ದುಲೀಪ್ ಟ್ರೋಫಿಯಲ್ಲೂ ಕೆ.ಎಲ್‌ ರಾಹುಲ್‌ ಗೆ ಅನ್ಯಾಯ – ಗಿಲ್ ಕ್ಯಾಪ್ಟನ್ಸಿಯಲ್ಲಿ ಆಡ್ಬೇಕಾ?

ದುಲೀಪ್ ಟ್ರೋಫಿಯಲ್ಲೂ ಕೆ.ಎಲ್‌ ರಾಹುಲ್‌ ಗೆ ಅನ್ಯಾಯ – ಗಿಲ್ ಕ್ಯಾಪ್ಟನ್ಸಿಯಲ್ಲಿ ಆಡ್ಬೇಕಾ?

ಕನ್ನಡಿಗ ಕೆ.ಎಲ್ ರಾಹುಲ್‌ ಗೆ ಲಕ್ ಸರಿ ಇಲ್ವೋ ಅಥವಾ ಬಿಸಿಸಿಐ ಮ್ಯಾನೇಜ್ಮೆಂಟ್ ಬೇಕೂ ಅಂತಾನೇ ಸೈಡ್ಲೈನ್ ಮಾಡ್ತಿದ್ಯೋ ಗೊತ್ತಿಲ್ಲ. ಅವ್ರ ಅನುಭವಕ್ಕೆ ತಕ್ಕಂತೆ ಟೀಂ ಇಂಡಿಯಾದಲ್ಲೂ ಚಾನ್ಸ್ ಸಿಗ್ತಿಲ್ಲ. ಅವ್ರ ಎಕ್ಸ್ಪೀರಿಯನ್ಸ್ ರೇಂಜ್ಗೆ ದೇಶೀಯ ಟೂರ್ನಿಗಳಲ್ಲೂ ಪೋಸ್ಟ್ ಕೊಡ್ತಿಲ್ಲ. ಇದೀಗ ದುಲೀಪ್ ಟ್ರೋಫಿಯಲ್ಲೂ ಹಿಂಗೇ ಆಗಿದೆ. ಕಿರಿಯ ಆಟಗಾರನ ಅಡಿಯಲ್ಲಿ ರಾಹುಲ್ ಕಣಕ್ಕಿಳಿಯಬೇಕಾಗಿದೆ. ಟೀಂ ಇಂಡಿಯಾಗೆ ಮಿಡಲ್ ಆರ್ಡರ್ನ ಬೆಸ್ಟ್ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಆಗಿದ್ದ ರಾಹುಲ್‌ ಗೆ  ಆಗ್ತಿರೋ ನಿರಾಸೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್! – ಯಾವ್ಯಾವ ಸಿನಿಮಾಗೆ ಬಂತು ಪ್ರಶಸ್ತಿ?

ಭಾರತದಲ್ಲಿ ನಡೆಯುವ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ದುಲೀಪ್ ಟ್ರೋಫಿ ಕೂಡ ಒಂದು. ಇದೇ ಕಾರಣಕ್ಕೆ ದುಲೀಪ್ ಟ್ರೋಫಿ ಟೂರ್ನಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದುಲೀಪ್ ಟ್ರೋಫಿಗೆ ತಂಡಗಳನ್ನು ಅನೌನ್ಸ್ ಮಾಡಿದೆ. ವಿಶೇಷ ಅಂದ್ರೆ ಈ ಹಿಂದೆ ಆರು ವಲಯಗಳಾಗಿ ಕಣಕ್ಕಿಳಿಯುತ್ತಿದ್ದ ತಂಡಗಳನ್ನು ಈ ಬಾರಿ ಟೀಮ್ ಎ,ಬಿ,ಸಿ ಮತ್ತು ಡಿ ಎಂದು ನಾಲ್ಕು ತಂಡಗಳನ್ನಾಗಿ ವಿಂಗಡಿಸಲಾಗಿದೆ. ಈ ತಂಡಗಳಿಗೆ ನಾಲ್ವರನ್ನ ಕ್ಯಾಪ್ಟನ್ ಆಗಿ ಘೋಷಣೆ ಮಾಡಲಾಗಿದೆ. ಶುಭ್ಮನ್ ಗಿಲ್, ಅಭಿಮನ್ಯು ಈಶ್ವರನ್, ಶ್ರೇಯಸ್ ಅಯ್ಯರ್ ಹಾಗೂ ರುತುರಾಜ್ ಗಾಯಕ್ವಾಡ್ ತಂಡಗಳನ್ನ ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದೀಗ ದುಲೀಪ್ ಟ್ರೋಫಿಗೆ ಆಯ್ಕೆಯಾದ ಕ್ರಿಕೆಟಿಗರನ್ನು ಟೆಸ್ಟ್ ಸರಣಿ ಸಂದರ್ಭದಲ್ಲಿ ಬದಲಾಯಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಸ್ಟಾರ್ ಆಟಗಾರರಿಗೆ ದುಲೀಪ್ ಟ್ರೋಫಿಯಿಂದ ವಿಶ್ರಾಂತಿ!

ಸೆಪ್ಟೆಂಬರ್ 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳಿಗೆ ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿಯು ಆಟಗಾರರನ್ನು ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಯಾವುದೇ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದೇ ವೇಳೆ ಹಿರಿಯ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರಿಗೂ ವಿನಾಯಿತಿ ನೀಡಲಾಗಿದೆ. ಮತ್ತೊಂದ್ಕಡೆ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ತಂಡಗಳಲ್ಲಿ ಕಾಣಿಸಿಕೊಳ್ಳದ ಇಶಾನ್ ಕಿಶನ್, ಇದೀಗ ದುಲೀಪ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ.

ಕನ್ನಡಿಗ ಕೆ.ಎಲ್ ರಾಹುಲ್ ಗೆ ಮತ್ತೊಮ್ಮೆ ಮೋಸ!

ಸೆಪ್ಟೆಂಬರ್ 5ನೇ ತಾರೀಕಿನಿಂದ 22ರ ತನಕ ದುಲೀಪ್ ಟ್ರೋಫಿ ನಡೆಯಲಿದೆ. ಸೀನಿಯರ್ ಆಟಗಾರರು ಕೂಡ ದೇಶೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಎಂದಿನಂತೆ ಈ ಸಲವೂ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಆದ್ರೆ ತಂಡದ ಆಯ್ಕೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ಗೆ ಇಲ್ಲೂ ಮೋಸ ಆಗಿದೆ. ಅಂದ್ರೆ  ಇಂಡಿಯಾ ಎ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಆಡಬೇಕಿದೆ. ಇದು ಹಿರಿಯ ಆಟಗಾರ ಕೆ.ಎಲ್ ರಾಹುಲ್ಗೆ ಮಾಡಿದ ಅವಮಾನ ಮಾಡಿದಂತಾಂಗಿದೆ.

ಟಿ-20 ವಿಶ್ವಕಪ್ ಗೂ ಇಲ್ಲ.. ಕ್ಯಾಪ್ಟನ್ಸಿಯೂ ಇಲ್ಲ!

ಕೆಎಲ್ ರಾಹುಲ್ಗೆ ಬಿಸಿಸಿಐನಿಂದ ಹೀಗೆ ಮೋಸ ಆಗ್ತಿರೋದು ಇದೇ ಮೊದಲೇನು ಅಲ್ಲ ಬಿಡಿ. ಟಿ-20 ವಿಶ್ವಕಪ್ಗೂ ಕೆಎಲ್ ರಾಹುಲ್ರನ್ನ ಆಯ್ಕೆ ಮಾಡದೆ ಬಿಸಿಸಿಐ ಟೀಂ ಮ್ಯಾನೇಜ್ಮೆಂಟ್ ಕಡೆಗಣಿಸಿತ್ತು. ಇದು ಕನ್ನಡಿಗರ ಬೇಸರಕ್ಕೆ ಕಾರಣವಾಗಿತ್ತು. ವಿಶ್ವಕಪ್ ಬಳಿಕ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಗೂ ಆಯ್ಕೆ ಮಾಡಿರಲಿಲ್ಲ. ಇದೆಲ್ಲದ್ರ ನಡುವೆ ಲಂಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ರೇ ಕ್ಯಾಪ್ಟನ್ ಎಂಬ ಸುದ್ದಿ ಸದ್ದು ಮಾಡಿತ್ತು. ನಾಯಕ ರೋಹಿತ್ ಶರ್ಮಾ ಮತ್ತಷ್ಟು ವಿಶ್ರಾಂತಿ ತಗೊಳ್ತಾರೆ. ಸೋ ಕೆಎಲ್ಗೆ ಸಾರಥ್ಯ ಅಂದಿದ್ರು. ಬಟ್ ರೋಹಿತ್ ವಾಪಸ್ ಬಂದ್ರು. ಅದು ಖುಷಿ ವಿಚಾರನೇ. ಬಟ್ ಅಲ್ಲಿ ಉಪನಾಯಕನ ಪಟ್ಟವೂ ರಾಹುಲ್ಗೆ ಸಿಗ್ಲಿಲ್ಲ. ಟಿ-20 ಹಾಗೇ ಏಕದಿನ ಎರಡೂ ಸರಣಿಗಳಿಗೂ ಕೂಡ ಶುಭ್ಮನ್ ಗಿಲ್ರನ್ನೇ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡುವಂತಾಗಿದೆ. ರಾಹುಲ್ ಮೇಲಿನ ತಾತ್ಸಾರ ಇಷ್ಟಕ್ಕೇ ನಿಲ್ಲಲಿಲ್ಲ. ಏಕದಿನ ಪಂದ್ಯದಲ್ಲೂ ಹರಕೆಯ ಕುರಿ ಮಾಡಿತ್ತು ಬಿಸಿಸಿಐ.

ಬಿಸಿಸಿಐ ಎಕ್ಸ್ ಪೆರಿಮೆಂಟ್ಗೆ ಹರಕೆಯ ಕುರಿ ರಾಹುಲ್!

ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಚಾನ್ಸ್ ಸಿಕ್ರೂ ಕೂಡ ಟೀಂ ಮ್ಯಾನೇಜ್ಮೆಂಟ್ ಹಾಗೂ ಕೋಚ್ ಎಕ್ಸ್ಪೆರಿಮೆಂಟ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಹರಕೆಯ ಕುರಿ ಆಗಿದ್ರು. ಮೂರು ದಿನಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಲಾಗಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಸಡನ್ ಆಗಿ ಡ್ರಾಪ್ ಮಾಡಲಾಗಿತ್ತು. ಮೂರನೇ ಪಂದ್ಯದ ಮೂಲಕ ಕೆಎಲ್ ರಾಹುಲ್ ತಮ್ಮ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಬೇಕಿತ್ತು. ಆದ್ರೆ ಪ್ಲೇಯಿಂಗ್ 11ನಲ್ಲಿ ಡ್ರಾಪ್ ಮಾಡಿ ಮೈದಾನದಿಂದ ದೂರ ಇಡಲಾಗಿತ್ತು. ಏಕದಿನ ತಂಡದ ಮಿಡಲ್ ಆರ್ಡರ್ನ ಬಲವಾಗಿದ್ದ ರಾಹುಲ್, ವಿಕೆಟ್ ಕೀಪರ್ ಆಗಿ ಅಲ್ಲದಿದ್ರೂ, ಬ್ಯಾಟ್ಸ್ಮನ್ ಆಗಿಯಾದ್ರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಇರಬೇಕಾಗಿತ್ತು. ಆದ್ರೆ, ರಾಹುಲ್ ಬೆಂಚ್ಗೆ ಸೀಮಿತವಾಗಿ ಬಿಟ್ರು. 7 ತಿಂಗಳ ಬಳಿಕ ಏಕದಿನ ಸರಣಿಯನ್ನಾಡ್ತಿದ್ದ ಕನ್ನಡಿಗ ರಾಹುಲ್ ಇತರರಿಗಿಂತ ಕಳಪೆ ಪ್ರದರ್ಶನವನ್ನೇನು ನೀಡಿರಲಿಲ್ಲ. ಈ ಸರಣಿ ಟೀಮ್ ಇಂಡಿಯಾಗೆ ಈ ವರ್ಷದ ಕೊನೆ ಏಕದಿನ ಸರಣಿಯಾಗಿತ್ತು. ಇದಾದ ಬಳಿಕ ಈ ವರ್ಷ ಯಾವುದೇ ಒನ್ ಡೇ ಗೇಮ್ ಆಡಲ್ಲ. ಹೀಗಾಗಿ ಕೆ.ಎಲ್.ರಾಹುಲ್ರನ್ನ ಡ್ರಾಪ್ ಮಾಡಿದ್ದು ನಾನಾ ಚರ್ಚೆಗಳಿಗೆ ಕಾರಣವಾಗಿತ್ತು.

ಬ್ಯಾಟಿಂಗ್ ಆರ್ಡರ್ ಬದಲಿಸಿ ರಾಹುಲ್ ಸೈಡ್ ಲೈನ್!

ಹಾಗೇ ಲಂಕಾ ಸರಣಿಯಲ್ಲಿ ರಾಹುಲ್ ಮೇಲೆ ಮತ್ತೊಂದು ಪ್ರಯೋಗ ಮಾಡಲಾಗಿತ್ತು. ಕೆಲ ವರ್ಷಗಳಿಂದ ರಾಹುಲ್ ವಿಶ್ವ ಕ್ರಿಕೆಟ್ನಲ್ಲೇ ಬೆಸ್ಟ್ ಮಿಡಲ್ ಆರ್ಡರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. 5 ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗರಿಷ್ಠ ಮಿಡಲ್ ಆರ್ಡರ್ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಿದ್ರೂ ರಾಹುಲ್ರನ್ನ 4 ಹಾಗೂ 5ನೇ ಕ್ರಮಾಂಕದ ಬದಲಿಗೆ 6 ಹಾಗೂ 7ನೇ ಕ್ರಮಾಂಕದಲ್ಲಿ ಪ್ರಯೋಗ ಮಾಡಿ ಕೊನೆಗೆ ಬೆಂಚ್ಗೆ ಫಿಕ್ಸ್ ಮಾಡಿದ್ರು. ರಾಹುಲ್ರನ್ನ ಕೈ ಬಿಟ್ಟು ರಿಷಬ್ ಪಂತ್ಗೆ ಚಾನ್ಸ್ ನೀಡಿದ್ದ ಟೀಂ ಮ್ಯಾನೇಜ್ಮೆಂಟ್ ಸಾಧಿಸಿದ್ದು ಏನೇನೂ ಇಲ್ಲ. ಚಾನ್ಸ್ ಗಿಟ್ಟಿಸಿಕೊಂಡ ಪಂತ್ ಜಸ್ಟ್ 6 ರನ್ಗಳಿಸಿ ಔಟಾಗಿದ್ರು. ಅಲ್ದೇ ಲಂಕಾ ಎದುರಿನ 2 ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಆಟವೂ ಅಷ್ಟಕ್ಕೆ ಅಷ್ಟೇ. ಆದ್ರೂ ಕೂಡ ರಾಹುಲ್ರನ್ನೇ ಟಾರ್ಗೆಟ್ ಮಾಡಲಾಗಿತ್ತು.

ಇದೆಲ್ಲಕ್ಕಿಂತ ಇನ್ನೊಂದು ಶಾಕಿಂಗ್ ವಿಚಾರ ಅಂದರೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಲಂಕಾ ಸರಣಿ ದಿಕ್ಸೂಚಿ ಎಂದೇ ಹೇಳಲಾಗಿತ್ತು. ಇಲ್ಲಿಂದಲೇ ಮುಂದಿನ ಐಸಿಸಿ ಟೂರ್ನಿಗೆ ಟೀಂ ಫೈನಲ್ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡಿತ್ತು. ಅದ್ರಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ಹೀಗೆ ಟೀಂ ಇಂಡಿಯಾದಲ್ಲೂ ಅವ್ರ ಎಕ್ಸ್ಪೀರಿಯನ್ಸ್ಗೆ ತಕ್ಕಂತೆ ಸ್ಥಾನ ಸಿಗ್ತಿಲ್ಲ. ದೇಶೀಯ ಟೂರ್ನಿಗಳಲ್ಲೂ ಅವ್ರ ಅನುಭವಕ್ಕೆ ತಕ್ಕಂತೆ ನಡೆಸಿಕೊಳ್ತಿಲ್ಲ. ಬಿಸಿಸಿಐನ ಈ ಆಟ ನೋಡ್ತಿದ್ರೆ ರಾಹುಲ್ರನ್ನ ತೆರೆಮರೆಗೆ ಕಳಿಸೋ ಪ್ಲ್ಯಾನ್ ನಡೀತಿದ್ಯಾ ಅನ್ನೋ ಅನುಮಾನ ಅಭಿಮಾನಿಗಳು.

Shwetha M

Leave a Reply

Your email address will not be published. Required fields are marked *