ಗಿಲ್ ಗೆ ವಿದೇಶಿ ಪಿಚ್ ಗಳೇ ವಿಲನ್.. ENGನಲ್ಲಿ 18 ವರ್ಷಗಳ ಬಿಗ್ ಟಾಸ್ಕ್! – ಸರಣಿ ಗೆದ್ರಷ್ಟೇ TESTನಲ್ಲಿ ಪಾಸ್

ಹೊಸ ಕ್ಯಾಪ್ಟನ್.. ಹೊಸ ಪ್ಲೇಯರ್ಸ್.. 18 ವರ್ಷಗಳ ಬಳಿಕ ಚರಿತ್ರೆ ಸೃಷ್ಟಿಸೋ ಟಾರ್ಗೆಟ್. ಟೀಂ ಇಂಡಿಯಾ ಟೆಸ್ಟ್ ಫಾರ್ಮೆಟ್ನಲ್ಲಿ ಇನ್ಮುಂದೆ ನ್ಯೂ ಚಾಪ್ಟರ್ ಓಪನ್ ಆಗ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಮೂಲಕ ಹೊಸ ಮನ್ವಂತರಕ್ಕೆ ಭಾರತ ಅಡಿಗಲ್ಲು ಹಾಕ್ತಿದೆ. 2025-27ರ ಡಬ್ಲ್ಯೂಟಿಸಿ ಫೈನಲ್ ರೇಸ್ ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಯಿಂದ ಶುರುವಾಗಲಿದೆ. ಲೆಜೆಂಡರಿ ಪ್ಲೇಯರ್ಸ್ ಆಬ್ಸೆನ್ಸ್ನಲ್ಲಿ ಇಂಗ್ಲೆಂಡ್ಗೆ ಹಾರಿರೋ ಭಾರತ ಭರ್ಜರಿ ಪ್ರಾಕ್ಟೀಸ್ನಲ್ಲಿದ್ರೆ ನಾಯಕನಾಗಿ ಶುಭ್ಮನ್ ಗಿಲ್ ಮುಂದೆ ಸಾಲು ಸಾಲು ಸವಾಲುಗಳಿವೆ. ಗಿಲ್ ತಂಡವನ್ನ ಗೆಲ್ಲಿಸೋದ್ರ ಜೊತೆಗೆ ತನ್ನನ್ನೂ ಪ್ರೂವ್ ಮಾಡಿಕೊಳ್ಬೇಕಿದೆ.
ಇದನ್ನೂ ಓದಿ: WTC ಫೈನಲ್ ನಲ್ಲಿ ಗೋಲ್ಡನ್ ಸ್ಟಾರ್ಸ್ – ಸೋಲೇ ಕಾಣದವರಲ್ಲಿ ಸೋಲೋದ್ಯಾರು?
ಟೆಸ್ಟ್ ಕ್ರಿಕೆಟ್ನಿಂದ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ರೋಹಿತ್ ಉತ್ತರಾಧಿಕಾರಿಯಾಗಿ ಶುಭ್ಮನ್ ಗಿಲ್ ನಾಯಕತ್ವ ವಹಿಸಿಕೊಂಡಿದ್ದಾರೆ. 25ನೇ ವಯಸ್ಸಿನಲ್ಲಿ, ಗಿಲ್ ಭಾರತದ 37 ನೇ ಟೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಮನ್ಸೂರ್ ಅಲಿ ಖಾನ್ ಪಟೌಡಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿ ನಂತರದ ಕಿರಿಯ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. 2020ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಗಿಲ್ ಈಗ ತಮ್ಮ ಕ್ರಿಕೆಟ್ ಕರಿಯರ್ನ ಮಹತ್ವದ ಘಟ್ಟದಲ್ಲಿದ್ದಾರೆ. ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಸ್ಪಿನ್ ದಿಗ್ಗಜ ಆರ್. ಅಶ್ವಿನ್ ಮತ್ತು ವೇಗಿ ಮೊಹಮ್ಮದ್ ಶಮಿಯಂತಹ ಅನುಭವಿಗಳೂ ತಂಡದಲ್ಲಿಲ್ಲ. ಹೀಗಾಗಿ ಈ ಪಂದ್ಯ ಬರೀ ಸೋಲು ಗೆಲುವಿನ ಪ್ರಶ್ನೆಯಾಗಿರದೆ ಅವ್ರ ಕ್ಯಾಪ್ಟನ್ಸಿ ಅಸ್ತಿತ್ವದ ಪ್ರಶ್ನೆಯೂ ಆಗಿದೆ.
ಗಿಲ್ ಮುಂದೆ ಹಲವು ಸವಾಲ್!
25 ವರ್ಷದ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ಸಿ ಹೊಸದೇನು ಅಲ್ಲ. ಈಗಾಗ್ಲೇ ಐಪಿಎಲ್ನಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ. ಬಟ್ 20 ಓವರ್ಗಳ ಐಪಿಎಲ್ಗೂ ಪೇಷನ್ಸ್ ಟೆಸ್ಟ್ ಮಾಡೋ ಟೆಸ್ಟ್ ಮ್ಯಾಚಸ್ಗೂ ತುಂಬಾನೇ ವ್ಯತ್ಯಾಸ ಇದೆ. 5 ದಿನಗಳ ಸುದೀರ್ಘ ಪಂದ್ಯದಲ್ಲಿ ತಾಳ್ಮೆಯೇ ಅಸ್ತ್ರ. ಕ್ಯಾಪ್ಟನ್ ಸ್ವಲ್ಪ ಪೇಷನ್ಸ್ ಕಳ್ಕೊಂಡ್ರೂ ಇಡೀ ತಂಡಕ್ಕೆ ಏಟು ಬೀಳುತ್ತೆ. ರೆಡ್ ಬಾಲ್ ಫಾರ್ಮೆಟ್ಗೆ ಬಂದ್ರೆ ಒಂದು ರಣಜಿ ಪಂದ್ಯದಲ್ಲಿ ಮಾತ್ರ ಗಿಲ್ ನಾಯಕತ್ವ ನಿಭಾಯಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಅದೂ ಇಂಗ್ಲೆಂಡ್ ಸರಣಿ ಆಡ್ತಿರೋದ್ರಿಂದ ಒತ್ತಡವನ್ನ ನಿಭಾಯಿಸಬೇಕಿದೆ. ಬಟ್ ಇಲ್ಲಿ ಗಿಲ್ಗೆ ಇರೋ ಮೇನ್ ಚಾಲೆಂಜ್ ಅಂದ್ರೆ ವಿದೇಶಿ ಪಿಚ್. ಭಾರತದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಗಿಲ್ ಅದ್ಭುತ ಆಟಗಾರ. ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ ವಿದೇಶಿ ಪಿಚ್ಗಳಲ್ಲಿ ಅವ್ರ ಬ್ಯಾಟ್ ಸೌಂಡ್ ಮಾಡಿಲ್ಲ. ವಿದೇಶದಲ್ಲಿ ಕೇವಲ 27.53ರ ಸರಾಸರಿ ಹೊಂದಿರೋ ಗಿಲ್, ಬಾಂಗ್ಲಾದೇಶ ವಿರುದ್ಧ ಒಂದು ಶತಕ ಸಿಡಿಸಿದ್ದಾರಷ್ಟೇ. ಇನ್ನೊಂದು ಬಿಗ್ ಚಾಲೆಂಜ್ ಅಂದ್ರೆ ಬರೋಬ್ಬರಿ 18 ವರ್ಷಗಳಿಂದ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿಯನ್ನ ಭಾರತ ಗೆದ್ದೇ ಇಲ್ಲ. 2011, 2014, 2018, 2022ರ ಪ್ರವಾಸದಲ್ಲಿ ಸೋಲು ಕಂಡಿದೆ. ಸೋ ಈ ಸೋಲಿನ ಜರ್ನಿಗೆ ಬ್ರೇಕ್ ಹಾಕಿ 18 ವರ್ಷಗಳ ಬಳಿಕ ಇಂಗ್ಲೆಂಡ್ ನಲ್ಲಿ ಗೆಲ್ಲೋ ಟಾಸ್ಕ್ ಗಿಲ್ ಮುಂದಿದೆ. ಅದೂ ಅಲ್ದೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಶ್ವಿನ್ರಂತ ಅನುಭವಿಗಳು ಟೆಸ್ಟ್ ತಂಡದಲ್ಲಿಲ್ಲ. ಬಹುತೇಕರು ಯುವ ಆಟಗಾರರೇ ಇದ್ದಾರೆ. ಅದ್ರಲ್ಲಿ ಕೆಲವರರಿಗೆ ಇದು ಮೊದಲ ಇಂಗ್ಲೆಂಡ್ ಟೂರ್. ಹೀಗಾಗಿ ಎಲ್ಲರನ್ನೂ ಸಮರ್ಥವಾಗಿ ನಿಭಾಯಿಸೋ ಹೊಣೆ ಗಿಲ್ ಮೇಲಿದೆ.
ಮೊದ್ಲಿಂದಲೂ ವಿರಾಟ್ ಕೊಹ್ಲಿಯವ್ರನ್ನ ಟೀಂ ಇಂಡಿಯಾ ಕಿಂಗ್ ಅಂದ್ರೆ ಶುಭ್ಮನ್ ಗಿಲ್ ಪ್ರಿನ್ಸ್ ಅಂತಾನೇ ಕರೆಸಿಕೊಳ್ತಿದ್ರು. ಇದೀಗ ಯುವರಾಜನ ಪಟ್ಟವೂ ಸಿಕ್ಕಿದೆ. ಆದ್ರೆ ಕೊಹ್ಲಿಯಂತೆ ತಂಡಕ್ಕೆ ಬ್ಯಾಕ್ ಬೋನ್ ಆಗ್ತಾರಾ ಅಂದ್ರೆ ಆ ಭರವಸೆ ಇನ್ನೂ ಸಾಬೀತಾಗಿಲ್ಲ. ಕೊಹ್ಲಿಯಂತೆ, ಗಿಲ್ ಎಲ್ಲಾ ಸ್ವರೂಪದ ಆಟಗಾರ, ಆದರೆ ಕೊಹ್ಲಿಯಂತೆ ಇನ್ನೂ ಯಾವುದೇ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬಂದಿಲ್ಲ. ವಿಶೇಷವಾಗಿ ಟೆಸ್ಟ್ ಪಂದ್ಯಗಳಲ್ಲಿ.. ರೆಡ್ ಬಾಲ್ ಫಾರ್ಮೆಟ್ನಲ್ಲಿ 32 ಪಂದ್ಯಗಳನ್ನ ಆಡಿದ್ದು 1,893 ರನ್ಗಳನ್ನು ಗಳಿಸಿದ್ದಾರೆ. ಇನ್ಮುಂದೆ ಈ ನಂಬರ್ಸ್ ಮತ್ತಷ್ಟು ಎಫೆಕ್ಟಿವ್ ಆಗ್ಲೇ ಬೇಕಿದೆ. ಒಟ್ನಲ್ಲಿ ಮೊದಲ ಟೆಸ್ಟ್ ಸರಣಿಯಲ್ಲೇ ಯುವ ನಾಯಕ ಗಿಲ್ಗೆ ಕಠಿಣ ಸವಾಲುಗಳು ಎದುರಾಗಲಿವೆ. ಇದನ್ನೆಲ್ಲಾ ಹೇಗೆ ನಿಭಾಯಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕು.