40 ವರ್ಷ.. ಕಪ್ ಇಲ್ಲ.. ಫಾಫ್ OUT – ಡುಪ್ಲೆಸಿಸ್ ಕೊಕ್​ಗೆ ಇದೇ 3 ಕಾರಣ!
RCB ಸಾರಥ್ಯ.. ಯಾರಿಗೆ ಅದೃಷ್ಟ?

40 ವರ್ಷ.. ಕಪ್ ಇಲ್ಲ.. ಫಾಫ್ OUT – ಡುಪ್ಲೆಸಿಸ್ ಕೊಕ್​ಗೆ ಇದೇ 3 ಕಾರಣ!RCB ಸಾರಥ್ಯ.. ಯಾರಿಗೆ ಅದೃಷ್ಟ?

ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಐಪಿಎಲ್ ಹರಾಜು ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಹೊರ ಬೀಳ್ತಿದೆ. ಈಗಾಗ್ಲೇ ಫ್ರಾಂಚೈಸಿಗಳು ಕೂಡ ಆಕ್ಷನ್ ರೂಲ್ಸ್ ಬಗ್ಗೆ ಬಿಸಿಸಿಐ ಜೊತೆ ಸಭೆ ನಡೆಸಿದ್ದು, ಉಳಿಸಿಕೊಳ್ಳಬೇಕಾದ ಆಟಗಾರರ ಲಿಸ್ಟ್ ಮಾಡ್ತಿವೆ. ಕೋಚ್ ಸೇರಿದಂತೆ ಕೆಲವ್ರಿಗೆ ಕೊಕ್ ಕೊಟ್ಟು ಹೊಸಬರನ್ನ ನೇಮಕ ಮಾಡಿಕೊಳ್ತಿವೆ. ಅದ್ರಲ್ಲೂ 18ನೇ ಆವೃತ್ತಿಯ ಐಪಿಎಲ್ನಲ್ಲಿ 6 ತಂಡಗಳ ಕ್ಯಾಪ್ಟನ್ಸ್ ಚೇಂಜ್ ಆಗೋ ಸುದ್ದಿ ಹೊರಬಿದ್ದಿದೆ. ಅದ್ರಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಒಂದು. ಐಪಿಎಲ್ ಲೀಗ್ನಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, ಒಂದೊಂದು ಫ್ರಾಂಚೈಸಿಯಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಅದ್ರಲ್ಲೂ ಈಗ ಮುಂದಿನ ಐಪಿಎಲ್ಗೆ ಬರೋಬ್ಬರಿ 6 ಫ್ರಾಂಚೈಸಿಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ನೂತನ ಸಾರಥಿಗಳ ನೇಮಕಕ್ಕೆ ವೇದಿಕೆ ಸಿದ್ಧವಾಗ್ತಿದೆ. ಅಷ್ಟಕ್ಕೂ ಆರ್ಸಿಬಿ ಟೀಂ ಕ್ಯಾಪ್ಟನ್ ಬದಲಾವಣೆಗೆ ಕಾರಣಗಳು ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕನ್ನಡಿಗ ರಾಹುಲ್ ಅಂತ್ಯಕ್ಕೆ ಷಡ್ಯಂತ್ರ? – ಪಂತ್​ಗೆ ಚಾನ್ಸ್ ನೀಡಲು KLಗೆ ಮೋಸ?

ಫಾಫ್ಗೆ ಗುಡ್ ಬೈ!

ಐಪಿಎಲ್ ಟೂರ್ನಿಯ ಮೆಗಾ ಆಕ್ಷನ್ ನಲ್ಲಿ ಯಾರನ್ನ ರಿಲೀಸ್ ಮಾಡ್ಬೇಕು ಯಾರನ್ನ ಖರೀದಿ ಮಾಡ್ಬೇಕು ಅಂತಾ ಈಗಾಗ್ಲೇ ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿಕೊಂಡಿವೆ. ಸ್ಟಾರ್ ಆಟಗಾರರು ಬಿಡ್ಗೆ ಬಂದ್ರೆ ಎಷ್ಟೇ ಹಣ ಕೊಟ್ಟಾದ್ರೂ ಅವ್ರನ್ನ ತಂಡಕ್ಕೆ ಸೇರಿಸಿಕೊಳ್ಬೇಕು, ಟೀಂ ಬಲಿಷ್ಠಗೊಳಿಸಬೇಕು ಅನ್ನೋ ಪ್ಲ್ಯಾನ್ ಮಾಡ್ತಿದ್ದಾರೆ. ಈ ಪೈಕಿ ಆರ್ಸಿಬಿ ಕೂಡ ಒಂದು. 17 ವರ್ಷಗಳ ಐಪಿಎಲ್ ಸೀಸನ್ನಲ್ಲಿ ಬೆಂಗಳೂರು ತಂಡ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಸೋ 18ನೇ ಸೀಸನ್ಗೆ ಪವರ್ ಹಿಟ್ಟರ್ಸ್ ಮತ್ತು ಹೆಚ್ಚು ಕೌಶಲ್ಯ ಇರೋ ಬೌಲರ್ಗಳನ್ನೇ ಖರೀದಿ ಮಾಡುತ್ತೇವೆ ಅಂತಾ ಆರ್ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ. ಅದ್ರ ಜೊತೆಗೆ ನಾಯಕ ಫಾಫ್ ಡುಪ್ಲೆಸಿಸ್ರನ್ನೂ ಚೇಂಜ್ ಮಾಡೋ ಸುಳಿವು ಸಿಕ್ಕಿದೆ. ಫಾಫ್ ಕೇವಲ ಆಟಗಾರನಾಗಿ ಮಾತ್ರವಲ್ಲದೆ ಕ್ಯಾಪ್ಟನ್ ಆಗಿ ಕೂಡ ಆರ್ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೂ ಕೂಡ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಹೀಗಾಗಿ 2025ರ ಟೂರ್ನಿಗೂ ಮುನ್ನವೇ ಫಾಫ್ ಅವರನ್ನ ರಿಲೀಸ್ ಮಾಡಿ ಹೊಸ ನಾಯಕನಿಗಾಗಿ ಆರ್ಸಿಬಿ ಹರಾಜಿನಲ್ಲಿ ಹುಡುಕಾಟ ನಡೆಸಲಿದೆ. ಅಲ್ದೇ ಫಾಫ್ರನ್ನ ಕೈಬಿಡೋಕೆ ಕಾರಣಗಳೂ ಇವೆ. ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ಗೆ ಈಗಾಗಲೇ 40 ವರ್ಷ ಆಗಿದೆ. ಇನ್ನೂ ಮೂರು ವರ್ಷಗಳ ಕಾಲ ಫಾಫ್ ಐಪಿಎಲ್ ಆಡುವುದು ಕಷ್ಟ. ಹಾಗಾಗಿ ರಿಲೀಸ್ ಮಾಡೋದು ಉತ್ತಮ ಎಂಬ ನಿರ್ಧಾರಕ್ಕೆ ಫ್ರಾಂಚೈಸಿ ಬಂದಿದೆ.   ಅಷ್ಟೇ ಅಲ್ದೇ ಫಾಫ್ ಫಾರಿನ್ ಪ್ಲೇಯರ್. ಆರ್ಸಿಬಿ ತಂಡ ಇಂಡಿಯನ್ ಅದರಲ್ಲೂ ಕರ್ನಾಟಕ ಮೂಲದ ಆಟಗಾರನನ್ನೇ ಕ್ಯಾಪ್ಟನ್ಗಾಗಿ ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ದೇ ಆರ್ಸಿಬಿ ತಂಡದ ಪರ ಮಹತ್ವದ ಪಂದ್ಯಗಳಲ್ಲೇ ಫಾಫ್ ನಿಂತು ಆಡಿಲ್ಲ ಅನ್ನೋ ಆರೋಪಗಳೂ ಇವೆ. ಕೊಹ್ಲಿಯಂತೆ ಅಗ್ರೆಸ್ಸಿವ್ ಅಲ್ಲ ಅನ್ನೋದು ಕೂಡ ಪ್ರಮುಖ ಕಾರಣವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 17 ಆವೃತ್ತಿಗಳಿಂದಲೂ ಟ್ರೋಫಿಗೆ ಮುತ್ತಿಡೋಕೆ ಕಾಯ್ತಿದೆ.   ಭಾರತದ ಬಲಿಷ್ಠ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಗೆಲುವು ಪಡೆಯೋಕೆ ಆಗಿಲ್ಲ. ಕೊಹ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಆರ್ಸಿಬಿ ನಾಯಕತ್ವವನ್ನು ಪಡೆದಿದ್ದರು. ಆದರೆ, ಅವರ ನಾಯಕತ್ವದಲ್ಲಿಯೂ ತಂಡ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಫಾಫ್ ನಾಯಕತ್ವದಲ್ಲಿ ಆರ್ಸಿಬಿ 2022 ಮತ್ತು 2024ರ ಐಪಿಎಲ್ ಟೂರ್ನಿಗಳಲ್ಲಿ ಪ್ಲೇಆಫ್ಗೆ ತಲುಪಿದ್ದಾರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ 2025ರ ಐಪಿಎಲ್ಗೆ ಫಾಫ್ಗೆ ಕೊಕ್ ಕೊಟ್ಟು ಹೊಸ ನಾಯಕನನ್ನ ಆರ್ಸಿಬಿ ಫ್ರಾಂಚೈಸಿ ನೇಮಿಸಿಕೊಳ್ಳೋದು ಪಕ್ಕಾ ಆಗಿದೆ.

Shwetha M