ರಾಜ್ಯದ ಗೃಹಲಕ್ಷ್ಮೀಯರಿಗೆ ಬಿಗ್ ಶಾಕ್! – 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ ಆಗಿದ್ಯಾಕೆ?

ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಕೂಡ ಒಂದು. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮೀಯರಿಗೆ ಶಾಕ್ ಕೊಟ್ಟಿದೆ. 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ ಆಗಿದೆ.
ಇದನ್ನೂ ಓದಿ : ಕ್ರಿಕೆಟ್ ನಲ್ಲೂ ಪಾತಾಳಕ್ಕೆ ಕುಸಿದ PAK – ಕೊಹ್ಲಿಗೆ ಕಂಪೇರ್.. ಆಟದಲ್ಲಿ ಫೇಲ್ಯೂರ್
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕಳೆದ 11 ತಿಂಗಳಿನಿಂದ ರಾಜ್ಯದ ಅರ್ಹ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಹಣ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಒಟ್ಟು 1.28 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1.21 ಕೋಟಿ ಜನರಿಗೆ ಹಣ ಸಿಗ್ತಾ ಇದೆ. ಆದ್ರೆ ಇದರಲ್ಲಿ ಸರಿಸುಮಾರು 1.72 ಹತ್ರ ಹತ್ರ 2 ಲಕ್ಷ ಫಲಾನುಭವಿಗಳು ಐಟಿ ತೆರಿಗೆದಾರರಿದ್ದಾರೆ ಎಂಬುದು ವಿಶೇಷ. ಈ ನಿಟ್ಟಿನಲ್ಲಿ ಅಂತವರ ಹೆಸರನ್ನು ಪರಿಷ್ಕರಣೆ ಮಾಡಿ ಅಂತವರ ಹೆಸರನ್ನು ತೆಗೆದು ಹಾಕುವ ನಿರ್ಧಾರವನ್ನು ತೆಗೆದು ಹಾಕಲು ಸರ್ಕಾರ ನಿರ್ಧರಿಸಿದೆ.
ಆದ್ರೆ ಇದರ ಜೊತೆಗೆ ಇನ್ನೊಂದು ಬೇಸರದ ಸಂಗತಿ ಕೂಡ ಇದೆ. ಅದೇನು ಅಂದ್ರೆ, ತಾಂತ್ರಿಕ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ 1.82 ಲಕ್ಷ ಅರ್ಹ ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ಪಡೆಯಲು ಸಾಧ್ಯ ಆಗ್ತಾ ಇಲ್ಲಾ. ಇದರಲ್ಲಿ ಕೆಲವರಿಗೆ ಹಣ ಬ್ಯಾಂಕಿಗೆ ಹೋಗಿದೆ ಆದ್ರೆ ಬ್ಯಾಂಕ್‌ನಲ್ಲಿ ಇಕೆವೈಸಿಯಂತಹ ಕೆಲವು ತಾಂತ್ರಿಕ ಕಾರಣದಿಂದಾಗಿ ಹಣ ಜಮಾ ಆಗ್ತಾ ಇಲ್ಲಾ ಎಂಬುದು ಬೇಸರ ಸಂಗತಿಯಾಗಿದೆ.
ಇದೀಗ ಸರ್ಕಾರ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದು ನಮ್ಮ ಕೆಲಸ. ಆದ್ರೆ, ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಂಡು ಅವರಿಗೂ ಹಣ ನೀಡಬೇಕು. ಬ್ಯಾಂಕ್ ಕಡೆಯಿಂದ ಯಾವುದೇ ಸಮಸ್ಯೆಯಾಗದಂತೆ ಹಣ ನೀಡಬೇಕು ಎಂದು ಸರ್ಕಾರ ಬ್ಯಾಂಕುಗಳಿಗೆ ಸೂಚನೆ ನೀಡಿದೆ.