ಬಿಗ್ ಸ್ಟಾರ್ಸ್.. UNSOLD ಟೆನ್ಷನ್ – ಬಿಡ್ ಆಗದಿದ್ರೆ IPLನಿಂದ ನಿವೃತ್ತಿ?
ಮ್ಯಾಕ್ಸಿ, ಫಾಫ್, ತ್ರಿಪಾಠಿ ಯಾರೆಲ್ಲಾ?

2026ರ ಐಪಿಎಲ್ ಮಿನಿ ಆಕ್ಷನ್ನಲ್ಲಿ ಅಚ್ಚರಿಯ ಆಟಗಾರರೇ ಇದ್ದಾರೆ. ಸಾಕಷ್ಟು ಸೀಸನ್ಗಳಲ್ಲಿ ಸಿಂಗಲ್ಲಾಗಿ ನಿಂತು ಪಂದ್ಯಗಳನ್ನ ಗೆಲ್ಲಿಸಿಕೊಟ್ಟವ್ರೂ ಹರಾಜಿನ ಅಖಾಡದಲ್ಲಿದ್ದಾರೆ. ಆದ್ರೆ ಈ ಬಾರಿಯ ಮಿನಿ ಆಕ್ಷನ್ನಲ್ಲಿ ಅನ್ಸೋಲ್ಡ್ ಆದ್ರೂ ಅಂದ್ರೆ ಬಹುಶಃ ಅವ್ರ ಐಪಿಎಲ್ ಕರಿಯರ್ ಎಂಡ್ ಆದಂತೆಯೇ ಲೆಕ್ಕ. ಅಬುದಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರೋ ಐಪಿಎಲ್ ಮಿನಿ ಆಕ್ಷನ್ ಮೇಲೆ ಎಲ್ಲರ ಕಣ್ಣಿದೆ. ಕೆಲ ಆಟಗಾರರು ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ರೆ ಇನ್ನೂ ಕೆಲವ್ರೂ ಬಿಡ್ ಆದ್ರೆ ಸಾಕಷ್ಟ ಅನ್ನೋ ಟೆನ್ಷನ್ನಲ್ಲಿದ್ದಾರೆ. ಈ ಬಾರಿ ಸ್ಟಾರ್ ಆಟಗಾರರೇ ಅನ್ಸೋಲ್ಟ್ ಆತಂಕದಲ್ಲಿದ್ದಾರೆ. ಅದ್ರಲ್ಲಿ ನಂಬರ್ 1 ಗ್ಲೆನ್ ಮ್ಯಾಕ್ಸ್ವೆಲ್.
ಅನ್ ಸೋಲ್ಡ್ ಆದ್ರೆ ಮ್ಯಾಕ್ಸಿ ಐಪಿಎಲ್ ಆಟ ಬಂದ್?
ಆರ್ಸಿಬಿ ಅಭಿಮಾನಿಗಳಿಗಂತೂ ಗ್ಲೆನ್ ಮ್ಯಾಕ್ಸ್ವೆಲ್ ಚೆನ್ನಾಗೇ ಗೊತ್ತು. ಆರಂಭದಲ್ಲಿ ಅವ್ರ ಅದ್ಭುತ ಆಟದಿಂದ ಸದ್ದು ಮಾಡಿದ್ರೆ ಆ ನಂತ್ರ ತಮ್ಮ ಫೇಲ್ಯೂರ್ನಿಂದಲೇ ಟೀಕೆಗೆ ಗುರಿಯಾಗಿದ್ರು. 2024ರ ಐಪಿಎಲ್ ಬಳಿಕ ಆರ್ಸಿಬಿಯಿಂದ ರಿಲೀಸ್ ಆದ್ಮೇಲೆ ಪಂಜಾಬ್ ತಂಡ ಸೇರಿಕೊಂಡಿದ್ರು. ಆದ್ರೆ 2025ರ ಐಪಿಎಲ್‌ನಲ್ಲಿ ಪಂಜಾಬ್ ಪರವೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಐಪಿಎಲ್ 2024 ರಲ್ಲಿ ಕೇವಲ 53 ರನ್‌ಗಳು ಮತ್ತು ಐಪಿಎಲ್ 2025 ರಲ್ಲಿ 48 ರನ್‌ಗಳನ್ನು ಗಳಿಸಿದ್ರು. ಇತ್ತೀಚಿನ ದಿನಗಳಲ್ಲಿ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆಯೇ ಆಡ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮ್ಯಾಕ್ಸಿ ಮೇಲೆ ಬಿಗ್ ಮಾಡೋಕೆ ಫ್ರಾಂಚೈಸಿಗಳು ಹಿಂದೆ ಮುಂದೆ ನೋಡ್ತಿವೆ. ಹಾಗೇನಾದ್ರೂ ಈ ಸಲ ಸೇಲ್ ಆಗ್ದಿದ್ರೆ ಮ್ಯಾಚ್ ಐಪಿಎಲ್ ಆಟ ಎಂಡ್ ಅನ್ನಬಹುದು. ಹಾಗೇ ಫಾಫ್ ಡುಪ್ಲೆಸಿಸ್ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಫಾಫ್ ಡುಪ್ಲೆಸಿಸ್ ಮೇಲೆಯೂ ನಿವೃತ್ತಿ ತೂಗುಗತ್ತಿ!
ಮೂರು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಕೂಡ ಮಿನಿ ಹರಾಜಿನಲ್ಲಿದ್ದಾರೆ. ಆದ್ರೆ ಬಿಡ್ ಆಗೋದು ಅನುಮಾನ ಇದೆ. 41 ವರ್ಷದ ಡುಪ್ಲೆಸಿಸ್ 2024ರ ಆವೃತ್ತಿಯಲ್ಲಿ ಬೆಂಗಳೂರು ತಂಡವನ್ನ ಪ್ಲೇಆಫ್ಗೆ ಮುನ್ನಡೆಸಿದ್ರು. ಹಾಗೇ ತಂಡದ ಪರ 438 ರನ್‌ಗಳನ್ನು ಕಲೆ ಹಾಕಿದ್ರು. ಬಟ್ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 202 ರನ್‌ಗಳನ್ನು ಗಳಿಸಿದರು. ಅಲ್ದೇ ಡುಪ್ಲೆಸಿಸ್ ಗೆ 41 ವರ್ಷ ವಯಸ್ಸಾಗಿದ್ದು ಫ್ಯೂಚರ್ ದೃಷ್ಟಿಯೀಂದ ಫ್ರಾಂಚೈಸಿಗಳು ಬಿಡ್ ಮಾಡೋ ಚಾನ್ಸಸ್ ಕಡಿಮೆ ಇದೆ. ಹಾಗೇನಾದ್ರೂ ಅನ್ ಸೋಲ್ಡ್ ಆದ್ರೆ ಐಪಿಎಲ್ಗೆ ನಿವೃತ್ತಿ ಘೋಷಣೆ ಮಾಡ್ಬೋದು.
ರಾಹುಲ್ ತ್ರಿಪಾಠಿಗೂ ಕಾಡ್ತಿದೆ ಭಯ!
ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಪ್ರತಿಭಾನ್ವಿತ ಆಟಗಾರ ಅಂತಾನೇ ಕರೆಸಿಕೊಳ್ತಿದ್ದ ರಾಹುಲ್ ತ್ರಿಪಾಠಿ ಅವ್ರ ಐಪಿಎಲ್ ಕೆರಿಯರ್ ಗ್ರಾಫ್ ಕೂಡ ಇಳೀತಾ ಇದೆ. 2022 ರ ಮೆಗಾ ಹರಾಜಿನಲ್ಲಿ ಕೆಕೆಆರ್ನಿಂದ ಹೊರಬಿದ್ದ ಮೇಲೆ ಪ್ರದರ್ಶನ ಅಷ್ಟಕ್ಕಷ್ಟೇ ಇದೆ. ಸದ್ಯ ಸಿಎಸ್ಕೆ ಪರ ಆಡ್ತಿದ್ದ ತ್ರಿಪಾಠಿ ಕಳಪೆ ಫಾರ್ಮ್ನಲ್ಲಿದ್ದಾರೆ. ತಂಡದಿಂದ ರಿಲೀಸ್ ಆಗಿದ್ದು ಯಾವುದೇ ಫ್ರಾಂಚೈಸಿ ಖರೀದಿ ಮಾಡದಿದ್ರೆ ಭವಿಷ್ಯ ಮುಗಿದಂತೆಯೇ ಲೆಕ್ಕವಾಗುತ್ತೆ.
ಐಪಿಎಲ್ ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹೂಡಾ ಹೆಣಗಾಟ!
ಒಂದು ಕಾಲದಲ್ಲಿ ಭರವಸೆಯ ಆಲ್‌ರೌಂಡರ್ ಎಂದು ಪರಿಗಣಿಸಲ್ಪಟ್ಟಿದ್ದ ದೀಪಕ್ ಹೂಡಾ ಭಾರತ ಪರ ಟಿ20 ಅಂತರರಾಷ್ಟ್ರೀಯ ಶತಕ ಗಳಿಸಿದ್ರು. ಆದ್ರೀಗ ಐಪಿಎಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೆಣಗಾಡಿದ್ದಾರೆ. ಸಿಎಸ್ಕೆ ಪರ 2025 ರ ಋತುವಿನ ಕಳಪೆ ಪ್ರದರ್ಶನವು ಹರಾಜಿನಲ್ಲಿ ಬೇರೆ ತಂಡಗಳು ಇವ್ರ ಮೇಲೆ ಇಂಟ್ರೆಸ್ಟ್ ತೋರಿಸುತ್ವೋ ಇಲ್ವೋ ಅನ್ನೋ ಅನುಮಾನ ಮೂಡಿಸಿವೆ.
ಕಾರ್ತಿಕ್ ತ್ಯಾಗಿ, ಮೊಯಿನ್ ಅಲಿ, ಮೋಹಿತ್ ಶರ್ಮಾರದ್ದೂ ಅದೇ ಕಥೆ!
ಇನ್ನು ಐಪಿಎಲ್ ಮಿನಿ ಆಕ್ಷನ್ ಅಖಾಡದಲ್ಲಿರೋ ಕಾರ್ತಿಕ್ ತ್ಯಾಗಿ, ಮೊಯಿನ್ ಅಲಿ, ಮೋಹಿತ್ ಶರ್ಮಾ ಹಾಗೇ ವಿಜಯ್ ಶಂಕರ್ರದ್ದೂ ಇದೇ ಕಥೆ. ಕಳೆದ ಆವೃತ್ತಿಯಲ್ಲಿ ನಿರೀಕ್ಷಿಯ ಪ್ರದರ್ಶನ ಬಂದಿಲ್ಲ. ಹೀಗಾಗಿ ಅನ್ಸೋಲ್ಡ್ ಟೆನ್ಷನ್ನಲ್ಲಿದ್ದಾರೆ. ಒಟ್ನಲ್ಲಿ ಒಂದು ಕಾಲಕ್ಕೆ ಸ್ಟಾರ್ ಆಟಗಾರರಗಾಗಿ ಪಂದ್ಯದ ದಿಕ್ಕನ್ನೇ ಬದಲಿಸೋ ಸಾಮರ್ಥ್ಯ ಇದ್ದವ್ರು ಈಗ ಯಾವುದಾದ್ರೂ ಟೀಂ ಸೇರಿಕೊಂಡ್ರೆ ಅನ್ನೋ ಲೆವೆಲ್ಗೆ ಬಂದಿದ್ದಾರೆ.

ನೋಡಿರಿ

