ಸುಪ್ರೀಂನಲ್ಲಿ ದಚ್ಚು ಪವಿ ಲಾಕ್ – ಖಾಕಿ ಮೇಲ್ಮನವಿಯಲ್ಲಿ ಏನಿದೆ?
ಡಿ ಬಾಸ್ ಬೇಲ್ ಕ್ಯಾನ್ಸಲ್?
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಐದೂವರೆ ತಿಂಗಳು ಜೈಲು ವಾಸ ಅನುಭವಿಸಿದ ನಟ ದರ್ಶನ್ ಆರೋಗ್ಯದ ನೆಪದಲ್ಲಿ ಮೊದಲು ಮಧ್ಯಂತರ ಜಾಮೀನು ಪಡೆದರು. ಇದೀಗ ಹೈಕೋರ್ಟ್ ಅವರಿಗೆ ರೆಗ್ಯುಲರ್ ಜಾಮೀನನ್ನೂ ನೀಡಿದೆ. ಇದರ ಬೆನ್ನಲ್ಲೇ ದರ್ಶನ್ ಫಾರ್ಮ್ ಹೌಸ್ ಗೆ ಅನುಮತಿ ಪಡೆದು ತೆರಳಿದ್ದು ಕುಟುಂಬ ಸದಸ್ಯರೊಂದಿಗೆ ಹಾಯಾಗಿದ್ದಾರೆ. ಈ ನಡುವೆ ಅವರು ಸಂಕ್ರಾಂತಿ ಬಳಿಕ ಶೂಟಿಂಗ್ ನಲ್ಲೂ ಭಾಗಿಯಾಗಲಿರುವ ಸುದ್ದಿಗಳು ಬರ್ತಿವೆ. ಆದರೆ ಪೊಲೀಸರು ಬೇರೆಯೇ ಲೆಕ್ಕಾಚಾರ ಹಾಕಿದ್ದು ದರ್ಶನ್ ಗೆ ಬೇಲ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಗೃಹ ಇಲಾಖೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.
ರೇಣುಕಾಸ್ವಾಮಿ ಕೇಸ್ ಪೊಲೀಸರಿಗೆ ಪ್ರತಿಷ್ಠೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿರುವುದು ಖಾಕಿಯನ್ನ ಕಂಗೆಡಿಸಿದೆ. ಈಗ ದರ್ಶನ್‌ಗೆ ಬೇಲ್ ನೀಡಿರುವುದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಯು ಪೊಲೀಸರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ದರ್ಶನ್‌ಗೆ ಢವಢವ ಶುರುವಾಗಿದೆ. ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದ ಪೊಲೀಸರು, ಗೃಹ ಇಲಾಖೆಗೆ ಪತ್ರ ಬರೆದು ಅನುಮತಿ ಕೋರಿದ್ದರು. ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದು ಪರಿಶೀಲನೆ ನಡೆಸಿರುವ ಗೃಹ ಇಲಾಖೆಯು ಪೊಲೀಸರ ಕೋರಿಕೆಗೆ ಅಸ್ತು ಎಂದಿದೆ.
ಡಿ ಗ್ಯಾಂಗ್‌ಗೆ ಮತ್ತೆ ಜೈಲಾಗುತ್ತಾ?
ರೇಣುಕಾಸ್ವಾಮಿ ಕೇಸ್‌ನಲ್ಲಿ ಡಿ ಗ್ಯಾಂಗ್ ಇದೆ ಅನ್ನೋದಕ್ಕೆ ಪತ್ತೆ ಹಚ್ಚಿದ್ದು ಪೊಲೀಸರು.. ದರ್ಶನ್‌ನನ್ನ ರಾಜಾರೋಷವಾಗಿ ಅರೆಸ್ಟ್ ಕೂಡ ಮಾಡಿ 6 ತಿಂಗಳು ಜೈಲಿನಲ್ಲಿ ಇರುವಂತೆ ಪೊಲೀಸರು ಮಾಡಿದ್ರು.. ಇದನ್ನ ನೋಡಿದ ಜನ ಪೊಲೀಸ್‌ರನ್ನ ಹೊಗಳಿದ್ರು. ಇಂತಹ ದೊಡ್ಡ ನಟನನ್ನ ಅರೆಸ್ಟ್ ಮಾಡಿದ್ದು, ನಿಜಕ್ಕೂ ಗ್ರೇಟ್ ಎನ್ನುತ್ತಿದ್ದರು.. ಆದ್ರೆ ಈ ಕೇಸ್‌ನಲ್ಲಿ ಡಿ ಗ್ಯಾಂಗ್‌ನ ಅಷ್ಟೂ ಜನಕ್ಕೆ ಬೇಲ್ ಸಿಕ್ಕಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಒಂದಿಷ್ಟು ಸಾಕ್ಷಿಗಳು, ಹೇಳಿಕೆಗಳಿದ್ರು ಪೊಲೀಸರು ಈ ಕೇಸ್‌ನಲ್ಲಿ ಎಡವಿದ್ದಾರೆ.. ಹೀಗಾಗಿ ಇದು ಪೊಲೀಸರಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಸುಪ್ರೀಂ ಮೆಟ್ಟಿಲು ಹತ್ತೋಕೆ ಮುಂದಾಗಿದ್ದಾರೆ.. ಅಲ್ಲಿ ನಾವು ಹೋರಾಟ ಮಾಡಿ ದರ್ಶನ್ ಅಂಡ್ ಗ್ಯಾಂಗ್‌ನ್ನ ಜೈಲಿಗೆ ಕಳುಹಿಸುತ್ತೇವೆ ಅಂತ ಪಣ ತೊಟ್ಟಿದ್ದಾರೆ. ಸುಪ್ರೀಂಕೋರ್ಟ್ ಪ್ರಕರಣ ಕೈಗೆತ್ತಿಕೊಂಡು ಜಾಮೀನು ರದ್ದುಪಡಿಸಿದರೆ ಎಲ್ಲಾ ಆರೋಪಿಗಳು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡನೆಗೆ ಅನುಭವಿ ವಕೀಲರ ನೇಮಕಕ್ಕೆ ದರ್ಶನ್ ಚಿಂತನೆ ನಡೆಸಿದ್ದಾರೆ. ಸರ್ಜರಿ ವಿಷ್ಯದಲ್ಲಿ ದರ್ಶನ್ ಸುಳ್ಳು ಹೇಳಿದ್ದಾರೆ ಅಂತ ಕೂಡ ಸುಪ್ರೀಂನಲ್ಲಿ ಪೊಲೀಸರು ಮೇಲ್ಮನವಿ ಸಲ್ಲಿಸಬಹುದು. ಸರ್ಜರಿ ಮಾಡಿಸಿಲ್ಲ ಅಂದ್ರೆ ಜೀವಕ್ಕೆ ಆಪತ್ತಿದೆ, ಲಕ್ವಾ ಹೊಡೆಯಬಹುದು ಅಂತಾ ಜಾಮೀನು ಪಡೆದಿದ್ರು..ಆದ್ರೆ ಯಾವ ಆಪರೇಷನ್ ಕೂಡ ಮಾಡಿಸಿಲ್ಲ.. ಇದನ್ನ ಇಟ್ಕೊಂಡು ಹಾಗೂ ಪ್ರಮುಖ ಸಾಕ್ಷಿ ಆಧಾರಗಳನ್ನ ಇನ್ನಷ್ಟು ಸ್ಟ್ರಾಂಗ್ ಮಾಡ್ಕೊಂಡು ಕನ್ನಡದಿಂದ ಇಂಗ್ಲೀಷ್‌ಗೆ ಚಾರ್ಜ್‌ಶೀಟ್ ಟ್ರಾನ್ಸ್ಲೇಟ್ ಮಾಡಿ ಸುಪ್ರೀಂಗೆ ಮೇಲ್ಮವಿ ಸಲ್ಲಿಸಲಿದ್ದಾರೆ. ಒಟ್ನಲ್ಲಿ ಬೇಲ್ ಸಿಗ್ತು, ಸ್ವಲ್ಪ ರೆಸ್ಟ್ ಮಾಡಿ ಮತ್ತೆ ಶೂಟಿಂಗ್‌ಗೆ ಹೋಗ್ತಿನಿ ಎನ್ನುತ್ತಿದ್ದ ದರ್ಶನ್‌ಗೆ ಪೊಲೀಸರು ಮತ್ತೆ ಬಿಗ್ ಶಾಕ್ ನೀಡಿದ್ದಾರೆ..