಕೂಡ ಸಂಗೀತಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನಾನು ಪಕ್ಕಾ ಎಂಟರ್‌ಟೈನ್‌ಮೆಂಟ್‌ ನೀಡ್ತೀನಿ ಮೇಡಂ ಎನ್ನುತ್ತಾ ವೇದಿಕೆಯ ನೆಲದ ಮೇಲೆಯೇ ಬಿದ್ದು ಬೇಡಿಕೊಳ್ಳಲು ಆರಂಭಿಸಿದರು. ಇದನ್ನ ನೋಡಿದ ಸಂಗೀತಾ ಸರಿಯಾಗೇ ಕ್ಲಾಸ್‌ ತೆಗೆದುಕೊಂಡ್ರು.  ನಿಮ್ಮ ಈ ಕ್ರಿಂಜ್‌ ನಡವಳಿಕೆಯನ್ನ ನಾವು ಎಂಟರ್‌ಟೈನ್‌ಮೆಂಟ್‌ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಗ್‌ ಬಾಸ್‌ನಲ್ಲಿ ಇಂತಹ ನಡವಳಿಕೆಯನ್ನ ನಾವು ಬಯಸುವುದಿಲ್ಲ ಖಡಕ್‌ ಆಗೇ ಹೇಳಿ ರಿಜೆಕ್ಟ್‌ ಮಾಡಿದ್ರು.

ಆದ್ರೀಗ ಈ ಶೋ ವಿರುದ್ದ ವೀಕ್ಷಕರು ಆರಂಭದಲ್ಲೇ ಸಿಟ್ಟಾಗಿದ್ದಾರೆ. Common People ಯಾರೂ ಇಲ್ಲ ಅನ್ನೋದು ಪ್ರೋಮೋ ನೋಡಿದ್ರೆ ಗೊತ್ತಾಗುತ್ತೆ. Almost ಎಲ್ಲರೂ ಇನ್ಸ್ಟಾಗ್ರಾಂ ಇನ್ಫುಯೆನ್ಸರ್ಸ್‌ ಇದ್ದಾರೆ. ಇವರೆಲ್ಲಾ ಬಿಟ್ಟು ಬೇರೆ ಯಾರು ಸಿಕ್ಕಿಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ರೆ, ಇನ್ನೂ ಕೆಲವರು ಅಗ್ನಿ ಪರೀಕ್ಷೆಯಲ್ಲಿ ಜಡ್ಜಸ್‌ ಸ್ಥಾನಕ್ಕೆ ಈ ನಾಲ್ವರು ಅರ್ಹರಲ್ಲ. ಅವರ ಬದಲು ಬೇರೆ ಯಾರನ್ನಾದ್ರೂ ಕರೆಸಬಹುದಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಆಡಿಷನ್‌ ಅನ್ನೋ ಹೆಸರಿನಲ್ಲಿ ಸ್ಪರ್ಧಿಗಳಿಗೆ ಅವಮಾನ ಮಾಡಲಾಗ್ತಿದೆ. ಮುಖಕ್ಕೆ ಸೆಗಣಿ ಬಳಿಯೋದು, ಗಿನ್ನಿಸ್‌ ರೆಕಾರ್ಡ್‌ನ ಹರಿಯೋದು, ಮೊಬೈಲ್‌ನ ಒಡೆದು ಹಾಕೋದು ಎಷ್ಟು ಸರಿ. ಸೆಲೆಬ್ರೆಟಿಗಳಿಗೆ ನೀವು ಇಂತಹ ಟಾಸ್ಕ್‌ಗಳನ್ನ ಕೊಡ್ತೀರಾ ಅಂತ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.

ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ಬಿಗ್ ಬಾಸ್‌ ಮನೆಗೆ ಹೋಗಲು ಅರ್ಹತೆ ಪಡೆಯುವವರು ಯಾರು? ಜಡ್ಜ್‌ಗಳ ಕಠಿಣ ಪರೀಕ್ಷೆಯಲ್ಲಿ ಗೆದ್ದು, ಪ್ರೇಕ್ಷಕರ ಮನ ಗೆಲ್ಲಲು ಯಾರು ಸಫಲರಾಗಲಿದ್ದಾರೆ? ಅನ್ನೋ ಕ್ಯೂರಿಯಾಸಿಟಿ ಕೂಡ ವೀಕ್ಷಕರಲ್ಲಿದೆ.

Shwetha M

Leave a Reply

Your email address will not be published. Required fields are marked *