ಸುಮಲತಾ ಅಂಬರೀಶ್‌ ಬಳಸುತ್ತಿದ್ದ ಕಾರು ಬೇಡ ಅಂದ್ರಾ ಹೆಚ್‌ಡಿಕೆ? – ಏನಿದು ಕಾರ್‌ ವಾರ್?‌

ಸುಮಲತಾ ಅಂಬರೀಶ್‌ ಬಳಸುತ್ತಿದ್ದ ಕಾರು ಬೇಡ ಅಂದ್ರಾ ಹೆಚ್‌ಡಿಕೆ? – ಏನಿದು ಕಾರ್‌ ವಾರ್?‌

ಸುಮಲತಾ ಅಂಬರೀಶ್ ಮತ್ತು ದಳಪತಿಗಳ ನಡುವಿನ ರಾಜಕೀಯ ವೈಷಮ್ಯ ಪದೇ ಪದೆ ಸಾಭಿತು ಆಗ್ತಿದೆ. ಇದೀಗ ಮತ್ತೊಂದು ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಾಜಿ ಸಂಸದೆ ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ ಎಂಬ ಆರೋಪ ಹೆಚ್‌ಡಿಕೆ ವಿರುದ್ಧ ಕೇಳಿಬಂದಿದೆ.

ಇದನ್ನೂ ಓದಿ: ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜ ನಿಧನ – ರಾಜಕೀಯ ಗಣ್ಯರಿಂದ ಸಂತಾಪ

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕರ್ನಾಟಕ ಪ್ರವಾಸದ ವೇಳೆ ರಾಜ್ಯ ಸರ್ಕಾರ ಕಾರು ನೀಡದೆ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಸರ್ಕಾರ ನನಗೆ ಕಾರು ನೀಡಿಲ್ಲ ಎಂಬ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸರ್ಕಾರ ನನಗೆ ಕಾರು ನೀಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ, ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸುವುದಿಲ್ಲ ಎಂದು ಯಾಕೆ ಹೇಳಿದರು. ಹೊಸ ಸಂಸದರಿಗೆ ಮೊದಲು ಹಳೆಯ ಕಾರು ನೀಡುವುದು ವಾಡಿಕೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡುತ್ತೇವೆ. ಹಿಂದೆ ನಮಗೂ ಅಂಬರೀಶ್​ ಬಳಸುತ್ತಿದ್ದ ಕಾರು ಕೊಟ್ಟಿದ್ದರು. ಸಚಿವನಾದಾಗಲೂ 6 ತಿಂಗಳು ಹಳೆಯ ಕಾರನ್ನೇ ಬಳಸಿದ್ದೆ. ಇಂತಹ ಸಣ್ಣ ಹೇಳಿಕೆ, ಆರೋಪ ಮಾಡುವುದು ಅವರ ಘನತೆಗೆ ತರವಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *