IPLಗೂ ಸ್ಟಾರ್ ಪ್ಲೇಯರ್ಸ್ ಮಿಸ್ಸಿಂಗ್ – ಬುಮ್ರಾ, ಲಾಕಿ, ಕಮಿನ್ಸ್.. ಯಾರೆಲ್ಲಾ?
ಇಂಜುರಿಯಿಂದಾಗಿ ಹೊರ ಬಿದ್ದವರೆಷ್ಟು?

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯಿಂದ ಈಗಾಗ್ಲೇ ಹಲವು ಸ್ಟಾರ್ ಕ್ರಿಕೆಟರ್ಸ್ ಹೊರ ಬಿದ್ದಿದ್ದಾರೆ. ಇಂಜುರಿ ಸಮಸ್ಯೆಯಿಂದಾಗಿ ಐಸಿಸಿ ಟೂರ್ನಿಯನ್ನ ಮಿಸ್ ಮಾಡಿಕೊಳ್ತಿದ್ದಾರೆ. ಈ ಗಾಯದ ಭೂತ ಬರೀ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಮಾತ್ರ ಸೀಮಿತವಾಗಿಲ್ಲ. ಐಪಿಎಲ್ ಹಬ್ಬಕ್ಕೂ ಆಘಾತ ಕೊಡೋದು ಪಕ್ಕಾ ಆಗಿದೆ. ಸೂಪರ್ ಸ್ಟಾರ್ ಪ್ಲೇಯರ್ಗಳೇ ಹೊರಬೀಳೋ ಆತಂಕದಲ್ಲಿದ್ದಾರೆ. ಅದ್ರಲ್ಲಿ ನಮ್ಮ ಆರ್ಸಿಬಿ ಪ್ಲೇಯರ್ಸ್ ಕೂಡ ಇದ್ದಾರೆ. ಹಾಗಾದ್ರೆ ಯಾರೆಲ್ಲಾ ಈ ಲಿಸ್ಟ್ನಲ್ಲಿ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಛಾವಾ – ಮೂರೇ ಮೂರು ದಿನದಲ್ಲಿ 121 ಕೋಟಿ ರೂ ಕಲೆಕ್ಷನ್!
ಮಾರ್ಚ್ ಮೂರನೇ ವಾರದಿಂದ 2025ರ ಐಪಿಎಲ್ ಸೀಸನ್ ಶುರುವಾಗಲಿದೆ. ಒಟ್ಟು 10 ತಂಡಗಳು ಭಾಗವಹಿಸಲಿದ್ದು 2 ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಹಬ್ಬ. ಅಲ್ದೇ ಈ ಬಾರಿಯ ಐಪಿಎಲ್ಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದರಿಂದ ಎಲ್ಲಾ ತಂಡಗಳು ರೀಫಾರ್ಮ್ ಆಗಿವೆ. ಹಾಗೇ ಹೊಸ ಹೊಸ ನಾಯಕರ ನೇಮಕವೂ ನಡೆದಿದೆ. ಈ ಬಾರಿಯ ಐಪಿಎಲ್ಗೆ ದಾಖಲೆಯ ಮಟ್ಟದಲ್ಲಿ ಫ್ರಾಂಚೈಸಿಗಳು ಹಣ ಸುರಿದಿವೆ. ಆದ್ರೀಗ ಚಾಂಪಿಯನ್ಸ್ ಟ್ರೋಫಿಯಿಂದ ಕೆಲ ಪ್ಲೇಯರ್ಸ್ ಹೊರ ಬಿದ್ದಿದ್ದು, ಈ ಇಂಜುರಿ ಸಮಸ್ಯೆ ಐಪಿಎಲ್ಗೂ ಕಾಡುವ ಆತಂಕ ಎದುರಾಗಿದೆ.
ಐಪಿಎಲ್ ಗೂ ಗಾಯದ ಭೂತ!
ಸೌತ್ ಆಫ್ರಿಕಾ ತಂಡದಲ್ಲಿ ಆನ್ರಿಚ್ ನಾರ್ಟ್ಜೆ ಅವರ ಬದಲಿ ಆಟಗಾರ ಎಂದು ಪರಿಗಣಿಸಲಾಗಿದ್ದ ಜೆರಾಲ್ಡ್ ಕೋಟ್ಜಿ ಕೂಡ ಫಿಟ್ನೆಸ್ ಸಮಸ್ಯೆಗಳಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಗುಜರಾತ್ ಟೈಟಾನ್ಸ್ ಖರೀದಿಸಿದ ಕೋಟ್ಜಿ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದರೆ, ಕೆಕೆಆರ್ 6.50 ಕೋಟಿ ರೂ.ಗೆ ಆಯ್ಕೆ ಮಾಡಿಕೊಂಡ ನಾರ್ಟ್ಜೆ ಬೆನ್ನು ನೋವಿನಿಂದಾಗಿ ಹೊರಗುಳಿದಿದ್ದಾರೆ. ಹಾಗೇ ಹಾಮ್ಸ್ಟ್ರಿಂಗ್ ಇಂಜುರಿಯಿಂದಾಗಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಚಾಂಪಿಯನ್ಸ್ ಟ್ರೋಫಿ ಮತ್ತು IPL 2025 ಗೆ ಆಡುವುದು ಅನುಮಾನವಾಗಿದೆ. ಮೆಗಾ-ಹರಾಜಿನಲ್ಲಿ ಫರ್ಗುಸನ್ ಅವರನ್ನು RCB 2 ಕೋಟಿಗೆ ಖರೀದಿ ಮಾಡಿದೆ. ಹಾಗೇ ಆರ್ ಸಿಬಿ ಖರೀದಿ ಮಾಡಿದ್ದ ಮತ್ತೊಬ್ಬ ಪ್ರತಿಭಾನ್ವಿತ ಇಂಗ್ಲೆಂಡ್ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಕೂಡ ಐಪಿಎಲ್ ಆಡೋದು ಡೌಟಿದೆ. ಭಾರತ ವಿರುದ್ಧದ ಸರಣಿಯಲ್ಲಿ ಮಂಡಿರಜ್ಜು ಗಾಯದಿಂದಾಗಿ ಆಡಿರಲಿಲ್ಲ. 2025 ರ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದಾರೆ. ಹಾಗೇ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಕೂಡ ಇಂಜುರಿಯಿಂದ ಹೊರಗುಳಿದಿದ್ದಾರೆ. ಇದೀಗ ಐಪಿಎಲ್ 2025 ರಲ್ಲಿ ಆಡುವುದು ಅನುಮಾನವಾಗಿದೆ. ಮುಂಬೈ ಇಂಡಿಯನ್ಸ್‌ನ ಸ್ಪಿನ್ನರ್ ಅಲ್ಲಾಹ್ ಗಜನ್‌ಫರ್ ಕಾಲಿನ ಫ್ರ್ಯಾಕ್ಚರ್ನಿಂದಾಗಿ ಕನಿಷ್ಠ ನಾಲ್ಕು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರನ್ನು ಚಾಂಪಿಯನ್ಸ್ ಟ್ರೋಫಿ 2025 ರಿಂದ ಹೊರಗಿಡಲಾಗಿದೆ. ಸದ್ಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಆಡುವುದೂ ಅನುಮಾನದಲ್ಲಿದೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಅವರು ಬೆನ್ನು ನೋವಿನಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇವ್ರನ್ನ ಎಲ್ಎಸ್ಜಿ ತಂಡ ಖರೀದಿ ಮಾಡಿತ್ತು. ಹಾಗೇ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಬೆನ್ನುನೋವಿನಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಬಿದ್ದಿದ್ದಾರೆ. ಮುಂಬೈ ಪರ ಆಡುವ ಬುಮ್ರಾ ಐಪಿಎಲ್ ವೇಳೆಗೆ ಕಮ್ ಬ್ಯಾಕ್ ಮಾಡ್ತಾರೋ ಇಲ್ವೋ ಅನ್ನೋದು ಕನ್ಫರ್ಮ್ ಆಗಿಲ್ಲ.
ಹೀಗೆ ಸ್ಟಾರ್ ಆಟಗಾರರು ಇಂಜುರಿಯಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಬಿದ್ದಿದ್ದು, ಐಪಿಎಲ್ನೂ ಮಿಸ್ ಮಾಡಿಕೊಳ್ಳೋ ಆತಂಕ ಶುರುವಾಗಿದೆ. ಅದ್ರಲ್ಲೂ ಆರ್ಸಿಬಿಯ ಮೂವರು ಪ್ಲೇಯರ್ಸ್ ಇಂಜುರಿಯಾಗಿದ್ದು ಆಡ್ತಾರೋ ಇಲ್ವೋ ಅನ್ನೋದು ದೃಢಪಟ್ಟಿಲ್ಲ. ಹಾಗೇನಾದ್ರೂ ಐಪಿಎಲ್ನಲ್ಲಿ ಆಡಲ್ಲ ಅನ್ನೋದು ಕನ್ಫರ್ಮ್ ಆದ್ರೆ ಬದಲಿ ಆಟಗಾರರನ್ನ ಖರೀದಿ ಮಾಡ್ಬೇಕಾಗುತ್ತೆ.