ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಬಳಕೆದಾರರಿಗೆ ಬಿಗ್‌ ಶಾಕ್!‌ – ಏ. 1 ರಿಂದ ಹೊಸ ರೂಲ್ಸ್‌

ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಬಳಕೆದಾರರಿಗೆ ಬಿಗ್‌ ಶಾಕ್!‌ – ಏ. 1 ರಿಂದ ಹೊಸ ರೂಲ್ಸ್‌

ಇದು ಡಿಜಿಟಲ್‌ ಯುಗ.. ಎಲ್ಲವೂ ಡಿಜಿಟಲೀಕರಣಗೊಂಡಿದೆ. ಒಂದು ರೂಪಾಯಿ ಪೇ ಮಾಡ್ಬೇಕಂದ್ರೂ, ಯುಪಿಐ ಪಾವತಿ ಮಾಡ್ತೀವಿ.. ಇದೀಗ ಯುಪಿಐ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಏಪ್ರೀಲ್‌ 1 ರಿಂದ ಬಳಕೆದಾರರಿಗೆ ಹೊಸ ರೂಲ್ಸ್‌ ಜಾರಿಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂಓದಿ: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಕ್ಯಾಪ್ಟನ್ – ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಯಂಗ್ ಕ್ರಿಕೆಟರ್

ಜನಪ್ರಿಯ ಯುಪಿಐ ಪಾವತಿ ಆ್ಯಪ್‌ಗಳಾದ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಇದೇ ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ (UPI) ಪಾವತಿ ಮಾಡುವಾಗ ಸಮಸ್ಯೆ ಎದುರಾಗಬಹುದು ಎಂದು ತಿಳಿದು ಬಂದಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ “ನಿಷ್ಕ್ರಿಯ ಮೊಬೈಲ್ ಸಂಖ್ಯೆ”ಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿದೆ. ದೀರ್ಘಕಾಲದಿಂದ ಸಕ್ರಿಯವಾಗಿಲ್ಲದ ಮೊಬೈಲ್ ಸಂಖ್ಯೆಗಳನ್ನು ಯುಪಿಐಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ತೆಗೆದುಹಾಕಬೇಕು ಎಂದು ಹೇಳಿದೆ.

ಈ ನಿರ್ಧಾರದಿಂದಾಗಿ ಏ.1 ರಿಂದ ಅಂತಹ ಮೊಬೈಲ್ ಸಂಖ್ಯೆಗಳ ಮೂಲಕ ಯುಪಿಐ ಪಾವತಿಗಳು ಸ್ಥಗಿತಗೊಳ್ಳಲಿವೆ. ಸೈಬರ್ ಕ್ರೈಂಗಳ ಹೆಚ್ಚಳ ಮತ್ತು ತಾಂತ್ರಿಕ ದೋಷಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ. ಒಂದು ವೇಳೆ ಟೆಲಿಕಾಂ ಸೇವಾ ಒದಗಿಸುವವರು ಈ ನಿಷ್ಕ್ರಿಯ ಸಂಖ್ಯೆಗಳನ್ನು ಬೇರೆಯವರಿಗೆ ಮರು ಹಂಚಿಕೆ ಮಾಡಿದರೆ, ಅದು ವಂಚನೆಗೆ ಕಾರಣವಾಗಬಹುದು ಎಂದು ಎನ್‌ಪಿಸಿಐ ಎಚ್ಚರಿಸಿದೆ. ಹೀಗಾಗಿ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಯುಪಿಐ ವಹಿವಾಟುಗಳಲ್ಲಿ ಮೊಬೈಲ್ ಸಂಖ್ಯೆಯು ಪ್ರಮುಖ ಗುರುತಿನ ಚಿಹ್ನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹಣವು ಸರಿಯಾದ ಫಲಾನುಭವಿಗೆ ತಲುಪುವುದನ್ನು ಖಾತ್ರಿಪಡಿಸುತ್ತದೆ ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದೆ.

ಈ ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು ಪ್ರತಿ ವಾರ ನಿಷ್ಕ್ರಿಯ ಸಂಖ್ಯೆಗಳ ಪಟ್ಟಿಯನ್ನು ನವೀಕರಿಸಬೇಕು ಎಂದು ಎನ್‌ಪಿಸಿಐ ಸೂಚಿಸಿದೆ. ಬಳಕೆದಾರರು ತಮ್ಮ ಯುಪಿಐ ಸೇವೆಗಳಲ್ಲಿ ಯಾವುದೇ ಅಡಚಣೆ ಎದುರಾಗದಂತೆ ತಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.

Shwetha M