ಸಿಲಿಕಾನ್ ಸಿಟಿಗೆ ಕೇಂದ್ರದಿಂದ ಗುಡ್ನ್ಯೂಸ್ – ಮೆಟ್ರೋ ನಗರಗಳ ಪಟ್ಟಿಗೆ ಸೇರಿದ ಬೆಂಗಳೂರು

ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಹೊಸ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ನವದೆಹಲಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಆದಾಯ ತೆರಿಗೆ ನಿಯಮಗಳ ಪ್ರಕಾರ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಮಾತ್ರ ‘ಮೆಟ್ರೋ ನಗರಗಳು’ ಎಂದು ಪರಿಗಣಿಸಿ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುತ್ತಿತ್ತು. ಬೆಂಗಳೂರು ವಿಶ್ವಮಟ್ಟದ ನಗರವಾಗಿದ್ದರೂ ತಾಂತ್ರಿಕವಾಗಿ ಇದನ್ನು ‘ಬಾಕಿ ನಗರಗಳ’ ಪಟ್ಟಿಯಲ್ಲಿ ಇರಿಸಲಾಗಿತ್ತು, ಹೀಗಾಗಿ ಇಲ್ಲಿನವರಿಗೆ ಕೇವಲ ಶೇ. 40 ರಷ್ಟು ಮಾತ್ರ ವಿನಾಯಿತಿ ಸಿಗುತ್ತಿತ್ತು. ಆದರೆ ಇದೀಗ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುವುದು.
ಇದನ್ನೂ ಓದಿ: ಪಾಕ್ Vs IND ಪಂದ್ಯದಲ್ಲಿ ಪ್ರತಿ 10-ಸೆಕೆಂಡ್ ಜಾಹೀರಾತಿಗೆ ₹40 ಲಕ್ಷ!
ಸಂಸದ ತೇಜಸ್ವಿ ಸೂರ್ಯ ಅವರು ಎರಡು ವರ್ಷಗಳ ಹಿಂದೆಯೇ ಸಂಸತ್ತಿನಲ್ಲಿ ಮತ್ತು ಹಣಕಾಸು ಸಚಿವರ ಬಳಿ ಬೆಂಗಳೂರಿನ ಜೀವನ ವೆಚ್ಚ ದೆಹಲಿ-ಮುಂಬೈಗೆ ಸಮಾನವಾಗಿದೆ, ಆದ್ದರಿಂದ ಬೆಂಗಳೂರನ್ನು ಮೆಟ್ರೋ ಪಟ್ಟಿಗೆ ಸೇರಿಸಲೇಬೇಕು ಎಂದು ಒತ್ತಾಯಿಸಿದ್ದರು. ಆ ಬೇಡಿಕೆ ಈಗ ಈಡೇರಿದಂತಾಗಿದೆ. ಈ ಮೂಲಕ ಬೆಂಗಳೂರಿಗೆ ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರುವ ಭಾಗ್ಯ ಸಿಕ್ಕಿದೆ.
ಲಾಭವೇನು?
ಈಗ ನಿಮ್ಮ ಮೂಲ ವೇತನದ ಶೇ. 50 ರಷ್ಟು ಮೊತ್ತವನ್ನು HRA ವಿನಾಯಿತಿಯಾಗಿ ಪಡೆಯಬಹುದು. ಇದುವರೆಗೆ ಇದು ಶೇ. 40 ರಷ್ಟಿತ್ತು.
ಸಾಫ್ಟ್ವೇರ್ ಉದ್ಯೋಗಿಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ವಲಯದ ಲಕ್ಷಾಂತರ ಉದ್ಯೋಗಿಗಳ ಕೈಗೆ ಸಿಗುವ ವೇತನ ಹೆಚ್ಚಾಗಲಿದೆ.
ಒಟ್ಟು ತೆರಿಗೆ ವಿಧಿಸಬಹುದಾದ ಆದಾಯದಲ್ಲಿ ಹೆಚ್ಚಿನ ಕಡಿತ ಪಡೆಯಲು ಅವಕಾಶ ಸಿಗುವುದರಿಂದ ತೆರಿಗೆ ಪಾವತಿ ಕಡಿಮೆಯಾಗಲಿದೆ.

ನೋಡಿರಿ

