BMTC ಬಸ್ ನಲ್ಲಿ ಕಂಡಕ್ಟರ್ ಸಜೀವದಹನ ಕೇಸ್ ಗೆ ಬಿಗ್ ಟ್ವಿಸ್ಟ್! – ಸಾವಿನ ಹಿಂದಿನ ಸತ್ಯ ಬಯಲು

BMTC ಬಸ್ ನಲ್ಲಿ ಕಂಡಕ್ಟರ್ ಸಜೀವದಹನ ಕೇಸ್ ಗೆ ಬಿಗ್ ಟ್ವಿಸ್ಟ್! – ಸಾವಿನ ಹಿಂದಿನ ಸತ್ಯ ಬಯಲು

ಬೆಂಗಳೂರು:  ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್​ಗೆ ಬೆಂಕಿ ತಗುಲಿ ನಿರ್ವಾಹಕ ಸಜೀವದಹನವಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ವೇಳೆ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್10 ರಂದು ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್​ ನಿಲ್ದಾಣದಲ್ಲಿ ಡಿಪೋ 31ಕ್ಕೆ ಸೇರಿದ್ದ ಬಿಎಂಟಿಸಿ ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಕಂಡಕ್ಟರ್​ ಮುತ್ತಯ್ಯ ಸ್ವಾಮಿ ಸಜೀವ ದಹನವಾಗಿದ್ದರು. ಘಟನೆ ನಡೆದ 13 ದಿನಗಳ ಬಳಿಕ ಈ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಸೈಬರ್ ಕ್ರೈಂ – ಕರ್ನಾಟಕದಲ್ಲಿ 2 ಸೈಬರ್ ಸೆಕ್ಯೂರಿಟಿ ಲ್ಯಾಬ್

ಪೊಲೀಸರು ತನಿಖೆ ವೇಳೆ ಮೃತ ಕಂಡಕ್ಟರ್​ ಮುತ್ತಯ್ಯ ಸ್ವಾಮಿ ಅವರ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ದುರಂತ ಸಂಭವಿಸಿದ ಸ್ಥಳದಿಂದ ಕೊಂಚ ದೂರ ಇರುವ ಪೆಟ್ರೋಲ್ ಬಂಕ್ ಖಾತೆಗೆ 700 ರೂಪಾಯಿ ಹಣ ವರ್ಗಾವಣೆಯಾಗಿದ್ದು ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ಖರೀದಿಸಿದ್ದಾರೆ. ಮುಂಜಾನೆ ಮುತ್ತಯ್ಯ ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಅವಘಡದ ಮುಂದಿನ ದಿನ ಬಸ್ ಹಾಲ್ಟ್ ಆದ ಬಳಿಕ ಮುತ್ತಯ್ಯ, ಡ್ರೈವರ್ ಪ್ರಕಾಶ್ ನನ್ನ ಮಲಗುವಂತೆ ಹೇಳಿ ಕಳುಹಿಸಿದ್ದರು. ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲದೇ ಬಸ್​ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಆಗಿದ್ದವು ಎನ್ನುವುದು ಕೂಡ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಬೆಂಕಿ ಹೊತ್ತಿಕೊಂಡ ನಂತರ ಬೆಂಕಿಯ ತೀವ್ರತೆ ಮತ್ತು ಹೊಗೆಯಿಂದಾಗಿ ಕಿಟಕಿ ಗಾಜುಗಳು ಸ್ಪೋಟಗೊಂಡಿವೆ. ಇದಲ್ಲದೆ ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು, ಮುತ್ತಯ್ಯ ಹಣಕಾಸು ವಿಚಾರದ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿದ್ದು, ಎಫ್ಎಸ್ಎಲ್ ರಿಪೋರ್ಟ್ ನಿಂದ ಅಂತಿಮ ಸತ್ಯ ತಿಳಿಯಲಿದೆ.

suddiyaana