4ನೇ ಟೆಸ್ಟ್.. ಭಾರತಕ್ಕೆ 6 ಟಾಸ್ಕ್ – ಡಿಪೆಂಡ್ ಫಾರ್ಮುಲಾ ಉಲ್ಟಾ ಹೊಡೀತಾ?
ಗಿಲ್ ಪಡೆಯ ಸ್ಟ್ರೆಂಥ್ & ಮೈನಸ್ ಏನು?

ಭಾರತ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಂಗ್ಲರು 2 ಪಂದ್ಯಗಳನ್ನ ಗೆದ್ದು ಲೀಡ್ನಲ್ಲಿದ್ದಾರೆ. ಟೀಂ ಇಂಡಿಯಾ ಒಂದು ಮ್ಯಾಚ್ ವಿನ್ ಆಗಿದೆ. ಇದೀಗ ಜುಲೈ 23 ರಿಂದ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರೋ ಪಂದ್ಯವೇ ಗೇಮ್ ಡಿಸೈಡರ್ ಆಗಲಿದೆ. ಓಲ್ಡ್ ಟ್ರಾಫರ್ಡ್ನ ಪಿಚ್ ಎಡ್ಜ್ಬಾಸ್ಟನ್ ಮತ್ತು ಲಾರ್ಡ್ಸ್ನಂತೆಯೇ ರಿಯಾಕ್ಟ್ ಮಾಡುತ್ತೆ. ಹೀಗಾಗಿ ಲೋ ಸ್ಕೋರಿಂಗ್, ಲೋ ಸ್ಪೀಡ್ ಮತ್ತು ಬೌನ್ಸ್ ಇರಲಿದೆ. ಮಸ್ಟ್ ಌಂಡ್ ಶುಡ್ ಪಂದ್ಯವನ್ನ ಗೆಲ್ಲಲೇಬೇಕಿರೋ ಭಾರತ ಈ ಸವಾಲುಗಳನ್ನೂ ಗೆಲ್ಲಬೇಕಿದೆ.
ಇದನ್ನೂ ಓದಿ : ಹರ್ಷಿತ್ ರಾಣಾಗೆ ಟಿ20 ತಂಡದ ಕ್ಯಾಪ್ಟನ್ – ಯುವ ವೇಗಿಗೆ ಒಲಿದು ಬಂದ ಅದೃಷ್ಟ
ಚಾಲೆಂಜ್ ನಂಬರ್ 1
ಟಾಪ್ ಆರ್ಡರ್ ಬ್ಯಾಟಿಂಗ್ ಫೇಲ್ ಆದ್ರೆ ಕಂಪ್ಲೀಟ್ ಫ್ಲ್ಯಾಪ್!
ಪ್ರಸ್ತುತ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ. ಇಬ್ಬರಲ್ಲಿ ಒಬ್ಬರಾದ್ರೂ ಕೂಡ ಬಿಗ್ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಮಿನಿಮಮ್ ಸ್ಕೋರ್ ಅಂತೂ ಬರ್ತಿದೆ. ಬಟ್ ಆ ನಂತ್ರ ಬರೋ 3ನೇ ಸ್ಲಾಟ್ ಬ್ಯಾಟರ್ನಿಂದ ಉತ್ತಮ ಸಾಥ್ ಸಿಗ್ತಿಲ್ಲ. ಫಸ್ಟ್ ಮ್ಯಾಚಲ್ಲಿ ಸಾಯಿ ಸುದರ್ಶನ್ ಆಡಿದ್ರು. ಬಿಗ್ ಸ್ಕೋರ್ ಬಂದಿಲ್ಲ ಅಂತಾ ಕರುಣ್ ನಾಯರ್ರನ್ನ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಬಟ್ ನಾಯರ್ ಕೂಡ ಫ್ಲ್ಯಾಪ್. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್, ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡ್ತಿದ್ದಾರೆ. ಇವ್ರೆಲ್ಲಾ ಸ್ಟಾರ್ ಬ್ಯಾಟರ್ಸ್. ಬಟ್ ಈ ಐದು ಬ್ಯಾಟರ್ಸ್ ಔಟ್ ಆದ್ರೂ ಅಂದ್ರೆ ಆಲ್ರೌಂಡರ್ ಕೋಟಾದಲ್ಲಿ ಜಡ್ಡು ಮಾತ್ರವೇ ತಮ್ಮ ಜವಾಬ್ದಾರಿ ನಿಭಾಯಿಸ್ತಿದ್ದಾರೆ. ಉಳಿದ ಯಾರಿಂದಲೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ಬಂದಿಲ್ಲ. ಸೋ ಭಾರತ ತಂಡ ಟಾಪ್ ಆರ್ಡರ್ನ ಮಾತ್ರವೇ ನೆಚ್ಚಿಕೊಂಡಿದೆ. ಇದೇ ಕಾರಣಕ್ಕೆ ಮೂರನೇ ಪಂದ್ಯದಲ್ಲಿ ಭಾರತ ಸೋಲಬೇಕಾಯ್ತು. ಇದು ಬದಲಾಗ್ಬೇಕು.
ಚಾಲೆಂಜ್ ನಂಬರ್ – 2
ಇದ್ದೂ ಇಲ್ಲದಂತಾಗಿರುವ ನಂಬರ್ 3 ಬ್ಯಾಟರ್!
ಭಾರತದ ಪರ ಫಸ್ಟ್ ವಿಕೆಟ್ ಬಿದ್ದಾಗ ನಂಬರ್ 3 ಸ್ಲಾಟ್ ಬ್ಯಾಟ್ಸ್ಮನ್ ಮೇಲೆ ತುಂಬಾನೇ ರೆಸ್ಪಾನ್ಸಿಬಿಲಿಟೀಸ್ ಇರುತ್ತೆ. ತಂಡವನ್ನ ಬಿಗ್ ಇನ್ನಿಂಗ್ಸ್ ಕಡೆ ಕೊಂಡೊಯ್ಯಬೇಕು. ಬಟ್ ಇಂಗ್ಲೆಂಡ್ ವಿರುದ್ಧದ ಸಿರೀಸ್ನಲ್ಲಿ ನಂಬರ್ 3 ಬ್ಯಾಟರ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮೊದಲ ಪಂದ್ಯದಲ್ಲಿ ಟೆಸ್ಟ್ ತಂಡಕ್ಕೆ ಡೆಬ್ಯೂ ಮಾಡಿದ್ದ ಸಾಯಿ ಸುದರ್ಶನ್ ಫಸ್ಟ್ ಇನ್ನಿಂಗ್ಸ್ ಡಕ್ ಔಟ್, ಎರಡನೇ ಇನ್ನಿಂಗ್ಸ್ನಲ್ಲಿ 30 ರನ್ಸ್ ಕಲೆ ಹಾಕಿದ್ರು. ಆ ಬಳಿಕ ಎರಡು ಮತ್ತು ಮೂರನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕರುಣ್ ನಾಯರ್ಗೆ ಚಾನ್ಸ್ ಕೊಟ್ಟಿದ್ರು. ಕರುಣ್ ನಾಯರ್ ಕೂಡ ಬಿಗ್ ಸ್ಕೋರ್ ಕಲೆ ಹಾಕೋಕೆ ಸಾಧ್ಯವಾಗ್ತಿಲ್ಲ. ಅದೆಲ್ಲಕ್ಕಿಂತ ಶಾಕಿಂಗ್ ವಿಚಾರ ಅಂದ್ರೆ ನಂಬರ್ 3 ಸ್ಲಾಟ್ ಬ್ಯಾಟರ್ನಲ್ಲಿ ಕಳೆದ 6 ಇನ್ನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶಕತವೂ ಬಂದಿಲ್ಲ. ಸೋ ಮುಂದಿನ ಪಂದ್ಯಕ್ಕೆ ಭಾರತ ಈ ಪ್ಲೇಸ್ನಲ್ಲಿ ಸಲ್ಯೂಷನ್ ಹುಡುಕಲೇಬೇಕಿದೆ.
ಚಾಲೆಂಜ್ ನಂಬರ್ – 3
ಬೌಲಿಂಗ್ ನಲ್ಲೂ ಕೆಲವರ ಮೇಲಷ್ಟೇ ಡಿಪೆಂಡ್ ಆದ ತಂಡ!
ಇನ್ನು ಬೌಲಿಂಗ್ ವಿಚಾರ ನೋಡೋದಾದ್ರೆ ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೇ ಆಕಾಶ್ ದೀಪ್ ಫೈಫರ್ ವಿಕೆಟ್ಗಳೊಂದಿಗೆ ದಾಖಲೆಗಳನ್ನೇ ಬರೆದಿದ್ದಾರೆ. ಬಟ್ ಆಗ್ತಿರೋದೇನಂದ್ರೆ ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬ ಬೌಲರ್ ಡಾಮಿನೇಟ್ ಮಾಡಿದ್ದಾರೆ. ಬಟ್ ಆಲ್ ರೌಂಡರ್ ಬೌಲರ್ ಗಳ ಕಡೆಯಿಂದ ಇಂಪ್ಯಾಕ್ಟ್ ಆಗುವಂತ ಪರ್ಫಾಮೆನ್ಸ್ ಬರ್ತಿಲ್ಲ. ಹೀಗಾಗೇ ಮೊದಲ ಪಂದ್ಯದಲ್ಲಿ 350+ ಟಾರ್ಗೆಟ್ ನೀಡಿಯೂ ಭಾರತ ಸೋಲಬೇಕಾಯ್ತು.
ಚಾಲೆಂಜ್ ನಂಬರ್ – 4
ಟೀಂ ಇಂಡಿಯಾ ಪ್ಲೇಯರ್ಸ್ ಗೆ ಗಾಯದ ಬರೆ!
ನಾಲ್ಕನೇ ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಸಾಲು ಸಾಲು ಪ್ಲೇಯರ್ಸ್ ಇಂಜುರಿಗೆ ಒಳಗಾಗಿದ್ದಾರೆ. ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್ ಹಾಗೇ ಅರ್ಷದೀಪ್ ಸಿಂಗ್ ಗಾಯಗೊಂಡಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಬಿಗ್ ಚೇಂಜಸ್ ಆಗೋದಂತೂ ಪಕ್ಕಾ ಇದೆ. ಅಷ್ಟೇ ಅಲ್ದೇ ನಾಲ್ಕನೇ ಪಂದ್ಯದಲ್ಲಿ ಪಂತ್ ವಿಕೆಟ್ ಕೀಪಿಂಗ್ ಮಾಡ್ತಾರಾ ಅನ್ನೋದು ಕೂಡ ಡೌಟ್ ಇದೆ. ಸ್ಟಾರ್ ಆಟಗಾರರು ಗಾಯಗೊಂಡಿರೋದು ತಂಡಕ್ಕೆ ಹಿನ್ನಡೆಯಾಗಬಹುದು.
ಚಾಲೆಂಜ್ ನಂಬರ್ – 5
ಓವರ್ ಕಾನ್ಫಿಡೆನ್ಸ್ ಬಿಡ್ತಾರಾ ಯಂಗ್ ಸ್ಟರ್ಸ್?
ಇಂಗ್ಲೆಂಡ್ ಸರಣಿಯಲ್ಲಿರೋ ಟೀಂ ಇಂಡಿಯಾದಲ್ಲಿ ಯಂಗ್ ಪ್ಲೇಯರ್ಸೇ ತುಂಬಿದ್ದಾರೆ. ಕ್ಯಾಪ್ಟನ್ ಆಗಿ ಗಿಲ್ಗೂ ಇದು ಮೊದಲ ಸರಣಿ. ಆದ್ರೆ ಮೊದಲ ಹಾಗೂ ಮೂರನೇ ಪಂದ್ಯದಲ್ಲಿ ಗೆಲ್ಲುವ ಚಾನ್ಸ್ ಭಾರತಕ್ಕೇ ಇದ್ರೂ ಕಳ್ಕೊಂಡಿದ್ರು. ಅದಕ್ಕೆ ಕಾರಣ ಓವರ್ ಕಾನ್ಫಿಡೆನ್ಸ್. ಹೆಡಿಂಗ್ಲಿಯಲ್ಲಿ ನಡೆದ ಫಸ್ಟ್ ಮ್ಯಾಚಲ್ಲಿ 350+ ಟಾರ್ಗೆಟ್ ಇದ್ರೂ ಆಂಗ್ಲರನ್ನ ಔಟ್ ಮಾಡೋಕೆ ಆಗ್ಲಿಲ್ಲ. ಯಾಕಂದ್ರೆ ಇತಿಹಾಸ ಕೆದಕಿದ್ರೆ ಭಾರತ ಇಷ್ಟೊಂದು ಟಾರ್ಗೆಟ್ ಕೊಟ್ಟು ಸೋತಿದ್ದೇ ಎರಡು ಸಲ. ಹೀಗಾಗಿ ಇಷ್ಟೊಂದು ಸ್ಕೋರ್ನ ಆಂಗ್ಲರು ರೀಚ್ ಆಗಲ್ಲ ನಾವೇ ಗೆಲ್ತೀವಿ ಅಂತಾ ಓವರ್ ಕಾನ್ಫಿಡೆನ್ಸ್ನಲ್ಲಿದ್ರು. ಕೊನೆಗೇ ಅದೇ ಮುಳುವಾಯ್ತು. ಪಂದ್ಯ ಸೋಲಬೇಕಾಯ್ತು. ಇನ್ನು ಮೂರನೇ ಪಂದ್ಯ ಅಂತಾ ಕಂಪ್ಲೀಟ್ ಭಾರತದ ಕಡೆಯೇ ಇತ್ತು. 193 ರನ್ಗಳ ಟಾರ್ಗೆಟ್.. 100+ ಓವರ್ಸ್.. ಒಂದಿಡೀ ದಿನ ಟೈಂ. ಹೀಗಿದ್ರೂ ಚೇಸ್ ಮಾಡೋಕೆ ಆಗ್ದೇ ಸೋತೇ ಹೋದ್ರು. ಇಲ್ಲೂ ಕೂಡ ಗೆದ್ದೇ ಬಿಡ್ತೇವೆ ಅನ್ನೋ ಉದಾಸೀನದಿಂದಲೇ ಪಂದ್ಯ ಕೈಚೆಲ್ಲಿದ್ರು. ಬಟ್ ಮುಂದಿನ ಪಂದ್ಯಕ್ಕೆ ಇದು ರಿಪೀಟ್ ಆಗಬಾರದು.
ಚಾಲೆಂಜ್ ನಂಬರ್ – 6
ಮ್ಯಾಂಚೆಸ್ಟರ್ ನಲ್ಲಿ ಗೆದ್ದೇ ಇಲ್ಲ ಟೀಂ ಇಂಡಿಯಾ!
ಭಾರತಕ್ಕೆ ಇದೆಲ್ಲಕ್ಕಿಂತ ಚಾಲೆಂಜಿಂಗ್ ಅಂದ್ರೆ ಮ್ಯಾಂಚೆಸ್ಟರ್ ಮೈದಾನ. ಇದುವರೆಗೆ, ಟೀಮ್ ಇಂಡಿಯಾ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳು ನಡೆದಿವೆ. ಅವುಗಳಲ್ಲಿ ನಾಲ್ಕರಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ಐದು ಟೆಸ್ಟ್ಗಳು ಡ್ರಾದಲ್ಲಿ ಕೊನೆಗೊಂಡಿವೆ. ಕೊನೆಯ ಬಾರಿಗೆ 2014 ರಲ್ಲಿ ಈ ಮೈದಾನದಲ್ಲಿ ಉಭಯ ರಾಷ್ಟ್ರಗಳು ಕಣಕ್ಕಿಳಿದಿದ್ವು. ಈಗ, 11 ವರ್ಷಗಳ ನಂತರ, ಭಾರತ ಮತ್ತೆ ಈ ಪ್ರತಿಷ್ಠಿತ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಮೈದಾನದಲ್ಲಿ ಭಾರತೀಯ ಬ್ಯಾಟರ್ ಶತಕ ಸಿಡಿಸಿ ಬರೋಬ್ಬರಿ 35 ವರ್ಷಗಳು ಕಳೆದಿವೆ. ಟೀಮ್ ಇಂಡಿಯಾ ಬ್ಯಾಟರ್ ಕೊನೇ ಬಾರಿ ಸೆಂಚುರಿ ಬಾರಿಸಿದ್ದು 1990 ರಲ್ಲಿ. ಅದು ಸಚಿನ್ ತೆಂಡೂಲ್ಕರ್. ಆಗ ಸಚಿನ್ಗೆ ಕೇವಲ 17 ವರ್ಷ. ಇದಾದ ಬಳಿಕ ಖುದ್ದು ಸಚಿನ್ ತೆಂಡೂಲ್ಕರ್ಗೂ ಕೂಡ ಓಲ್ಡ್ ಟ್ರಾಫೋರ್ಡ್ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇತ್ತ ಶತಕಗಳ ಸರದಾರ ವಿರಾಟ್ ಕೊಹ್ಲಿ ಕೊಹ್ಲಿ ಬ್ಯಾಟ್ನಿಂದಲೂ ಮೂರಂಕಿ ಮೊತ್ತ ಗಳಿಸಿಲ್ಲ. ಹೀಗಾಗಿಯೇ ಈ ಬಾರಿ ಸೆಂಚುರಿ ಸಿಡಿಸುವ ಸರದಾರ ಯಾರೆಂಬ ಕುತೂಹಲವೂ ಇದೆ. ಹೀಗೆ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬೆಸ್ಟ್ ಪರ್ಫಾಮೆನ್ಸ್ ನೀಡಿಯೂ ಸೋಲುತ್ತಿದ್ರೆ ಅತ್ತ ಇಂಗ್ಲೆಂಡ್ ಸದ್ದಿಲ್ಲದೆ ನಾಲ್ಕನೇ ಪಂದ್ಯವನ್ನ ವಶಪಡಿಸಿಕೊಳ್ಳೋಕೆ ಕದನ ಕಲಿಗಳ ಹೆಸರನ್ನ ಘೋಷಿಸಿದೆ.

ನೋಡಿರಿ

