ಮದ್ಯ ಪ್ರಿಯರಿಗೆ ಬಿಗ್ ಶಾಕ್! – ಬಿಯರ್ ರೇಟ್ ಮತ್ತೆ ಹೆಚ್ಚಿಸಲಿದೆ ಸರ್ಕಾರ!
ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್‌ನ್ಯೂಸ್ ಒಂದನ್ನ ನೀಡಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇಕಡ ಹತ್ತರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.
2023ರ ಜುಲೈ ತಿಂಗಳಲ್ಲಿ ಭಾರತೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 20ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 10ರಷ್ಟು ಹೆಚ್ಚಳ ಮಾಡಲಾಗಿತ್ತು. ಆರು ತಿಂಗಳಲ್ಲೇ ಮತ್ತೊಮ್ಮೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಇದೀಗ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇಕಡ ಹತ್ತರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದೆ. 650 ಮಿ.ಲೀ. ಅಳತೆಯ ಪ್ರತಿ ಬಾಟಲಿ ಬಿಯರ್‌ನ ದರದಲ್ಲಿ ₹ 8ರಿಂದ ₹ 10ರವರೆಗೆ ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದರೆ ಗ್ರಾಹಕರ ಜೇಬಿಗೆ ಹೊರೆ ಬೀಳಲಿದೆ.
ಇದನ್ನೂ ಓದಿ: ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ರೀಲ್ಸ್ ಟೀಚರ್ ಶವ – ಶಿಕ್ಷಕಿಯ ಬರ್ಬರ ಹತ್ಯೆಗೆ ಕಾರಣವೇನು?
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇಕಡ 185ರಿಂದ ಶೇ 195ಕ್ಕೆ ಏರಿಕೆ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು- 2024ರ ಕರಡನ್ನು ಶನಿವಾರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಅವಕಾಶ ಕಲ್ಪಿಸುವ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಶನಿವಾರದಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲು ಅವಕಾಶವಿದೆ.
‘ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. 650 ಮಿ.ಲೀ. ಅಳತೆಯ ಪ್ರತಿ ಬಾಟಲ್ ಬಿಯರ್‌ನ ದರದಲ್ಲಿ ₹ 8ರಿಂದ 10ರವರೆಗೂ ಏರಿಕೆಯಾಗಲಿದೆ’ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.