ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ – INS ಸುಮಿತ್ರಾ ಮೂಲಕ ಬಿಗ್ ಆಪರೇಷನ್
ಭಾರತೀಯ ನೌಕಪಡೆ ಮತ್ತೊಂದು ಯಶಸ್ವಿ ಕಾರ್ಯಾಚರಣೆಯನ್ನು ಮಾಡಿದೆ. ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ 19 ಪಾಕಿಸ್ತಾನಿ ನಾಗರಿಕರನ್ನು ರೋಚಕವಾಗಿ ರಕ್ಷಣೆ ಮಾಡಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಹೊತ್ತಿ ಉರಿದ ಹನುಮಜ್ವಾಲೆ – ಇದು ದೈವಭಕ್ತಿಯೋ ಅಥವಾ ರಾಜಕೀಯ ತಂತ್ರವೋ..?
ಪಾಕಿಸ್ತಾನದ Al Naeemi ಹಡಗು ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಸೋಮಾಲಿಯ ಕಡಲ್ಗಳ್ಳರು ಪಾಕಿಸ್ತಾನಿ ಪ್ರಜೆಗಳನ್ನು ಅಪಹರಣ ಮಾಡಲು ಪ್ರಯತ್ನಿಸಿದ್ದರು. ಇದು ಗೊತ್ತಾಗುತ್ತಿದ್ದಂತೆಯೇ ಭಾರತೀಯ ನೌಕಾ ಪಡೆ ಫೀಲ್ಡಿಗಿಳಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸುಮಿತ್ರಾ ಮೂಲಕ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಸೋನಾಲಿಯಾ ಕಡಲ ತೀರದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಹಡಗನ್ನು ಸುರಕ್ಷಿತವಾಗಿ ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.
ಶಸ್ತ್ರಸಜ್ಜಿತವಾಗಿ ಬಂದಿದ್ದ ಕಡಲ್ಗಳ್ಳರ ಪ್ಲಾನ್ ಅನ್ನು ಹಿಮ್ಮೆಟ್ಟಿ, ಪಾಕಿಸ್ತಾನಿ ಮೀನುಗಾರರನ್ನು ಹಾಗೂ ಹಡಗನ್ನು ರಕ್ಷಣೆ ಮಾಡಿ ಕಳುಹಿಸಿದೆ ಎಂದು ನೌಕಾ ಸೇನೆ ಎಕ್ಸ್ನಲ್ಲಿ ಮಾಹಿತಿ ನೀಡಿದೆ.
ಈ ಹಿಂದೆ ಐಎಎಸ್ ಸುಮಿತ್ರಾದಲ್ಲಿ 17 ಸಿಬ್ಬಂದಿ ಇದ್ದರು. ಭಾರತೀಯ ನೌಕಾಪಡೆಯ ಯುದ್ಧನೌಕೆಯು ಸೋಮಾಲಿಯಾದ ಪೂರ್ವ ಕರಾವಳಿ ಮತ್ತು ಏಡನ್ ಕೊಲ್ಲಿಯಲ್ಲಿ ಕಾವಲಿಗೆ ನಿಯೋಜಿಸಲಾಗಿದೆ. ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ ಐಎಎನ್ ಸುಮಿತ್ರ ಸೈ ಎನಿಸಿಕೊಂಡಿದೆ. ಈ ಹಿಂದೆ ಐಎಎಸ್ ಸುಮಿತ್ರಾ ಇರಾನಿಯನ್-ಫ್ಲಾಗ್ ಹೊಂದಿದ್ದ ಎಂವಿ ಇಮಾನ್ ಹಡಗನ್ನು ರಕ್ಷಣೆ ಮಾಡಿತ್ತು.