KSCAಯಿಂದ RCB ಫ್ಯಾನ್ಸ್‌ ಕುರಿತು ದೊಡ್ಡ ನಿರ್ಧಾರ! –  ಚಿನ್ನಸ್ವಾಮಿಯಲ್ಲಿ ಮೃತ 11 ಜನರ ನೆನಪಿಗೆ 11 ಸೀಟು ಮೀಸಲು!

KSCAಯಿಂದ RCB ಫ್ಯಾನ್ಸ್‌ ಕುರಿತು ದೊಡ್ಡ ನಿರ್ಧಾರ! –  ಚಿನ್ನಸ್ವಾಮಿಯಲ್ಲಿ ಮೃತ 11 ಜನರ ನೆನಪಿಗೆ 11 ಸೀಟು ಮೀಸಲು!

ಜೂನ್ 4, 2025.. ಆರ್‌ಸಿಬಿ ಪಾಲಿಗೆ ಕರಾಳ ದಿನ. ಸೀಸನ್‌ 18 ಗೆದ್ರೂ ಆ ಖುಷಿ 18 ಗಂಟೆಯೂ ಉಳಿದಿರಲಿಲ್ಲ. ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾಯಿತು. ಈ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ರು. ಈ ದುರದೃಷ್ಟಕರ ಘಟನೆಯು ಆರ್‌ಸಿಬಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿದಿದೆ. ಇದೀಗ ಈ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ KSCA ಮಹತ್ವದ ನಿರ್ಧಾರ ಕೈಗೊಂಡಿದೆ. ಮೃತ 11 ಜನರ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ.

ಇದನ್ನೂ ಓದಿ: ಬಿಗ್‌ಬಾಸ್ ಧನರಾಜ್‌ ಜೋಡಿಗೆ ಬಂಪರ್ ಚಾನ್ಸ್ – ಮದುವೆಯಾದ ವಾರದಲ್ಲೇ ರುದ್ರಮಾಸ್ಟರ್‌ಗೆ ಸಿಕ್ತು ಮತ್ತೊಂದು ರಿಯಾಲಿಟಿ ಶೋ

ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಸೀಟುಗಳನ್ನು ಮೀಸಲಿಡಲಾಗುವುದು ಹಾಗೂ ಈ 11 ಸೀಟುಗಳನ್ನು ಮಾರಾಟ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೂ ಸಹ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುವುದು. ಜೊತೆಗೆ ಮುಖ್ಯ ದ್ವಾರದ ಭಾಗದಲ್ಲಿ ಬೋರ್ಡ್ ಅಳವಡಿಕೆ ಮಾಡಿ, ಅದರಲ್ಲಿ ಮೃತರ ಹೆಸರನ್ನ ನಮದು ಮಾಡಲಿದೆ.

ಇನ್ನೂ ಆಟಗಾರರು ಪ್ರ್ಯಾಕ್ಟೀಸ್‌ ಮಾಡುವಾಗ 11 ನಂಬರ್‌ನ ಜೆರ್ಸಿಯನ್ನು ಧರಿಸುತ್ತಾರೆ. 11 ಜನರಿಗೆ ಗೌರವಾರ್ಥವಾಗಿ 11 ಖಾಲಿ ಚೇರ್‌ಗಳನ್ನು ಬಿಡಲಾಗುತ್ತೆ. ಹೀಗಾಗಿ ಆ 11 ಟಿಕೆಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ. 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಕೆಎಸ್‌ಸಿಎ & ಆರ್‌ಸಿಬಿ ಮ್ಯಾನೇಜ್ಮೆಂಟ್ ಮೃತರಿಗೆ 1 ನಿಮಿಷ ಮೌನಚಾರಣೆ ಮಾಡಲಿದೆ ಎಂದು ತಿಳಿಸಿದೆ.

Shwetha M