ಸೆ.1ರ ಬಳಿಕ BPL ಕಾರ್ಡ್ ರದ್ದು – e-KYC ಮಾಡಿಸದವ್ರಿಗೆ ಸರ್ಕಾರದ ಶಾಕ್
ಕಾರ್ಡ್ ಬೇಕಂದ್ರೆ ಏನು ಮಾಡಬೇಕು?
ಬಿಪಿಎಲ್ ಕಾರ್ಡ್ಗಳ ಮೂಲಕ ರಾಜ್ಯದಲ್ಲಿ ಸಾಕಷ್ಟು ಜನ ಸರ್ಕಾರದಿಂದ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಇಂಥವ್ರ ಪೈಕಿ ಶ್ರೀಮಂತರೂ ಕೂಡ ಫೆಸಿಲಿಟೀಸ್ ಪಡೆದುಕೊಳ್ಳುತ್ತಿದ್ದಾರೆ. ಸೋ ಅರ್ಹರನ್ನ ಹೊರತುಪಡಿಸಿ ಉಳಿದವ್ರನ್ನ ಜರಡಿ ಹಿಡಿಯಬೇಕು ಅನ್ನೋ ಉದ್ದೇಶದಿಂದಲೇ ಸರ್ಕಾರ ಹೊಸ ಶಾಕ್ ಕೊಟ್ಟಿದೆ. ಅಕ್ರಮವಾಗಿ, ಸುಳ್ಳು ಮಾಹಿತಿ ನೀಡಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ, ಅಂತಹವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕೆಲಸಗಳು ನಡೆಯುತ್ತಿದೆ. ಬಿಪಿಎಲ್ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಅಂದ್ರೆ ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ ಎಂದರ್ಥ. ಆಗಸ್ಟ್ 31 ರೊಳಗೆ ಇದನ್ನ ಮಾಡಿಸದೇ ಇದ್ದರೆ, ಬಿಪಿಎಲ್ ಪಡಿತರ ಚೀಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ. ಜತೆಗೆ ಕಾರ್ಡ್ ಕೂಡ ರದ್ದಾಗಲಿದೆ. ಅಷ್ಟಕ್ಕೂ ಬಿಪಿಎಲ್ ಕಾರ್ಡ್ ಇರುವವರು ಮಾಡಬೇಕಾಗಿರೋದು ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 15 ಜನ್ರ ಟೀಂ.. 22 ಪ್ಲೇಯರ್ಸ್ ಫೈಟ್ – ಬಾಂಗ್ಲಾ ಟೆಸ್ಟ್ ಸರಣಿಗೆ ಯಾರೆಲ್ಲಾ ಆಯ್ಕೆ?
ಇಕೆವೈಸಿಗೆ ಡೆಡ್ ಲೈನ್!
ಕಳೆದ ಹಲವು ವರ್ಷಗಳಿಂದ ಯಾರು ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿ ಮಾಡಿಲ್ಲವೋ ಅಂಥವ್ರು ಆಗಸ್ಟ್ 31 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ ಮಾಡಿಸಬೇಕು. ಅಂದ್ರೆ ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ ಇಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಮಾಹಿತಿಯನ್ನು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿಯೇ ಮಾಡಿಸಿಕೊಳ್ಳಬೇಕು. ಈಗಾಗಲೇ ನಿಗದಿಪಡಿಸಿದ ಆಗಸ್ಟ್ 31 ರ ಕೊನೆಯ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲಾಗುತ್ತದೆ. ಹೀಗಾಗಿ ನಿಮ್ಮ ಹೆಸರು ಇರುವ ನ್ಯಾಯ ಬೆಲೆ ಅಂಗಡಿಗೆ ತೆರಳಿ ಅಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಈಗಾಗಲೇ ಕೆವೈಸಿಯನ್ನು ಮಾಡಿಸಿದ್ದರೆ ಮತ್ತೆ ಮಾಡಿಸೋದು ಬೇಕಾಗಲ್ಲ. ಮಾಡಿಸದೇ ಇದ್ದರೆ ನ್ಯಾಯ ಬೆಲೆ ಅಂಗಡಿಗೆ ಮಾಹಿತಿ ನೀಡಿ ನಿಮ್ಮ ಫಿಂಗರ್ಪ್ರಿಂಟ್ ಕನ್ಫರ್ಮೇಶನ್ ಮಾಡಬೇಕು. ದ್ದು ಖಚಿತ ಮಾಡಿಕೊಳ್ಳಿರಿ. ಇನ್ನು ಇಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಫ್ರೀ ಆಗಿದೆ. ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರು ಕೂಡಲೇ ಹಿಂತಿರುಗಿಸಬೇಕು ಅಂತಾನೂ ಹೇಳಲಾಗಿದೆ.
ಸದ್ಯ ರಾಜ್ಯದಲ್ಲಿ ಹಾಲಿ 1 ಕೋಟಿ 27 ಲಕ್ಷದ 35 ಸಾವಿರದ 786 ಬಿಪಿಎಲ್ ಕಾರ್ಡ್‌ಗಳಿದ್ದು, 4 ಕೋಟಿ 36 ಲಕ್ಷದ 84 ಸಾವಿರದ 635 ಜನರು ಸೌಲಭ್ಯ ಪಡೆಯುತ್ತಿದ್ದಾರೆ. ಹಾಗೇ ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ 3 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಕೆಸಿದ್ದಾರೆ. ಆದ್ರೆ ಕೆಲವ್ರು ಅರ್ಹರಲ್ಲದಿದ್ರೂ ಸೌಲಭ್ಯಗಳನ್ನ ಪಡೀತಿದ್ದಾರೆ. ಹೀಗಾಗಿ ಅಕ್ರಮ ತಡೆಗಟ್ಟಲು ಇಕೆವೈಸಿ ಕನ್ಫರ್ಮೇಷನ್ಗೆ ಡೆಡ್ಲೈನ್ ನೀಡಲಾಗಿದೆ. ಅನರ್ಹ ಪಡಿತರ ಚೀಟಿದಾರರು ತಾವೇ ಸ್ವಯಂ ಪ್ರೇರಣೆಯಿಂದ ಆಯಾ ತಹಶೀಲ್ದಾರ್ ಕಚೇರಿಗೆ ಬಿಪಿಎಲ್ ಪಡಿತರ ಚೀಟಿಯನ್ನು ಆಗಸ್ಟ್ 31 ರೊಒಳಗೆ ಅಪ್‌ಡೇಟ್ ಮಾಡಿದಲ್ಲಿ ಯಾವುದೇ ದಂಡ ವಿಧಿಸದೇ ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿ ಕೊಡಲಾಗುವುದು. ಒಂದು ವೇಳೆ ಆಗಸ್ಟ್ 31ರ ನಂತರವೂ ಸಲ್ಲಿಸದಿದ್ದಲ್ಲಿ ದಂಡವನ್ನು ವಿಧಿಸಲಾಗುವುದೆಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.