ಭಾರತ ಗಡಿಯಲ್ಲಿ ಡ್ರ್ಯಾಗನ್ ಸ್ಕೆಚ್! – ರೋಬೋಟ್ ಡಾಗ್ ಬಳಸಿದ್ದೇಕೆ ಚೀನಾ?
ಇಂಡಿಯಾಗೆ ರೆಡ್ ಆರ್ಮಿ ಟೆನ್ಶನ್!!
ಈಗ ಎಲ್ಲವೂ ಶಾಂತಿಯುತವಾಗಿದ್ರೂ, ಭಾರತ ಮತ್ತು ಚೀನಾ ಗಡಿ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಕೆಲವೊಮ್ಮೆ ಭಾರತ ಚೀನಾ ಗಡಿ ವಿಚಾರಕ್ಕೆ ಸದ್ದು ಮಾಡಿದ್ರೆ, ಇನ್ನೂ ಕೆಲ ಟೈಂ ಬೇರೆ ಬೇರೆ ವಿಚಾರಕ್ಕೆ ಸದ್ದು ಆಗುತ್ತಿದೆ. ಈಗ ಮತ್ತೆ ಗಡಿ ವಿಚಾರ ಸದ್ದು ಮಾಡುತ್ತಿದ್ದು, ಚೀನಾ ಕುತಂತ್ರ ಬಯಲಾಗುತ್ತಿದೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಮರಳಿ ಬಂದಿದೆ, ಭಾರತಕ್ಕೆ ಎಲ್ಲಾ ರೀತಿಯ ನೆರವು ಸಿಗುತ್ತದೆ ಎಂದು ನಿಟ್ಟುಸಿರುವ ಬಿಡುವಾಗ ಹೊಸ ತಲೆನೋವು ಶುರುವಾಗಿದೆ. ರೋಬೋಟ್ ಡಾಗ್‌ಗಳು ಮತ್ತು ಹೈ-ಪವರ್ ಲೇಸರ್ಸ್ ಗಳನ್ನು ಹೊಂದಿರುವ ಡ್ರೋನ್‌ಗಳು ಸೇರಿದಂತೆ AI ತಂತ್ರಜ್ಞಾನವನ್ನ ಭಾರತದ ಗಡಿಯ ಬಳಿ ಚೀನಾ ಬಳಸುತ್ತಿದೆ ಅನ್ನೋ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ : ಮುಸ್ಲಿಂ ರಾಷ್ಟ್ರಗಳಿಂದ ಕುಂಭಮೇಳದ ಬಗ್ಗೆ Google ಸರ್ಚ್
ಚೀನಾ ಮತ್ತು ಭಾರತ ಗಡಿ ವಿಚಾರದಲ್ಲಿ ಯಾವುದೇ ಕಿರಿಕ್‌ಗಳು ಸದ್ಯಕ್ಕೆ ಆಗುತ್ತಿಲ್ಲ. ಆದ್ರೆ ಚೀನಾ ಗಡಿಯಲ್ಲಿ ಭದ್ರತೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದೆ. ಚೀನಾ ತನ್ನ ಗಡಿಯಲ್ಲಿ ರೋಬೋಟ್ ಡಾಗ್‌ಗಳು ಮತ್ತು ಹೈ-ಪವರ್ ಲೇಸರ್ಸ್ ಗಳನ್ನು ಹೊಂದಿರುವ ಡ್ರೋನ್‌ಗಳು ಸೇರಿದಂತೆ AI ತಂತ್ರಜ್ಞಾನವನ್ನ ಬಳಸಿದೆಂದು ವರದಿಯಾಗಿದೆ. ಈ ರೋಬೋಟ್ ಶ್ವಾನಗಳು AI ಮೂಲಕ ಕೆಲಸ ಮಾಡುತ್ತವೆ. ನೀವು ರಿಮೋಟ್ ಮತ್ತು ನಿಮ್ಮ ಮೊಬೈಲ್ ಫೋನ್ ಮೂಲಕ ಇದನ್ನು ಕಂಟ್ರೋಲ್ ಮಾಡಬಹುದು.. ಈ ಹಿಂದೆ ಅಮೆರಿಕ ಮಿಲಿಟರಿ ತರಬೇತಿಯಲ್ಲಿ ರೋಬೋಟ್ ನಾಯಿಗಳನ್ನು ಬಳಸಿತ್ತು. ಎಂ72 ಲೈಟ್ ಆ್ಯಂಟಿ-ಟ್ಯಾಂಕ್ ವೆಪನ್ ಲಾಂಚರ್ ಅನ್ನು ರೋಬೋಟ್ ನಾಯಿಯ ಹಿಂಭಾಗಕ್ಕೆ ಕಟ್ಟಿ ಅಮೆರಿಕ ಪರೀಕ್ಷೆ ನಡೆಸಿತ್ತು. ಹಾಗೇ ಚೀನಾ ಬಹಳ ಸಮಯದಿಂದ ರೋಬೋಟ್ ನಾಯಿಗಳ ಮೇಲೆ ಕೆಲಸ ಮಾಡುತ್ತಿದೆ. ಅನೇಕ ಕಂಪನಿಗಳು ಈ ರೋಬೋಟ್ ನಾಯಿಗಳನ್ನು ತಯಾರಿಸುತ್ತವೆ, ಇಲ್ಲಿಯವರೆಗೆ ಈ ನಾಯಿಗಳನ್ನು ಮನೆಯಲ್ಲಿ ಆಟಿಕೆಗಳಾಗಿ ಪರಿಚಯಿಸಲಾಯಿತು. ಈಗ ಚೀನಾ ಮಿಲಿಟರಿ ತರಬೇತಿಯಲ್ಲಿ ಬಳಸಿರುವುದು ಆತಂಕಕ್ಕೆ ಕಾರಣವಾಗಿದೆ. ಚೀನಾದ ರೋಬೋಟ್ ನಾಯಿಗೆ 7.62 ಎಂಎಂ ಮೆಷಿನ್ ಗನ್ ಅಳವಡಿಸಲಾಗಿದೆ. ಇದು ಅತ್ಯಾಧುನಿಕ ಮೆಷಿನ್ ಗನ್ ಆಗಿದ್ದು, ಒಂದು ನಿಮಿಷದಲ್ಲಿ 750 ಸುತ್ತು ಗುಂಡು ಹಾರಿಸಬಲ್ಲದು. ಈ ರೋಬೋಟ್ ನಾಯಿ 328 ಅಡಿಗಳವರೆಗೆ ಹೊಡೆಯಬಲ್ಲದು. ಮಾಹಿತಿಯ ಪ್ರಕಾರ, ಚೀನಾ ಈ ಹಿಂದೆಯೂ ರೋಬೋಟ್ ನಾಯಿಗಳನ್ನು ತಯಾರಿಸಿದೆ. ಈ ರೋಬೋಟ್ ನಾಯಿ ಚೀನಾ ಸೇನೆಯೊಂದಿಗೆ ಯುದ್ಧ ತರಬೇತಿ ಪಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೋಬೋಟ್ ನಾಯಿಗಳು ಮನುಷ್ಯರು ಹೋಗಲು ಆಗದಂತಹ ಜಾಗಕ್ಕೆ ಕೂಡ ಅಟ್ಯಾಕ್ ಮಾಡುತ್ತವೆ.. ಭಾರತ ಮತ್ತು ಚೀನಾ ಗಡಿ ಕೆಂಪು ಆರ್ಮಿ ಈಗಾಗಲೇ ಡಾಗ್ ರೋಬೋಟ್‌ಗಳನ್ನ ನಿಯೋಜಿಸಿದ್ದು, ಭಾರತದ ಆತಂಕ ಹೆಚ್ಚಾಗಿದೆ.
ಗಡಿಯಲ್ಲಿ ಮೂಲಸೌಕರ್ಯ ವಿಸ್ತರಿಸಿದ ಚೀನಾ
ಭಾರತ ಮತ್ತು ಚೀನಾ 3500 ಕಿಲೋಮೀಟರ್‌ಗಳ ವಿವಾದಿತ ಗಡಿಯನ್ನು ಹಂಚಿಕೊಂಡಿವೆ. ಇದು ಭೂಮಿಯ ಮೇಲಿನ ಕಠಿಣ ಸ್ಥಳಗಳಲ್ಲಿ ಒಂದನ್ನು ಹಾದುಹೋಗುತ್ತದೆ. ಭಾರತ ಮತ್ತು ಚೀನಾದ ಗಡಿಯಲ್ಲಿ ಅನೇಕ ಪ್ರದೇಶಗಳಿವೆ, ಅಲ್ಲಿ ಆಮ್ಲಜನಕದ ಮಟ್ಟವು ಸಮುದ್ರ ಮಟ್ಟಕ್ಕಿಂತ 40% ಗಿಂತ ಕಡಿಮೆಯಾಗಿದೆ. ಎತ್ತರದ ಗಡಿ ಪೋಸ್ಟ್‌ಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆಯು ಸೈನಿಕರ ಆರೋಗ್ಯ ಮತ್ತು ಯುದ್ಧದ ತಯಾರಿದೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.
ಭಾರತದ ಗಡಿ ಪ್ರದೇಶಗಳಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಕಾಯ್ದುಕೊಳ್ಳುವ ಮೂಲಕ ಭಾರತಕ್ಕೆ ಟೆನ್ಷನ್ ಕೊಡುವುದಕ್ಕೆ ಚೀನಾ ಮುಂದಾಗಿದೆ. ಅದಕ್ಕಾಗಿಯೇ ಗಡಿಯಲ್ಲಿ ತನ್ನ ಸೇನಾ ಪೂರೈಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಚೀನಾ ಕೂಡ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಸೇನಾ ಸಮರಾಭ್ಯಾಸ ನಡೆಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಚೀನಾದ ಈ ಕ್ರಮದಿಂದಾಗಿ ಗಡಿಯಲ್ಲಿ ನಿರಂತರ ಉದ್ವಿಗ್ನತೆ ಉಂಟಾಗಲಿದೆ. ಈಗ ಚೀನಾ ತನ್ನ ಸೈನಿಕರಿಗೆ ಶಸ್ತ್ರಾಸ್ತ್ರಗಳು, ಆಮ್ಲಜನಕ ಟ್ಯಾಂಕ್‌ಗಳನ್ನ ಪೂರೈಕೆ ಮಾಡುತ್ತಿದ್ದು ಭಾರತ ಕೂಡ ಅಲರ್ಟ್ ಆಗುತ್ತಿದೆ. ಚೀನಾ ಬಹಳ ಕುತಂತ್ರಿ ಬುದ್ಧಿ ಹೊಂದಿದ್ದು, ಭಾರತ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಿದೆ..