ಪಂತ್ ಗೆ ಒಂದು ಪಂದ್ಯ ನಿಷೇಧ! –  ಆರ್‌ಸಿಬಿ ಮ್ಯಾಚ್‌ಗೂ ಮುನ್ನ ಡೆಲ್ಲಿಗೆ ಭಾರಿ ಶಾಕ್‌!  

ಪಂತ್ ಗೆ ಒಂದು ಪಂದ್ಯ ನಿಷೇಧ! –  ಆರ್‌ಸಿಬಿ ಮ್ಯಾಚ್‌ಗೂ ಮುನ್ನ ಡೆಲ್ಲಿಗೆ ಭಾರಿ ಶಾಕ್‌!  

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದಾರೆ.

ಆರ್‌ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಮೇ 7ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ ಬಳಗ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿತ್ತು. ಈ ಕಾರಣದಿಂದ ಪಂತ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲ ರಿಷಭ್‌ ಪಂತ್‌ ಅವರಿಗೆ 30 ಲಕ್ಷ ದಂಡವನ್ನೂ ವಿಧಿಸಲಾಗಿದೆ.

ಇದನ್ನೂ ಓದಿ:  LSG ನಾಯಕತ್ವಗೆ ಕೆ‌ಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?

ಪಂತ್ ಪಂದ್ಯದಿಂದ ಹೊರ ಬಿದ್ದಿರೋದು ಆರ್‌‌ಸಿಬಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಯಾಕಂದ್ರೆ ಐಪಿಎಲ್ 2024ರ ಪ್ಲೇಆಫ್‌ಗಳ ರೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಳಿದಿದೆ. ಡೆಲ್ಲಿ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಡೆಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 14 ರಂದು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಮೇ  12ರಂದು ಆರ್‌‌ಸಿಬಿ ವಿರುದ್ಧ ಸೆಣಸಾಡಲಿದೆ.

ಒಟ್ಟಿನಲ್ಲಿ ಐಪಿಎಲ್ ಸೀಸನ್ 17 ಅಂತಿಮಘಟ್ಟ ತಲುಪಿದೆ. ಒಂದೊಂದು ಪಂದ್ಯಗಳು ಮುಗೀತಿದ್ದಂತೆ ಪ್ಲೇಆಫ್ ಲೆಕ್ಕಾಚಾರವೂ ತಲೆ ಕೆಳಗಾಗುತ್ತಿದೆ. 10 ತಂಡಗಳ ಪೈಕಿ ಕೆಕೆಆರ್ ಮತ್ತು ರಾಜಸ್ತಾನ್ ರಾಯಲ್ ಟಾಪ್ 2ನಲ್ಲಿದ್ದು, ಬಹುತೇಕ ಪ್ಲೇ ಆಫ್ ರೇಸ್​ಗೆ ಹೋಗೋ ನೆಚ್ಚಿನ ತಂಡಗಳಾಗಿವೆ. ಇನ್ನು ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ರೇಸ್​ನಿಂದ ಹೊರಬಿದ್ದಿವೆ. ಇನ್ನುಳಿದ 6 ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್​ ನಡೀತಾ ಇದೆ. 3 ಮತ್ತು ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿವೆ. ಆರ್​ಸಿಬಿ ಪ್ಲೇ ಆಫ್​ನಲ್ಲಿ ನಾಲ್ಕನೇ ಸ್ಥಾನಕ್ಕೆ ಹೋಗಲು ಬೇರೆ ತಂಡಗಳ ಸೋಲು ಕೂಡ ಪ್ರಮುಖ ಪಾತ್ರ ವಹಿಸುತ್ತೆ. ಮೇ 19ರವರೆಗೂ ಲೀಗ್ ಹಂತದ ಮ್ಯಾಚ್​ಗಳು ನಡೆಯಲಿವೆ. ಭಾನುವಾರ ಡಿಸಿ ವಿರುದ್ಧ ಕಣಕ್ಕಿಳಿಯೋ ಆರ್​ಸಿಬಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

Shwetha M