ಕರಾವಳಿ – ಮಲೆನಾಡು ಭಾಗದ ಜನರಿಗೆ ಗುಡ್‌ನ್ಯೂಸ್!‌ – ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗದ ಬಗ್ಗೆ ಬಿಗ್‌ಅಪ್‌ಡೇಟ್!‌

ಕರಾವಳಿ – ಮಲೆನಾಡು ಭಾಗದ ಜನರಿಗೆ ಗುಡ್‌ನ್ಯೂಸ್!‌ – ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗದ ಬಗ್ಗೆ ಬಿಗ್‌ಅಪ್‌ಡೇಟ್!‌

ಕರಾವಳಿ ಭಾಗದ ಜನರಿಗೆ ಗುಡ್‌ನ್ಯೂಸ್‌ ಇದೆ. ಇದೀಗ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದೆ. ಇದೀಗ ರೈಲು ಮಾರ್ಗದ ಕುರಿತಂತೆ ರೈಲ್ವೇ ಇಲಾಖೆಯೂ ಈಗಾಗಲೇ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಿದೆ.

ಇದನ್ನೂ ಓದಿ: RR ರಿಯಲ್ ವಾರಿಯರ್ ವೈಭವ್ ಸೂರ್ಯವಂಶಿ – ಬಾಸ್ ಬೇಬಿ ಏಕಾಂಗಿಯಾಗಿ ಕಣ್ಣೀರು ಸುರಿಸಿದ್ಯಾಕೆ?

ಶಿವಮೊಗ್ಗ-ಮಂಗಳೂರು ರೈಲು ಮಾರ್ಗಕ್ಕಾಗಿ ರೈಲ್ವೇ ಇಲಾಖೆ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಿದೆ. ಶಿವಮೊಗ್ಗ – ಮಂಗಳೂರು ರೈಲು ಮಾರ್ಗ ಬರೋಬ್ಬರಿ 332 ಕಿಲೋಮೀಟರ್ ಉದ್ದವಿರಲಿದ್ದು, ಈ ನೂತನ ರೈಲ್ವೇ ಟ್ರ್ಯಾಕ್‌ಗೆ ಸುಮಾರು 3,300 ಕೋಟಿ ರುಪಾಯಿ ವೆಚ್ಚವಾಗಬಹುದು. ಇದೀಗ ಈ ಬೃಹತ್ ಯೋಜನೆಯ ಕುರಿತಂತೆ ಡಿಪಿಆರ್‌ ತಯಾರಿಕೆಗೆ ಟೆಂಡರ್‌ ಕರೆಯಲು ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.

ಈ ಮೊದಲು 2018ರ ರೈಲ್ವೇ ಬಜೆಟ್‌ನಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ಮೊದಲ ಬಾರಿಗೆ ಶಿವಮೊಗ್ಗ-ಮಂಗಳೂರು ಮಾರ್ಗದ ಕುರಿತಂತೆ ಪ್ರಸ್ತಾಪ ಮಾಡಿದ್ದರು. ಇದು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ಐದು ಜಿಲ್ಲೆಯ ಜನರಿಗೆ ನೇರ ರೈಲು ಸಂಪರ್ಕ ಸಿಗುವಂತೆ ಮಾಡಲಿದೆ.

ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅರಸಾಳು(ಮಾಲ್ಗುಡಿ ಮ್ಯೂಸಿಯಂ)ವಿನಿಂದ ರಿಪ್ಪನ್‌ಪೇಟೆ, ಹುಂಚ, ಕೋಣಂದೂರು, ತೀರ್ಥಹಳ್ಳಿ, ಶೃಂಗೇರಿ ಮಾರ್ಗವಾಗಿ ಮಂಗಳೂರು ತಲುಪುವಂತೆ ನೂತನ ಟ್ರ್ಯಾಕ್ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ರೈಲ್ವೇ ಮಾರ್ಗವು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬರುವುದರಿಂದ ಈ ಮಾರ್ಗ ಅನುಷ್ಟಾನಕ್ಕೆ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಒಪ್ಪಿಗೆ ಪಡೆಯುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಈಗಾಗಲೇ ಈಗಾಗಲೇ ತಾಳಗುಪ್ಪದಿಂದ ಹೊನ್ನಾವರ ರೈಲ್ವೇ ಮಾರ್ಗ ಯೋಜನೆ ಕುಂಟುತ್ತಲೇ ಸಾಗುತ್ತಿದೆ.

Shwetha M

Leave a Reply

Your email address will not be published. Required fields are marked *