ಡೆಲ್ಲಿಗಾಗಿ ಗೋಡೆ-ದಾದಾ ಒಂದಾದ್ರಾ? – ರಿಕಿಗೆ ಕೊಕ್.. ದ್ರಾವಿಡ್ DC ಕೋಚ್?
ತಂಡದ ಫೇಲ್ಯೂರ್​ಗೆ ಮೊದಲ ತಲೆದಂಡ

ಡೆಲ್ಲಿಗಾಗಿ ಗೋಡೆ-ದಾದಾ ಒಂದಾದ್ರಾ? – ರಿಕಿಗೆ ಕೊಕ್.. ದ್ರಾವಿಡ್ DC ಕೋಚ್?ತಂಡದ ಫೇಲ್ಯೂರ್​ಗೆ ಮೊದಲ ತಲೆದಂಡ

2024ರ ಐಪಿಎಲ್ ಇತ್ತೀಚೆಗಷ್ಟೇ ಮುಗಿದಿದ್ರೂ ಕೂಡ ಎಲ್ಲಾ ಫ್ರಾಂಚೈಸಿಗಳ ಚಿತ್ತ 2025ರ ಐಪಿಎಲ್​ನತ್ತ ನೆಟ್ಟಿದೆ. ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ಮೇಜರ್ ಸರ್ಜರಿಗಳನ್ನ ಶುರು ಮಾಡಿವೆ.  ಅದ್ರಲ್ಲೂ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಸ್ಥಾನದಿಂದ ರಿಕಿ ಪಾಂಟಿಂಗ್​ಗೆ ಗೇಟ್​ಪಾಸ್​ ನೀಡಲಾಗಿದೆ. 2018 ರಿಂದ 7 ಸೀಸನ್‌ಗಳ ಕಾಲ ಡೆಲ್ಲಿ ಫ್ರಾಂಚೈಸಿ ಪರ ಸೇವೆ ಸಲ್ಲಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಡ್​ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಪಾಂಟಿಂಗ್ ಅಧಿಕಾರಕ್ಕೇರಿದ ಮೊದಲ ವರ್ಷವೇ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೇ ಸ್ಥಾನ ಪಡೆದಿತ್ತು. ಬಳಿಕ ಡಿಸಿ 2019, 2020 ಮತ್ತು 2021 ರಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆದಿತ್ತು. 2020ರಲ್ಲಿ ಡೆಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಕಪ್ ಗೆಲ್ಲಲು ವಿಫಲವಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್​ಅಪ್​ ಆಗಿತ್ತು. ಆದ್ರೆ ಇತ್ತೀಚಿನ ಸೀಸನ್​​ಗಳಲ್ಲಿ ತಂಡ ಹೆಣಗಾಡುತ್ತಿದೆ. ಕಳೆದ 3 ಸೀಸನ್​ಗಳಲ್ಲೂ ಪ್ಲೇಆಫ್​ಗೂ ಎಂಟ್ರಿ ಕೊಟ್ಟಿಲ್ಲ. 2024ರ ಸೀಸನ್​ನಲ್ಲಿ ಏಳನೇ ಸ್ಥಾನ ಪಡೆದಿತ್ತು.  ತಂಡದ ಕಳಪೆ ಪ್ರದರ್ಶನದಿಂದಲೇ ಈ ತೀರ್ಮಾನ ಕೈಗೊಳ್ಳಲಾಗಿದೆ ಅಂತಾ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಈ ವಿಚಾರ ಹೊರಬಿದ್ದಿದ್ದೆ ತಡ, ಚಾಂಪಿಯನ್​ ಕೋಚ್​ ರಾಹುಲ್ ದ್ರಾವಿಡ್ ಡೆಲ್ಲಿ ಕ್ಯಾಪಿಟಲ್ಸ್​ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಡೆಲ್ಲಿ ಕ್ಯಾಪಿಟಲ್ಸ್​​ನ ಡೈರೆಕ್ಟರ್​ ಸೌರವ್​ ಗಂಗೂಲಿ. ಗಂಗೂಲಿಯ ಈ ಒಂದು ಮಾತು ಭಾರೀ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಐಪಿಎಲ್​ ಸೀಸನ್​-18ರ ಆರಂಭಕ್ಕೆ ಬರೋಬ್ಬರಿ 8 ತಿಂಗಳು ಬಾಕಿಯಿದೆ. ಡಿಸೆಂಬರ್​​ ಆರಂಭದಲ್ಲಿ ಮೆಗಾ ಹರಾಜು ನಡೆಯಲಿದೆ. ಅದಕ್ಕೂ ಮುನ್ನವೇ ಐಪಿಎಲ್ ತಂಡಗಳಲ್ಲಿ ಬದಲಾವಣೆ ಪರ್ವ ಶುರುವಾಗಿದೆ.

ದ್ರಾವಿಡ್ ಗೆ ಭರ್ಜರಿ ಡಿಮ್ಯಾಂಡ್!

ರಿಕಿ ಪಾಂಟಿಂಗ್​ಗೆ ಗೇಟ್​ ಪಾಸ್ ನೀಡಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಕೋಚ್ ಯಾರ್ ಆಗ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಡೆಲ್ಲಿ ಫ್ರಾಂಚೈಸಿಯ ಡೈರೆಕ್ಟರ್​ ಆಫ್​ ಆಪರೇಶನಲ್​ ಹೆಡ್​ ಸೌರವ್ ಗಂಗೂಲಿ ನೀಡಿರುವ ಒಂದು ಹೇಳಿಕೆ, ಟೀಮ್​ ಇಂಡಿಯಾದ ಮಾಜಿ ಕೋಚ್​ ರಾಹುಲ್ ದ್ರಾವಿಡ್, ಡೆಲ್ಲಿ ತಂಡದ ಕೋಚ್ ಹುದ್ದೆಗೇರ್ತಾರಾ ಎಂಬ ಅನುಮಾನ ಹುಟ್ಟಿ ಹಾಕಿದೆ. ನಾನು 2025ರ ಐಪಿಎಲ್​​ಗೆ ಯೋಜನೆ ರೂಪಿಸಬೇಕಿದೆ. ಒಮ್ಮೆಯಾದ್ರೂ ಡೆಲ್ಲಿ ಕ್ಯಾಪಿಟಲ್ಸ್​ ಐಪಿಎಲ್ ಟ್ರೋಫಿ ಗೆಲ್ಲಲು ಬಯಸುತ್ತೇನೆ. ಮೆಗಾ ಹರಾಜು ನಡೆಯಲಿದ್ದು, ಈಗಿನಿಂದ ಯೋಜನೆ ರೂಪಿಸಲು ಮುಂದಾಗಿದ್ದೇನೆ. ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿರುವುದಿಲ್ಲ. ನಾನು ಫ್ರಾಂಚೈಸಿ ಜೊತೆ ಮಾತನಾಡಬೇಕು. ಹುದ್ದೆಗೆ ಭಾರತೀಯ ಕೋಚ್​ನ ನೋಡಲು ಕೇಳಬೇಕು ಎಂದಿದ್ದಾರೆ ಗಂಗೂಲಿ. ಗಂಗೂಲಿ ನೀಡಿರುವ ಭಾರತೀಯ ಕೋಚ್​ನ ನೋಡಬೇಕು ಎಂಬ ಹೇಳಿಕೆಯೇ ಹೊಸ ಚರ್ಚೆಗೆ ಕಾರಣವಾಗಿದೆ.  ಟೀಮ್​ ಇಂಡಿಯಾಗೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ರಾಹುಲ್​ ದ್ರಾವಿಡ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿದ್ದು, ಗಂಗೂಲಿ ಕೂಡ ಗಾಳ ಹಾಕ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ರಾಹುಲ್ ದ್ರಾವಿಡ್​ ಕೂಡ ಈ ಹಿಂದೆ ಡೆಲ್ಲಿ ಡೇರ್​​ಡೆವಿಲ್ಸ್​ ತಂಡದ ಮೆಂಟರ್​ ಆಗಿದ್ರು. 2 ವರ್ಷಗಳ ಕಾಲ ತಂಡದ ಮೆಂಟರ್​ ಆಗಿ ಫ್ರಾಂಚೈಸಿ ಜೊತೆಗೆ ಕೆಲಸ ಮಾಡಿದ್ದಾರೆ. ಮ್ಯಾನೇಜ್​ಮೆಂಟ್​ ತಂಡದ ವಾತಾವರಣ ಹಾಗೂ ಕೆಲ ಆಟಗಾರರ ಜೊತೆಗೆ ದ್ರಾವಿಡ್​ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ದ್ರಾವಿಡ್​ ಕೋಚ್ ಆದ್ರೆ, ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ. ಅಲ್ದೇ ಗೌತಮ್ ಗಂಭೀರ್ ತೆರವಿನಿಂದ ಹಾಲಿ ಚಾಂಪಿಯನ್ ಕೆಕೆಆರ್​ ಮೆಂಟರ್ ಸ್ಥಾನವೂ ಖಾಲಿ ಇದೆ. ಹೀಗಾಗಿ ಶಾರುಖ್ ಖಾನ್ ಕೂಡ ದ್ರಾವಿಡ್​ಗೆ ಆಫರ್ ಮಾಡಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ರಾಹುಲ್ ದ್ರಾವಿಡ್​ಗೆ ಐಪಿಎಲ್​ನಲ್ಲಿ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ.

ಅಸಲಿಗೆ ರಾಹುಲ್ ದ್ರಾವಿಡ್ ಆ್ಯಂಡ್ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರು. ಈ ಇಬ್ಬರು ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ಅಪಾರ. ಎಲ್ಲಕ್ಕಿಂತ ಹೆಚ್ಚಾಗಿ ಆಪ್ತ ಸ್ನೇಹಿತರು. ಈ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಮುಖ್ಯ ಕಾರಣವೇ ಸೌರವ್ ಗಂಗೂಲಿ. ಅಂದು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದ ಗಂಗೂಲಿ, ಆಪ್ತ ಸ್ನೇಹಿತ ರಾಹುಲ್​ ದ್ರಾವಿಡ್​ ಬೆನ್ನು ಬಿದ್ದಿದ್ದರು. ಟೀಮ್ ಇಂಡಿಯಾಗೆ ದ್ರಾವಿಡ್​​​​​​​​ರಂಥ ಸ್ಟ್ರಿಕ್ಟ್​ ಮಾಸ್ಟರ್​ ಬೇಕು ಎಂಬ ಕಾರಣಕ್ಕೆ ಹಠ ಹಿಡಿದು ದ್ರಾವಿಡ್ ಕಾಡಿ ಬೇಡಿ ಒಪ್ಪಿಸಿ, ಕೋಚ್​​​​​​​​​​​​​​​​​​​​​​​ ಹುದ್ದೆಗೆ ಕರೆತಂದಿದ್ರು. ನಂತರ ಆಗಿದ್ದೆಲ್ಲ ಈಗ ಇತಿಹಾಸ. ಇದೀಗ ಗಂಗೂಲಿ ಬಹುತೇಕ ದ್ರಾವಿಡ್​ಗೆ ಗಾಳ ಹಾಕೋ ಲೆಕ್ಕಾಚಾರದಲ್ಲಿದ್ದಾರೆ. ವರ್ಷದಲ್ಲಿ ಕೇವಲ 3 ತಿಂಗಳ ಅವಧಿಯ ಕಾರ್ಯವಾಗಿರೋದ್ರಿಂದ ದಾದಾ ಆಫರ್​ ಮಾಡಿದ್ರೆ, ದ್ರಾವಿಡ್​ ಒಪ್ಪೋ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ ಐಪಿಎಲ್​ಗೆ ಇನ್ನೂ 8 ತಿಂಗಳು ಬಾಕಿ ಇರುವಾಗಲೇ ಫ್ರಾಂಚೈಸಿಗಳಲ್ಲಿ ಮೇಜರ್ ಸರ್ಜರಿ ಆಗ್ತಿದೆ. ರಾಹುಲ್ ದ್ರಾವಿಡ್ ಯಾವ ಟೀಂ ಸೇರ್ತಾರೆ ಅನ್ನೋದೇ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿದೆ.

Shwetha M

Leave a Reply

Your email address will not be published. Required fields are marked *