ತಾನೇ ತಾಳಿ ಕಟ್ಟಿಕೊಂಡ ನಿತ್ಯಾ – ಕರ್ಣನ ವಿವಾಹಕ್ಕೆ ಬಿಗ್ ಟ್ವಿಸ್ಟ್

ತಾನೇ ತಾಳಿ ಕಟ್ಟಿಕೊಂಡ ನಿತ್ಯಾ – ಕರ್ಣನ ವಿವಾಹಕ್ಕೆ ಬಿಗ್ ಟ್ವಿಸ್ಟ್

ಕರ್ಣ ಸೀರಿಯಲ್‌ನಲ್ಲಿ ನಡೆದ ಟ್ವಿಸ್ಟ್‌ಗೆ ವೀಕ್ಷಕರು ಖುಷಿಯಾಗಿದ್ದಾರೆ. ನಿತ್ಯಾ ಮತ್ತು ನಿಧಿ ದೂರ ಆಗಲ್ಲ. ಒಂದಲ್ಲಾ ಒಂದು ದಿನ ಇವರೇ ಗಂಡ ಹೆಂಡತಿ ಆಗುತ್ತಾರೆ ಎಂಬ ನಂಬಿಕೆ ವೀಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ:ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ

ನಿತ್ಯಾ-ಕರ್ಣ ಮದುವೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಿತ್ಯಾ ತಾನೇ ತಾಳಿ ಕಟ್ಟಿಕೊಂಡಿದ್ದು, ಈ ಸತ್ಯ ನಿಧಿಗೆ ತಿಳಿದಿಲ್ಲ. ಕರ್ಣನ ತಂದೆ ರಮೇಶ್ ಮಾಡಿದ ಕುತಂತ್ರದಿಂದಾಗಿ ನಿತ್ಯಾ ಹಾಗೂ ಕರ್ಣ ವಿವಾಹ ಆಗಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗಲೇ ನಿತ್ಯಾ ಹಾಗೂ ಕರ್ಣನ ಮದುವೆ ವಿಚಾರಕ್ಕೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ಇಬ್ಬರೂ ನಿಜವಾಗಿಯೂ ವಿವಾಹ ಆಗುತ್ತಿಲ್ಲ. ನಿತ್ಯಾ ಹಾಗೂ ತೇಜಸ್ ಮದುವೆ ಫಿಕ್ಸ್ ಆಗಿತ್ತು. ಆದರೆ, ಅವನನ್ನು ಕಿಡ್ನ್ಯಾಪ್ ಮಾಡಿ, ನಿತ್ಯಾ ಹಾಗೂ ಕರ್ಣ ಮದುವೆ ಆಗುವಂತೆ ಮಾಡಿದ್ದು ರಮೇಶ್. ಕರ್ಣ ಹಾಗೂ ನಿತ್ಯಾ ವಿವಾಹದ ಬಗ್ಗೆ ನಿಧಿ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದ್ದಿದ್ದಂತೂ ಸುಳ್ಳಲ್ಲ. ಈಗ ಅವರಿಗೆ ಒಂದು ಖುಷಿ ಸುದ್ದಿ ಸಿಕ್ಕಿದೆ ಎಂದೇ ಹೇಳಬಹುದು. ನೀವು ನನ್ನ ಯಾವಾಗಲೂ ದೂರವೇ ನಿಲ್ಲಿಸಿದ್ದೀರಾ. ನಾನು ನಿಮ್ಮನ್ನು ಮದುವೆ ಆಗೋದು ನಿಮಗೆ ಕನಸಲ್ಲೂ ಇಷ್ಟ ಇಲ್ಲ. ಈಗ ಮುಖ್ಯ ಎನಿಸೋದು ನನ್ನಜ್ಜಿ ಹಾಗೂ ನಿಮ್ಮಜ್ಜಿ ಜೀವ’ ಎಂದು ಕರ್ಣ ಹೇಳಿದನು. ಆ ಬಳಿಕ ನಿತ್ಯಾ ಸಾಕಷ್ಟು ನೊಂದುಕೊಂಡಳು. ‘ನನ್ನಂತವಳಿಗೆ ಸಾವೇ ಪರಿಹಾರ’ ಎಂದು ನಿತ್ಯಾ ಹೇಳಿದಳು. ಆಗ ಕರ್ಣ ಒಂದು ಐಡಿಯಾ ನೀಡಿದನು. ‘ನಿತ್ಯಾ ಬಳಿ ನೀವೇ ತಾಳಿ ಕಟ್ಟಿಕೊಳ್ಳಿ’ ಎಂದು ಕರ್ಣ ಹೇಳಿದ್ದಾನೆ. ನಿತ್ಯಾ ಅದೇ ರೀತಿ ಮಾಡಿದ್ದಾಳೆ. ನಾಲ್ಕು ಗೋಡೆಯ ಮಧ್ಯೆಯೇ ಇದು ನಡೆದು ಹೋಗಿದೆ. ಹೀಗಾಗಿ, ಹೆಚ್ಚು ಚಿಂತಿಸೋ ಅಗತ್ಯವೇ ಇಲ್ಲ ಎನ್ನಬಹುದು. ಆದರೆ, ಈ ವಿಚಾರ ನಿಧಿಗೆ ಇನ್ನೂ ತಿಳಿದಿಲ್ಲ. ಅದು ಅವಳಿಗೆ ತಿಳಿಯಲು ಸಾಕಷ್ಟು ಸಮಯ ಬೇಕಾಗಬಹುದು. ಸದ್ಯಕ್ಕಂತೂ ನಿಧಿ ಪ್ರೀತಿ ಕೈತಪ್ಪಿದ ನೋವಲ್ಲಿ ಇದ್ದಾಳೆ. ಆದರೆ, ಕರ್ಣ ಮಾತ್ರ ನೋಡುವವರ ದೃಷ್ಟಿಯಲ್ಲಿ ನಿತ್ಯಾಳ ಗಂಡ ಆಗಿದ್ದಾನೆ. ಮನಸಾರೆ ಇಷ್ಟಪಟ್ಟ ನಿಧಿಗಾಗಿ ತನ್ನ ಪ್ರೀತಿ ಉಳಿಸಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಈ ಕಥೆ ಹೇಗೆ ಸಾಗುತ್ತದೆ ಕಾದು ನೋಡಬೇಕು.

Sulekha