RCBಗೆ ನಂ.3 ಬ್ಯಾಟರ್ ಕನ್ಫ್ಯೂಷನ್ – ಪಡಿಕ್ಕಲ್ Vs ವೆಂಕಿ Vs ಬೆಥೆಲ್!
ಯಾರಿಗೆ ಚಾನ್ಸ್ ಕೊಡುತ್ತೆ ಫ್ರಾಂಚೈಸಿ?

RCBಗೆ ನಂ.3 ಬ್ಯಾಟರ್ ಕನ್ಫ್ಯೂಷನ್ – ಪಡಿಕ್ಕಲ್ Vs ವೆಂಕಿ Vs ಬೆಥೆಲ್!ಯಾರಿಗೆ ಚಾನ್ಸ್ ಕೊಡುತ್ತೆ ಫ್ರಾಂಚೈಸಿ?

2026ರ ಐಪಿಎಲ್ ಆರಂಭಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಫಸ್ಟ್ ಮ್ಯಾಚಲ್ಲೇ ಬೆಂಗಳೂರು ಮತ್ತು ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗ್ತಿವೆ. ಹಾಲಿ ಚಾಂಪಿಯನ್ ಆಗಿರೋ ಆರ್​ಸಿಬಿ ಬ್ಯಾಟಿಂಗ್, ಬೌಲಿಂಗ್, ಫಿನಿಶರ್ಸ್ ಹೀಗೆ ಎಲ್ಲದ್ರಲ್ಲೂ ಕಂಪ್ಲೀಟ್ ಬ್ಯಾಲೆನ್ಸಡ್ ಆಗಿದೆ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ನಂಬರ್ 3 ಸ್ಲಾಟ್​ನಲ್ಲಿ ಬ್ಯಾಟಿಂಗ್​ಗೆ ಯಾರು ಬರ್ತಾರೆ ಅನ್ನೋದು. ಯಾಕಂದ್ರೆ ಒಂದೇ ಸ್ಲಾಟ್​ಗೆ ಮೂವರು ಪವರ್ ಫುಲ್ ಪ್ಲೇಯರ್ಸ್ ನಡುವೆ ರೇಸ್ ಇದೆ. ದೇವದತ್ ಪಡಿಕ್ಕಲ್ ವರ್ಸಸ್ ವೆಂಕಟೇಶ್ ಅಯ್ಯರ್ ವರ್ಸಸ್ ಜೇಕಬ್ ಬೆಥೆಲ್.

ಇದನ್ನೂ ಓದಿ : PSL ಬಿಟ್ಟು IPLಗೆ ಎಂಟ್ರಿ – PCBಯಿಂದ ಬ್ಲೆಸ್ಸಿಂಗ್ ಮುಝರಬಾನಿ ಬ್ಯಾನ್

18ನೇ ಸೀಸನ್ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋಕೆ ಭರ್ಜರಿಯಾಗೇ ರೆಡಿಯಾಗ್ತಿದೆ. ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ರೆಡ್ ಆರ್ಮಿ ಕ್ಯಾಂಪ್​ನಲ್ಲಿ ಪ್ರಾಕ್ಟೀಸ್ ಕೂಡ ಸಖತ್ತಾಗೇ ನಡೀತಿದೆ. ಈ ಬಾರಿ ಮಿನಿ ಆಕ್ಷನ್​ನಲ್ಲೂ ಒಂದಷ್ಟು ಕ್ವಾಲಿಟಿ ಪ್ಲೇಯರ್​ಗಳೇ ಬಂದಿರೋದ್ರಿಂದ ಬೆಂಗಳೂರು ಟೀಂ ಫುಲ್ ಪ್ಯಾಕೇಜ್​​ಡ್ ಌಂಡ್ ಡೇಂಜರಸ್ ಆಗಿದೆ. ಪ್ಲೇಯಿಂಗ್ 11 ಕನ್ಫ್ಯೂಷನ್ಸ್ ಕೂಡ ಇಲ್ಲ. ಬಟ್ 3ನೇ ಸ್ಲಾಟ್​ಗೆ ಮೂವರು ರೇಸ್​ನಲ್ಲಿದ್ದಾರೆ.

ಪಡಿಕ್ಕಲ್, ವೆಂಕಟೇಶ್ ಹಾಗೇ ಬೆಥೆಲ್ ನಡುವೆ ಫೈಟ್!

ಬೆಂಗಳೂರು ತಂಡದಲ್ಲಿ ಓಪನರ್ಸ್, ಮಿಡಲ್ ಆರ್ಡರ್, ಬೌಲಿಂಗ್ ಹೀಗೆ ಎಲ್ಲವೂ ಕ್ಲಾರಿಟಿ ಇದ್ರೂ ಕೂಡ ಈ ಬಾರಿ ನಂಬರ್ 3ನಲ್ಲಿ ಬ್ಯಾಟಿಂಗ್ ಗೆ ಬರೋ ಪ್ಲೇಯರ್ ಯಾರು ಅನ್ನೋ ಬಗ್ಗೆ ಕನ್ಫ್ಯೂಷನ್ ಇದೆ. ಯಾಕಂದ್ರೆ ಒಂದೇ ಸ್ಥಾನಕ್ಕಾಗಿ ಮೂವರು ಕಾಯ್ತಿದ್ದಾರೆ. 2025ರಲ್ಲಿ ಒನ್ ಡೌನ್ ಬ್ಯಾಟರ್ ಆಗಿ ದೇವದತ್ ಪಡಿಕ್ಕಲ್ ಆಡಿದ್ರು. ಕೊನೇ ಪಂದ್ಯಗಳ ವೇಳೆ ಇಂಜುರಿ ಕಾರಣಕ್ಕೆ ರೂಲ್ಡ್ ಔಟ್ ಆಗಿ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಬ್ಯಾಟ್ ಬೀಸಿದ್ರು. ಈಗ ಮಿನಿ ಆಕ್ಷನ್ ನಲ್ಲಿ ವೆಂಕಟೇಶ್ ಅಯ್ಯರ್​ರನ್ನ ಆರ್​ಸಿಬಿ ಖರೀದಿ ಮಾಡಿರೋದ್ರಿಂದ ವೆಂಕಿ ಕೂಡ ನಂಬರ್ 3ನಲ್ಲೇ ಆಡೋ ನಿರೀಕ್ಷೆಯಲ್ಲಿದ್ದಾರೆ. ಇನ್ನು ಇವ್ರಿಬ್ಬರ ಫೈಟ್​ಗೆ ಈಗ ಜೇಕಬ್ ಬೆಥೆಲ್ ಕೂಡ ಸೇರಿಕೊಂಡಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಅದೂ ಸೆಮಿಫೈನಲ್ ಮ್ಯಾಚಲ್ಲಿ ಭಾರತದ ವಿರುದ್ಧ ಏಕಾಂಗಿಯಾಗಿ ಹೊರಾಡಿದ್ದ ಬೆಥೆಲ್  48 ಎಸೆತಗಳಲ್ಲೇ 105 ರನ್ ಗಳಿಸಿದ್ರು. ಸೋ ಅವ್ರನ್ನೂ ಬೆಂಚ್ ಮೇಲೆ ಕೂರಿಸೋದು ಕಷ್ಟ ಆಗುತ್ತೆ. ಹೀಗಾಗಿ ಮೂವರೂ ಒಂದೇ ಸ್ಲಾಟ್​ಗೆ ಕಾಯ್ತಿದ್ದಾರೆ. ಯಾಕಂದ್ರೆ ಉಳಿದ ಸ್ಲಾಟ್​ಗಳೆಲ್ಲಾ ಕ್ಲಾರಿಟಿ ಇದೆ.

ಕನ್ನಡಿಗ ಪಡಿಕ್ಕಲ್ ಗೆ ಸಿಗುತ್ತಾ ಮತ್ತೊಂದು ಚಾನ್ಸ್?

ಆರ್​ಸಿಬಿ ತಂಡದಲ್ಲಿ ಕನ್ನಡಿಗರಿಗೆ ಮೊದ್ಲೇ ಚಾನ್ಸ್ ಕೊಡಲ್ಲ. ಕಳೆದ ಬಾರಿ ದೇವದತ್ ಪಡಿಕ್ಕಲ್​ಗೆ ಚಾನ್ಸ್ ಕೊಟ್ಟಿದ್ರು. ನಂಬರ್ 3ನಲ್ಲಿ ಆಡ್ಸಿದ್ರು. ಟೂರ್ನಿಯಲ್ಲಿ ಎರಡು ಅರ್ಧಶತಕಗಳ ಸಹಿತ 10 ಪಂದ್ಯಗಳಲ್ಲಿ 150.61 ಸ್ಟ್ರೈಕ್ ರೇಟ್‌ನಲ್ಲಿ 247 ರನ್ ಗಳಿಸಿದ್ರು. ಐಪಿಎಲ್ ಬಳಿಕವೂ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಪಡಿಕ್ಕಲ್ ಸದ್ದು ಮಾಡಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಈ ಬಾರಿಯೂ ಮೂರನೇ ಕ್ರಮಾಂಕದಲ್ಲಿ ಆಡೋ ನಿರೀಕ್ಷೆಯಲ್ಲಿದ್ದಾರೆ.

ಪ್ಲೇಯಿಂಗ್ 11ನಲ್ಲಿ ಆಡುವ ನಿರೀಕ್ಷೆಯಲ್ಲಿ ವೆಂಕಿ!

2024ರ ಕೊನೆಯಲ್ಲಿ ನಡೆದ ಮೆಗಾ ಹರಾಜಿನಲ್ಲಿ 23 ಕೋಟಿವರೆಗೂ ವೆಂಕಿ ಮೇಲೆ ಬಿಡ್ಡಿಂಗ್ ಕರೆದಿದ್ದ ಆರ್​ಸಿಬಿ 2025ರ ಬಳಿಕ ಮಿನಿ ಹರಾಜಿನಲ್ಲಿ 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಸೋ ವೆಂಕಿ ಆಡ್ಬೇಕು ಅಂದ್ರೆ ನಂಬರ್ 3ನಲ್ಲಿ ಮಾತ್ರನೇ ಅವಕಾಶ ಇರೋದು. ಌಂಡ್ ನಂಬರ್ 3ನಲ್ಲಿ ಪಡಿಕ್ಕಲ್ ಮತ್ತು ವೆಂಕಟೇಶ್ ಇಬ್ಬರ ಪರ್ಫಾಮೆನ್ಸ್ ಕಂಪೇರ್ ಮಾಡಿದ್ರೆ ವೆಂಕಿ ಬೆಟರ್ ಇದ್ದಾರೆ. ವೆಂಕಟೇಶ್ ಅಯ್ಯರ್ ನಂಬರ್ 3ನಲ್ಲಿ 43.23ರ ಸರಾಸರಿಯಲ್ಲಿ 168.77ರ ಸ್ಟ್ರೇಕ್​ರೇಟ್​ನಲ್ಲಿ 562 ರನ್ ಗಳನ್ನು ಗಳಿಸಿದ್ದಾರೆ. ಪಡಿಕ್ಕಲ್ 24.15ರ ಸರಾಸರಿ ಹಾಗೇ 138.79ರ ಸರಾಸರಿಯಲ್ಲಿ 483 ರನ್ ಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳನ್ನ ನೋಡ್ದಾಗ ಮೂರನೇ ಕ್ರಮಾಂಕಕ್ಕೆ ವೆಂಕಟೇಶ್ ಅಯ್ಯರ್ ಅವರೇ ಪಡಿಕ್ಕಲ್ ಗಿಂತ ಸ್ವಲ್ಪ ಬೆಟರ್ ಅನ್ಸಿರಬಹುದು. ಆದ್ರೆ ಕಳೇದ ವರ್ಷ ವೆಂಕಿ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇದೆ. ಹೀಗಾಗಿ ವೆಂಕಿ ಬಗ್ಗೆ ವೇಯ್ಟಿಂಗ್ ಲಿಸ್ಟ್​ನಲ್ಲೂ ಇಡಬಹುದು. ಸೋ ಇವ್ರಿಬ್ಬರದ್ದೇ ರೇಸ್ ಇರುವಾಗ ಜೇಕಬ್ ಬೆಥೆಲ್ ಕೂಡ ನಾನು ಕೂಡ ಇದ್ದೇನೆ ಅನ್ನೋ ಥರ ಪರ್ಫಾಮ್ ಮಾಡಿದ್ದಾರೆ.

ಟಿ-20 ವಿಶ್ವಕಪ್ ಬಳಿಕ ಬೆಥೆಲ್ ಟ್ರೆಂಡಿಂಗ್!

ಟಿ-20 ವಿಶ್ವಕಪ್ ಸೆಮಿಫೈನಲ್ ಮ್ಯಾಚಲ್ಲಿ ಬೆಥೆಲ್ ಏಕಾಂಗಿ ಹೋರಾಟಕ್ಕೆ ಕ್ರಿಕೆಟ್ ಜಗತ್ತೇ ಬೆರಗಾಗಿದೆ. ಟಿ-20 ಫಾರ್ಮೆಟ್​ನಲ್ಲಿ ಬೆಥೆಲ್ ಬ್ಯಾಟಿಂಗ್ ಕೂಡ ಅಷ್ಟೇ ಇಂಪ್ರೆಸ್ಸಿವ್ ಆಗಿದೆ. ವಿಶ್ವಕಪ್ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ನ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡದ ನಾಯಕನಾಗಿ ಜೇಕಬ್ ಬೆಥೆಲ್ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಂಡದ ನಾಯಕನಾಗಿ ಲಿಯಮ್​ ಲಿವಿಂಗ್​ಸ್ಟೋನ್ ಈ ಬಾರಿ ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯಲಿದ್ದು, ಹೀಗಾಗಿ ಹೊಸ ನಾಯಕನಾಗಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಸೋ ಇಲ್ಲಿ ಆರ್​ಸಿಬಿಗೆ ಬೆಥೆಲ್ ಕೂಡ ಪ್ರಶ್ನೆಯಾಗಿದ್ದಾರೆ. ಒಟ್ನಲ್ಲಿ ಮೂವರು ಬ್ಯಾಟರ್​ಗಳು ಕೂಡ ಒಳ್ಳೆ ಆಟಗಾರರೇ. ಸೋ ಫೈನಲ್ಲಾಗಿ ಮ್ಯಾನೇಜ್​ಮೆಂಟ್ ಯಾರಿಗೆ ಚಾನ್ಸ್ ಕೊಡುತ್ತೆ ಅನ್ನೋದನ್ನ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *