ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿದ್ದು ಯಾರು? – ಸ್ಪೋಟಕ ಹೇಳಿಕೆ ಕೊಟ್ಟ ಪ್ರಜ್ವಲ್‌ ರೇವಣ್ಣ ಕಾರ್‌ ಡ್ರೈವರ್‌!

ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿದ್ದು ಯಾರು? – ಸ್ಪೋಟಕ ಹೇಳಿಕೆ ಕೊಟ್ಟ ಪ್ರಜ್ವಲ್‌ ರೇವಣ್ಣ ಕಾರ್‌ ಡ್ರೈವರ್‌!

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಹಾಗೂ ಜೆಡಿಎಸ್‌ನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜ್ಯದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಲು ಎಸ್‌ಐಟಿ ತಂಡ ನಿರ್ಧರಿಸಿದೆ. ಇದೀಗ ಪ್ರಜ್ವಲ್ ರೇವಣ್ಣ ಡ್ರೈವರ್ ಆಗಿದ್ದ ಕಾರ್ತಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಯಾರು ಅನ್ನೋದರ ಬಗ್ಗೆಯೇ ಚರ್ಚೆಯಾಗುತ್ತಿದೆ.

ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಅವರ ಬಳಿ 15 ವರ್ಷ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಇದೀಗ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಎಸ್‌ಐಟಿ ವಿಚಾರಣೆಗೆ ತೆರಳುವ ಮುನ್ನ ಡ್ರೈವರ್ ಕಾರ್ತಿಕ್ ವಿಡಿಯೋ ಮಾಡಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಮೇಲೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ವಿಡಿಯೋ ಪ್ರಕರಣ – ನಿರೀಕ್ಷಣ ಜಾಮೀನು ಮೊರೆ ಹೋದ ತಂದೆ ಮಗ!

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಸ್ಟೇ ತಂದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ವಕೀಲರೂ ಆದ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಭೇಟಿ ಆಗಿದ್ದೆ. ಈ ವೇಳೆ ದೇವರಾಜೇಗೌಡ ಅವರಿಗೆ ಪೆನ್‌ಡ್ರೈವ್‌ನ ಒಂದು ಕಾಪಿ ಕೊಟ್ಟಿದ್ದೇನೆ. ಅವರು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ ನಂಬಿ ಕೊಟ್ಟಿದ್ದೇನೆ. ಕಾಂಗ್ರೆಸ್ ನಾಯಕರಿಗೆ ನಾನು ಪೆನ್‌ಡ್ರೈವ್ ಕೊಟ್ಟಿಲ್ಲ. ತಾವು ಬಚಾವ್ ಆಗುವುದಕ್ಕೋಸ್ಕರ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಡ್ರೈವರ್ ಕಾರ್ತಿಕ್ ಅವರ ಹೇಳಿಕೆ ಬಿಡುಗಡೆಯಾದ ಮೇಲೆ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ತಾನೊಬ್ಬ ಬಿಜೆಪಿ ಮುಖಂಡ ಅನ್ನೋದಕ್ಕಿಂತ ನಾನು ವಕೀಲನಾಗಿದ್ದೇನೆ. ನನ್ನ ಕಕ್ಷಿದಾರ ಅವರು. ವಕೀಲರಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದಾನೆ. ದೇವರಾಜೇಗೌಡ ಅವರು ಡ್ರೈವರ್ ಕಾರ್ತಿಕ್‌ ನನ್ನ ಹತ್ತಿರ ಬರೋದಕ್ಕೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನವಾಣೆ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. ಡ್ರೈವರ್ ಕಾರ್ತಿಕ್ ಅವರ ಜೊತೆ ಪುಟ್ಟರಾಜು ಅಂತ ಮತ್ತೊಬ್ಬರಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದೇನೆ ಎಂದಿದ್ದಾರೆ. ಇದಾದ ಮೇಲೆ ರಾಜ್ಯ ಬಿಜೆಪಿ, ಕೇಂದ್ರ ನಾಯಕರಿಗೆ ನಾನು ಪತ್ರ ಬರೆದಿದ್ದೇನೆ ಎಂದಿದ್ದಾರೆ.

ವಕೀಲನಾಗಿ ಕಕ್ಷಿದಾರನ ಬಳಿ ನಾನು ಸಾಕ್ಷಿ ಕೇಳಿದ್ದಾನೆ. ಕಾಂಗ್ರೆಸ್‌ನವರ ಬಳಿ ಆತ ಹೋಗಿದ್ದಾನೆ. ನಾನು ಚುನಾವಣೆಯಲ್ಲಿ ನಿಂತಾಗ ಪೆನ್‌ಡ್ರೈವ್ ಬಳಸಿಕೊಳ್ಳಬಹುದಿತ್ತು. ಇದೀಗ ಎಸ್‌ಐಟಿ ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ. ನನ್ನಿಂದ ಯಾರಿಗೆ ಪೆನ್‌ಡ್ರೈವ್ ಹೋಗಿದೆ ಅನ್ನೋ ಸತ್ಯ ಹೊರ ಬರಲಿ ಎಂದು ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *