ಬೆಂಗಳೂರಿನಲ್ಲಿ ಒತ್ತುವರಿದಾರರಿಗೆ ಬಿಗ್ ಶಾಕ್ – ರಾಜಕಾಲುವೆ ಮೇಲೆ ತಲೆ ಎತ್ತಿದ್ದ ಕಟ್ಟಡಗಳು ನೆಲಸಮ!

ಬೆಂಗಳೂರಿನಲ್ಲಿ ಒತ್ತುವರಿದಾರರಿಗೆ ಬಿಗ್ ಶಾಕ್ – ರಾಜಕಾಲುವೆ ಮೇಲೆ ತಲೆ ಎತ್ತಿದ್ದ ಕಟ್ಟಡಗಳು ನೆಲಸಮ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಜೆಸಿಬಿಗಳ ಗರ್ಜನೆ ಕೇಳುತ್ತಿದೆ. ಅಕ್ರಮ ಒತ್ತುವರಿದಾರರಿಗೆ ಪಾಲಿಕೆ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ.  ಅದರಲ್ಲೂ ಮಹದೇವಪುರದಲ್ಲಿ ತಲೆ ಎತ್ತಿರುವ ಐಟಿ ಕಂಪನಿಗಳಿಗೆ ಈಗ ತಲೆನೋವು ಶುರುವಾಗಿದೆ.

ಇದನ್ನೂ ಓದಿ : ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌! – ಸೋಲಾರ್​ ಸಬ್ಸಿಡಿ ಕಟ್

ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿದಾರರ ಹಾವಳಿಯಿಂದ ಮಳೆ ಬಂದಾಗ ದೊಡ್ಡ ಅವಾಂತರಗಳು ಸೃಷ್ಟಿಯಾಗುತ್ತವೆ. ಮಹಾದೇವಪುರ ಮತ್ತು ಕೆಆರ್ ಪುರಂ ನಲ್ಲಿ ಐಟಿ-ಬಿಟಿ ಕಂಪನಿಗಳು (IT-BT Companies) ನಾಯಿಕೊಡೆಗಳಂತೆ ತಲೆಯೆತ್ತಿರುವುದು ಗೊತ್ತಿರುವ ಸಂಗತಿ ಮತ್ತು ಹಲವು ಕಂಪನಿಗಳು ಸರ್ಕಾರಿ ಜಾಗ ಮತ್ತು ರಾಜಾ ಕಾಲುವೆಗಳ (SWD) ಮೇಲೆ ಒತ್ತುವರಿ (encroachment) ಮಾಡಿಕೊಂಡಿರುವುದು ಸಹ ಬಹಿರಂಗ ಸತ್ಯ. ಇಷ್ಟು ಸಮಯ ಒತ್ತುವರಿ ಮಾಡಿಕೊಂಡಿದ್ದು ಕ್ಯಾರೆ ಅನ್ನದಂತಿದ್ದ ಕಂಪನಿಗಳಿಗೆ ರಾಹುಕಾಲ ಶುರುವಾದಂತಿದೆ. ಎರಡು ಕ್ಷೇತ್ರಗಳಲ್ಲಿ ವಾಸವಾಗಿರುವ ಜನ ಒತ್ತುವರಿಗಳಿಂದ ತಮಗಾಗುತ್ತಿರುವ ನಾಗರಿಕ ಸಮಸ್ಯೆಗಳನ್ನು ಪದೇಪದೆ ಹೇಳಿಕೊಂಡ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಮುಂದಾಗಿದೆ. ಈ ಅಧಿಕಾರಿ ಹೇಳುವ ಪ್ರಕಾರ ಒತ್ತುವರಿಯಾಗಿರುವ ಸ್ಥಳಗಳನ್ನು ಪತ್ತೆ ಮಾಡಲು ಸರ್ವೇ ಕಾರ್ಯ ಆರಂಭವಾಗಿದ್ದು ಅದು ಪೂರ್ತಿಯಾದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು. ಮಹದೇವಪುರ ವಿಭಾಗದ ಮುನೇನಕೊಳಲು, ಪೈ ಗಾರ್ಡನ್ ಲೇಔಟ್, ಹೊರಮಾವು ಬಡಾವಣೆ ಮತ್ತು ಹೊಯ್ಸಳ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.

 

suddiyaana