RCB ಪ್ಲೇಆಫ್ಸ್ ಆಡಲ್ಲ ಸಾಲ್ಟ್ – ಮೊದಲ ಮಗುವಿಗಾಗಿ ವಿದೇಶಕ್ಕೆ ವಾಪಸ್
ಕೊಹ್ಲಿ ಜೊತೆ ಯಾರಾಗ್ತಾರೆ ಓಪನರ್?

RCB ಪ್ಲೇಆಫ್ಸ್ ಆಡಲ್ಲ ಸಾಲ್ಟ್ – ಮೊದಲ ಮಗುವಿಗಾಗಿ ವಿದೇಶಕ್ಕೆ ವಾಪಸ್ಕೊಹ್ಲಿ ಜೊತೆ ಯಾರಾಗ್ತಾರೆ ಓಪನರ್?

18 ನೇ ಆವೃತ್ತಿಯಲ್ಲಿ ಐಪಿಎಲ್ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಆಗಿ ಕಾಣ್ತಿರೋ ಆರ್​ಸಿಬಿ ಈ ಸೀಸನ್​ನಲ್ಲಿ ಅದ್ಭುತ ಪ್ರದರ್ಶನಗಳನ್ನ ನೀಡಿದೆ. ಪ್ಲೇಆಫ್ಸ್​ಗೂ ಕ್ವಾಲಿಫೈ ಆಗಿದೆ. ಮೇ 27ಕ್ಕೆ ಲಕ್ನೋ ವಿರುದ್ಧ ಲೀಗ್ ಹಂತದ ಕೊನೇ ಪಂದ್ಯವನ್ನ ಆಡಲಿದ್ದು ನಾಕೌಟ್ ಸುತ್ತಿನಲ್ಲಿ ಯಾವ ಸ್ಥಾನ ಪಡೆಯುತ್ತೆ ಅನ್ನೋದು ಕನ್ಪರ್ಮ್ ಆಗುತ್ತೆ. ಆ ಬಳಿಕ ಟಾಪ್-2ನಲ್ಲಿದ್ರೆ ಕ್ವಾಲಿಫೈಯರ್ 1 ಅಥವಾ ಮೂರು, ನಾಲ್ಕನೇ ಸ್ಥಾನದಲ್ಲಿದ್ರೆ ಎಲಿಮಿನೇಟರ್ ಮ್ಯಾಚಲ್ಲಿ ಕಣಕ್ಕಿಳಿಯಬೇಕಾಗುತ್ತೆ. ಬಟ್ ಪ್ಲೇಆಫ್ಸ್​ಗೂ ಮುನ್ನವೇ ಸಾಲ್ಟ್ ಆರ್​ಸಿಬಿ ತೊರೆಯೋ ಆತಂಕ ಎದುರಾಗಿದೆ.

ಇದನ್ನೂ ಓದಿ : ಪಾಯಿಂಟ್ಸ್‌ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದ ಬೆಂಗಳೂರು ಟೀಂ! – ಪ್ಲೇಆಫ್‌ನಲ್ಲಿ RCBಗೆ ಎದುರಾಳಿ ಯಾರು?

ಆರ್​​ಸಿಬಿ ತಂಡದ ಸ್ಫೋಟಕ ಬ್ಯಾಟರ್ ಆಗಿರುವ ಫಿಲ್ ಸಾಲ್ಟ್ ಓಪನರ್ ಆಗಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಬಟ್ ಈಗಾಗಲೇ ಜ್ವರದಿಂದಾಗಿ ಚೆನ್ನೈ ಹಾಗೂ ಡೆಲ್ಲಿ ವಿರುದ್ಧದ ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ರಿಕವರ್ ಆಗಿ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ರು. 62 ರನ್ ಬಾರಿಸಿ ಅಬ್ಬರಿಸಿದ್ರು. ಆದರೆ ಗುಜರಾತ್, ಪಂಜಾಬ್ ಹಾಗೂ ಮುಂಬೈ ವಿರುದ್ಧದ ಪ್ಲೇ ಆಫ್​ ಪಂದ್ಯಗಳನ್ನು ಸಾಲ್ಟ್ ಆಡುವುದು ಅನುಮಾನವಿದೆ. ಯಾಕಂದ್ರೆ ಸಾಲ್ಟ್ ಅವರ ಗೆಳತಿ ಅಬಿ ಮೆಕ್ಲಾವೆನ್ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಸಾಲ್ಟ್​ ವಿದೇಶಕ್ಕೆ ವಾಪಸ್ ಆಗುವ ಸಾದ್ಯತೆ ಇದೆ. ಫಿಲ್ ಸಾಲ್ಟ್ ಹಾಗೂ ಅಬಿ ಮೆಕ್ಲಾವೆನ್ ಅವರು 2020 ರಿಂದಲೂ ಲಿವಿಂಗ್ ಟುಗೆದರ್ ಇದ್ದಾರೆ. ಅಬಿ ಮೆಕ್ಲಾವೆನ್ ಅವರು ಸೋಶಿಯಲ್​ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆರ್​ಸಿಬಿ ಪರ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಫಿಲ್ ಸಾಲ್ಟ್​, ಕೊಹ್ಲಿ ಜೊತೆ ಸೇರಿ ಆರಂಭದಲ್ಲೇ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮಾಡಿದ್ದಾರೆ. ತಂಡದ ಪರ 10 ಪಂದ್ಯಳನ್ನು ಆಡಿರುವ ಸಾಲ್ಟ್​, 172ರ ಸ್ಟ್ರೈಕ್​ ರೇಟ್​ನೊಂದಿಗೆ 301 ರನ್​ಗಳನ್ನು ಗಳಿಸಿದ್ದಾರೆ. ಆದರೆ ಲೀಗ್ ಹಂತದಲ್ಲಿ ಲಕ್ನೋ ವಿರುದ್ಧದ ಪಂದ್ಯವೇ ಅವ್ರಿಗೆ ಕೊನೇ ಪಂದ್ಯವಾಗುವ ಸಾಧ್ಯತೆ ಇದೆ. ಆ ನಂತರ ನಡೆಯುವ ಪ್ಲೇ ಆಫ್​​ ಪಂದ್ಯಗಳಿಂದ ಸಾಲ್ಟ್​ ಹೊರಗುಳಿಯುವ ಸಾಧ್ಯತೆ ಇದೆ. ಹಾಗೇನಾದ್ರೂ ಸಾಲ್ಟ್ ತಂಡದಿಂದ ಹೊರ ನಡೆದಿದ್ರೆ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭ ಮಾಡೋರು ಯಾರು ಅನ್ನೋ ಪ್ರಶ್ನೆಯೂ ಮೂಡಿದೆ.

ಇಷ್ಟು ದಿನ ಚೆನ್ನಾಗಿ ಇದ್ದ ಆರ್​ಸಿಬಿ ಜರ್ನಿ ಪ್ಲೇಆಫ್ಸ್ ಹೊಸ್ತಿಲಲ್ಲಿ ತೂಗುಯ್ಯಾಲೆಯಾಡ್ತಿದೆ. ಇಗಾಗ್ಳೇ  ನ್ಯಾಷನಲ್ ಡ್ಯೂಟಿಗಾಗಿ ಜೇಕಪ್ ಬೆಥೆಲ್ ಕೂಡ ತವರಿಗೆ ವಾಪಸ್ ಆಗ್ತಿದ್ದಾರೆ. ದೇವದತ್ ಪಡಿಕ್ಕಲ್ ಇಡೀ ಸೀಸನ್​ನಿಂದ ರೂಲ್ಡ್ ಔಟ್ ಆಗಿದ್ದಾರೆ. ಮಯಾಂಕ್ ತಂಡ ಸೇರಿದ್ರೂ ಫಾರ್ಮ್​ಗೆ ಬಂದಿಲ್ಲ. ಈಗಾಗ್ಳೇ ಲುಂಗಿ ಎನ್​ಗಿಡಿ, ರೊಮ್ಯಾರಿಯೋ ಶೆಫರ್ಡ್ ಕೂಡ ನಾಕೌಟ್ ಪಂದ್ಯಗಳನ್ನ ಆಡುವುದಿಲ್ಲ ಎನ್ನಲಾಗ್ತಿದೆ. ನಾಯಕ ರಜತ್ ಗಾಯದಿಂದ ಬಳಲುತ್ತಿದ್ದು ಬ್ಯಾಟಿಂಗ್ ಪ್ರದರ್ಶನ ಅಷ್ಟಕ್ಕಷ್ಟೇ ಇದೆ. ಇದೆಲ್ಲದ್ರ ನಡುವೆ ಟಿಮ್ ಡೇವಿಡ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡಿದ್ದಾರೆ. ಸೋ ಇಂಥಾ ಟೈಮಲ್ಲೇ ಫಿಲ್ ಸಾಲ್ಟ್ ಕೂಡ​ ಫಾರೀನ್​ಗೆ ಹೋದರೆ ಆರ್​ಸಿಬಿ ದೊಡ್ಡ ಹಿನ್ನಡೆ ಆಗಲಿದೆ.

Shantha Kumari