ರಸೆಲ್ ಮೇಲೆ ಕಣ್ಣಿಟ್ಟಿದ್ಯಾ RCB? – ಬ್ಯಾಟಿಂಗ್ & ಬೌಲಿಂಗ್ ಬೊಂಬಾಟ್
ಮಿನಿ ಆಕ್ಷನ್ ನಲ್ಲಿ ಮೂವರು ಸ್ಟಾರ್ಸ್

ರಸೆಲ್ ಮೇಲೆ ಕಣ್ಣಿಟ್ಟಿದ್ಯಾ RCB? – ಬ್ಯಾಟಿಂಗ್ & ಬೌಲಿಂಗ್ ಬೊಂಬಾಟ್ಮಿನಿ ಆಕ್ಷನ್ ನಲ್ಲಿ ಮೂವರು ಸ್ಟಾರ್ಸ್

2026ರ ಐಪಿಎಲ್​ ಆಕ್ಷನ್​ನಲ್ಲಿ ಬಿಗ್ ಪ್ಲೇಯರ್​ಗಳೇ ಇದ್ದಾರೆ. ದಾಖಲೆ ಮೊತ್ತದಲ್ಲಿ ಸಂಭಾವನೆ ಪಡೆದಿದ್ದವ್ರೂ ಕೂಡ ಈಗ ಮಿನಿ ಹರಾಜಿನಲ್ಲಿದ್ದಾರೆ. ಸೋ ಹತ್ತೂ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಯಾವ ಸ್ಲಾಟ್ ವೀಕ್ ಇದೆ ಅನ್ಸುತ್ತೋ ಅದನ್ನ ಫುಲ್​ಫಿಲ್ ಮಾಡಿಕೊಳ್ಳೋಕೆ ಟಾರ್ಗೆಟ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹತ್ತೂ ಫ್ರಾಂಚೈಸಿಗಳು ಕಣ್ಣಿಡುವಂತ ಮೂವರು ಆಟಗಾರರು ಅಖಾಡದಲ್ಲಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕುರ್ಚಿಗಾಗಿ ಫೈಟ್!‌ – ಡಿಕೆಶಿ ಬಣದಿಂದ ದೆಹಲಿಗೆ ಹಾರ್ತಿದ್ದಂತೆ ಬೆಂಗಳೂರಲ್ಲಿ ದಲಿತ ಸಚಿವರ ಡಿನ್ನರ್ ಮೀಟಿಂಗ್

30 ಲಕ್ಷ ರೂಪಾಯಿಂದ ಹಿಡ್ದು 23 ಕೋಟಿವರೆಗೂ ಸಂಭಾವನೆ ಪಡೀತಿದ್ದ ಆಟಗಾರರು 2026ರ ಐಪಿಎಲ್​ ಮಿನಿ ಆಕ್ಷನ್​ನಲ್ಲಿದ್ದಾರೆ. ಹೈಯೆಸ್ಟ್ ಪರ್ಸ್ ಬ್ಯಾಲೆನ್ಸ್ ಹೊಂದಿರೋ ಕೆಕೆಆರ್ ಬಿಗ್ ಪ್ಲೇಯರ್​ಗಳನ್ನ ಟಾರ್ಗೆಟ್ ಮಾಡಿದ್ರೆ ಕಡಿಮೆ ಮೊತ್ತ ಹೊಂದಿರೋ ಮುಂಬೈ ಇಂಡಿಯನ್ಸ್ ಬ್ಯಾಕಪ್ ಪ್ಲೇಯರ್​ಗಳ ಮೇಲೆ ಕಣ್ಣಿಡುತ್ತೆ. ಈ ಪೈಕಿ ಮಿನಿ ಆಕ್ಷನ್​ನ ಸೆಂಟ್ರ್ ಆಫ್ ಅಟ್ರಾಕ್ಷನ್ ಆಗಿರೋ ಪ್ಲೇಯರ್ಸ್ ಅಂದ್ರೆ ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ವನಿಂದು ಹಸರಂಗ. ಅದ್ರಲ್ಲೂ ರಸೆಲ್ ಅಂತೂ ಹೈಲೆಟ್ ಆಗಿದ್ದಾರೆ.

ಕೆರೆಬಿಯನ್ ಪವರ್ ಹಿಟ್ಟರ್ ಮೇಲೆ ಕಣ್ಣಿಟ್ಟ ಫ್ರಾಂಚೈಸಿಗಳು!

ಪವರ್​ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸೋ ಸಾಮರ್ಥ್ಯ ಇರೋ ಆಂಡ್ರೆ ರಸೆಲ್ 2014ರಿಂದಲೂ ಕೆಕೆಆರ್ ಜೆರ್ಸಿಯಲ್ಲೇ ಐಪಿಎಲ್ ಆಡ್ತಿದ್ದಾರೆ. ಌಂಡ್ ಅದೇ ಜೆರ್ಸಿಯಲ್ಲೇ ನಿವೃತ್ತರಾಗ್ತಾರೆ ಎನ್ನಲಾಗ್ತಿತ್ತು. ಸೋ 2025ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ 12 ಕೋಟಿಗೆ ಅವ್ರನ್ನ ಉಳಿಸಿಕೊಂಡಿತ್ತು. ಆದ್ರೀಗ ಅಚ್ಚರಿ ಎನ್ನುವಂತೆ ಮಿನಿ ಆಕ್ಷನ್​ಗೆ ರಿಲೀಸ್ ಮಾಡಿದ್ದಾರೆ. ಕೆರಿಬಿಯನ್ ಆಲ್‌ರೌಂಡರ್ ಆಂಡ್ರೆ ರಸೆಲ್ ಪವರ್ ಹಿಟ್ಟರ್. ಮಿಡಲ್ ಆರ್ಡರ್​ನಲ್ಲಿ ಬಿಗ್ ಹಿಟ್​ಗಳ ಮೂಲಕ ಸ್ಕೋರ್ ಹೆಚ್ಚಿಸೋ ಸಾಮರ್ಥ್ಯ ಅವ್ರಲ್ಲಿದೆ. ಜೊತೆಗೆ ಸ್ಟ್ರೈಕ್​ರೇಟ್ ಕೂಡ ಅದ್ಭುತವಾಗಿದೆ. ಯಾವುದೇ ತಂಡ ರಸೆಲ್​ನ ಖರೀದಿ ಮಾಡಿದ್ರೂ ಬೆಸ್ಟ್ ಚಾಯ್ಸ್ ಆಗ್ತಾರೆ. ಇನ್ನು ಆರ್​ಸಿಬಿ ಫ್ಯಾನ್ಸ್ ಕೂಡ ರಸೆಲ್​ನ ಖರೀದಿ ಮಾಡುವಂತೆ ಪೋಸ್ಟ್​ಗಳನ್ನ ಶೇರ್ ಮಾಡ್ತಿದ್ದಾರೆ. ಲಿಯಾಮ್ ಲಿವಿಂಗ್​ಸ್ಟೋನ್​ನ ರಿಲೀಸ್ ಮಾಡಿರೋದ್ರಿಂದ ರಸೆಲ್​ನ ಪಿಕ್ ಮಾಡಿದ್ರೆ ಆರ್​ಸಿಬಿ ಫಿನಿಶರ್ಸ್ ಸ್ಲಾಟ್ ಇನ್ನೂ ಸ್ಟ್ರಾಂಗ್ ಆಗುತ್ತೆ ಅಂತಾ ಸಜೇಷನ್ ಕೊಡ್ತಿದ್ದಾರೆ. ಹಾಗೇ ಎಲ್ಲಾ ಫ್ರಾಂಚೈಸಿಗಳು ರಸೆಲ್ ಮೇಲೆ ಕಣ್ಣಿಟ್ಟಿರೋದ್ರಿಂದ ಬಿಡ್ ಮೊತ್ತ ಜಾಸ್ತಿಯಾಗೋದು ಗ್ಯಾರಂಟಿ.

ವೆಂಕಟೇಶ್ ಅಯ್ಯರ್ ಸಂಭಾವನೆ ಕುಗ್ಗೋದು ಗ್ಯಾರಂಟಿ!

ವೆಂಕಟೇಶ್ ಅಯ್ಯರ್ ಅನ್ನೋ ಹೆಸ್ರು ಕೇಳಿದ್ರೆ ಐಪಿಎಲ್ ಅಭಿಮಾನಿಗಳಿಗೆ ಅವ್ರ ಆಟ ಆಡಿದ್ದು ನೆನಪಾಗಲ್ಲ. ಬಟ್ ಅವ್ರು ಎಷ್ಟು ಸಂಭಾವನೆ ಪಡೆದಿದ್ರು ಅನ್ನೋದು ಥಟ್ ಅಂತಾ ನೆನಪಾಗುತ್ತೆ. 2025ರ ಐಪಿಎಲ್​ಗೂ ಮುನ್ನ ಮೆಗಾ ಆಕ್ಷನ್​ನಲ್ಲಿ ಬರೋಬ್ಬರಿ 23.75 ಕೋಟಿಗೆ ಬಿಡ್ ಆಗಿದ್ರು. ಕೆಕೆಆರ್ ಫ್ರಾಂಚೈಸಿ ದಾಖಲೆ ಮೊತ್ತದ ಹಣ ನೀಡಿ ಖರೀದಿ ಮಾಡಿತ್ತು. ಬಟ್ ಪರ್ಫಾಮೆನ್ಸ್ ಅಂತಾ ಬಂದ್ರೆ ಡಮ್ಮಿಯಾಗಿದ್ರು. ಹೀಗಾಗಿ ಈ ಸಲ ಮಿನಿ ಆಕ್ಷನ್​ಗೆ ರಿಲೀಸ್ ಮಾಡಲಾಗಿದ್ದು ಇವ್ರ ಹೆಸ್ರೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹರಾಜಿನಲ್ಲಿರೋ ಒನ್ ಆಫ್ ದಿ ಸ್ಟಾರ್ ಬ್ಯಾಟರ್ ಆಗಿದ್ದಾರೆ. ಆದ್ರೆ ಕಳೆದ ಬಾರಿಯಂತೆ ಈ ಸಲ ದುಬಾರಿ ಮೊತ್ತಕ್ಕೆ ಸೇಲ್ ಆಗೋದು ಡೌಟ್ ಇದೆ. ಌಂಡ್ ಪರ್ಫಾಮೆನ್ಸ್ ಕೂಡ ವೀಕ್ ಇದ್ದಿದ್ರಿಂದ ಕಡಿಮೆ ಮೊತ್ತಕ್ಕೆ ಯಾವುದಾದ್ರೂ ತಂಡ ಬಿಡ್ ಮಾಡಬಹುದು.

ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಎಫೆಕ್ಟೀವ್ ಹಸರಂಗ

ಇನ್ನು ಐಪಿಎಲ್​ನ ಸ್ಟಾರ್ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿರೋ ಶ್ರೀಲಂಕಾ ಮೂಲದ ಆಟಗಾರ ವನಿಂದು ಹಸರಂಗ ಕೂಡ ಈ ಸಲ ಮಿನಿ ಹರಾಜಿನಲ್ಲಿದ್ದಾರೆ. ರಾಜಸ್ಥಾನ ತಂಡದಿಂದ ಅವ್ರನ್ನ ಕೈಬಿಡಲಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಇಂಪ್ಯಾಕ್ಟ್ ಮಾಡೋ ಹಸರಂಗ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಡಲಿದೆ. ಕಳೆದ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ಬರದೇ ಇದ್ರೂ ಕೆಕೆಆರ್, ಸಿಎಸ್​ಕೆ ಹಾಗೇ ಲಕ್ನೋದಂತ ತಂಡಗಳಿಗೆ ಮಿಡಲ್ ಆರ್ಡರ್ ನಲ್ಲಿ ಉತ್ತಮ ಆಯ್ಕೆಯಾಗ್ತಾರೆ. ಹೀಗಾಗಿ ಬಿಡ್ಡಿಂಗ್​ನಲ್ಲಿ ಫ್ರಾಂಚೈಸಿಗಳ ನಡುವೆ ಫೈಟ್ ಇರೋದಂತೂ ಪಕ್ಕಾ.

Shantha Kumari