ಬಿಗ್ ಬಾಸ್ ಧ್ವನಿ  ಕರ್ಕಶ!?- ಬಡೆಕ್ಕಿಲ ಪ್ರದೀಪ್ ವಾಯ್ಸ್‌ ಯಾಕಿಲ್ಲ?
ಅರ್ಜೆಂಟ್‌ ನಲ್ಲಿ ಸ್ವರ ಬದಲಾಯ್ತಾ?

ಬಿಗ್ ಬಾಸ್ ಧ್ವನಿ  ಕರ್ಕಶ!?- ಬಡೆಕ್ಕಿಲ ಪ್ರದೀಪ್ ವಾಯ್ಸ್‌ ಯಾಕಿಲ್ಲ?ಅರ್ಜೆಂಟ್‌ ನಲ್ಲಿ ಸ್ವರ ಬದಲಾಯ್ತಾ?

ಇದು ಬಿಗ್ ಬಾಸ್.. ದಿನ 100.. ಸಮಯ 10 ಗಂಟೆ.. ಪ್ರತಿದಿನ ಈ ವಾಯ್ಸ್ ಕೇಳಿದಾಗ ನೆನಪಾಗೋದೇ ಬಿಗ್ ಬಾಸ್.. ಈ  ವಾಯ್ಸ್ ಯಾರದ್ದು ಆಗಿರ್ಬೋದು ಅಂತಾ ಅನೇಕರನ್ನ ಕಾಡ್ತಿತ್ತು.. ಇದೀಗ ಸೀಸನ್ 11 ಕೊನೆಯ ಹಂತಕ್ಕೆ ಬಂದಿದೆ. ಮೊದಲ ಸೀಸನ್ ನಿಂದ ಈ ವರೆಗೂ ಕನ್ನಡ ಬಿಗ್ ಬಾಸ್ ನಲ್ಲಿ ಐದು ಜನ ವಾಯ್ಸ್ ನೀಡ್ತಾ ಬಂದಿದ್ರು.. ಈ ಬಾರಿಯೂ ಹೊಸ ಕಲಾವಿದ ಬಿಗ್ ಬಾಸ್ ಗೆ ವಾಯ್ಸ್ ನೀಡ್ತಾ ಇದ್ದಾರೆ.. ಆದ್ರೆ ಆ ಕಲಾವಿದ ಯಾರು ಅಂತಾ ವೀಕ್ಷಕರನ್ನು ಕಾಡ್ತಿದೆ.. ಅಷ್ಟೇ ಅಲ್ಲ ಈ ಸೀಸನ್ ನಲ್ಲಿ ಬಿಗ್ ಬಾಸ್ ವಾಯ್ಸ್ ವೀಕ್ಷಕರಿಗೆ ಕಿರಿಕಿರಿ ಅನ್ನಿಸಿದೆ.. ಟ್ರೋಲ್ ಕೂಡ ಆಗಿದೆ.. ಅಷ್ಟಕ್ಕೂ ಬಡೆಕ್ಕಿಲ ಪ್ರದೀಪ್‌ ಬಿಗ್‌  ಬಾಸ್ ಗೆ ಯಾಕೆ ವಾಯ್ಸ್ ನೀಡ್ತಿಲ್ಲ? ಈಗ ಹಿನ್ನೆಲೆ ಧ್ವನಿ ನೀಡ್ತಿರೋ ಕಲಾವಿದ ಯಾರು? ಇಲ್ಲಿವರೆಗೆ ಯಾರೆಲ್ಲಾ ಬಿಗ್ ಬಾಸ್ ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ? ಇವೆಲ್ಲದ್ರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ  ಇಲ್ಲಿದೆ.

ಇದನ್ನೂ ಓದಿ: ಸೈಫ್ ಮೇಲೆ ಅಟ್ಯಾಕ್ ಆಗಿದ್ದೇಗೆ? ನಿಜವಾಗಿಯೂ ಚುಚ್ಚಿದ್ದು ಕಳ್ಳನಾ?

ಅತ್ಯಂತ ಜನಪ್ರಿಯ, ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್.. ಹಲವು ಭಾಷೆಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ ಅಪಾರ ಅಭಿಮಾನಿಗಳು ಇದ್ದಾರೆ. ಕನ್ನಡದಲ್ಲೂ ಸೀಸನ್ 10 ಯಶಸ್ವಿಯಾಗಿ ಮುಗಿದಿದ್ದು, 11 ನೇ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಈ 11 ವರ್ಷಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೇಳಿಬರುವ ಧ್ವನಿ, ಅಸಲಿ ‘ಬಿಗ್ ಬಾಸ್’ ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ನಿಜಜೀವನದಲ್ಲಿ ದೇವರು ಹೇಗೋ.. ದೊಡ್ಮನೆಯಲ್ಲಿ ಬಿಗ್ ಬಾಸ್ ಕೂಡ ಹಾಗೇ. ನಮಗ್ಯಾರಿಗೂ ದೇವರು ಕಾಣಿಸಲ್ಲ, ದೇವರ ಮಾತೂ ಕೇಳಿಸಲ್ಲ. ಮಾಡಿದ ಪಾಪ, ಪುಣ್ಯ, ಕರ್ಮಗಳಿಗೆ ಯಾವಾಗ ಪ್ರತಿಫಲ ಸಿಗುತ್ತೋ ಗೊತ್ತಿಲ್ಲ. ನಮ್ಮನ್ನೆಲ್ಲಾ ಬೊಂಬೆ ತರಹ ಆಡಿಸೋನೊಬ್ಬ ಮೇಲೆ ಇದ್ದಾನೆ ಎಂಬ ನಂಬಿಕೆ ಹಲವರಿಗಿದೆ. ಥೇಟ್ ಇದೇ ಕಾನ್ಸೆಪ್ಟ್ ಮೇಲೆ ‘ಬಿಗ್ ಬಾಸ್’ ನಡೀತಾಯಿರೋದು.! ಆಗಾಗ ಅಶರೀರ ವಾಣಿ ಕೇಳಿಸುತ್ತೆ ಬಿಟ್ಟರೆ.. ಬಿಗ್ ಬಾಸ್ ಯಾರಿಗೂ ಕಾಣಿಸಲ್ಲ. ಸ್ಪರ್ಧಿಗಳನ್ನ ಹೇಗೆ ಬೇಕೋ ಹಾಗೆ ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಸುವ ಅಧಿಕಾರ ಬಿಗ್ ಬಾಸ್‌ ಗಿದೆ. ಅಲ್ಲಿ ಏನೇ ನಡೆದರೂ ತಕ್ಕ ಪ್ರತಿಫಲವನ್ನ ಬಿಗ್ ಬಾಸ್ ಕೊಟ್ಟೇ ಕೊಡ್ತಾರೆ. ನಿಜ ಜೀವನದಲ್ಲಿ ಕಲಿಯದ ಅದೆಷ್ಟೋ ಪಾಠವನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಲಿಸ್ತಾರೆ.

ಹೌದು.. ಇದು ಬಿಗ್ ಬಾಸ್ ಅಂದ್ರೆನೇ ಆ  ವಾಯ್ಸ್‌ ಗೊಂದು ಗತ್ತು.. ಆ ವಾಯ್ಸ್‌ ಗೆ ಕಮಾಂಡಿಂಗ್ ಪವರ್ ಇದೆ. ಇಷ್ಟು ಸೀಸನ್ ಗಳಲ್ಲಿ ಐದು ಮಂದಿ ವಾಯ್ಸ್‌ ಆರ್ಟಿಸ್ಟ್‌ ಬಿಗ್‌ ಬಾಸ್‌ ಗೆ ಧ್ವನಿ ನೀಡಿದ್ದಾರೆ.. ಬಿಗ್‌ ಬಾಸ್‌ ಆರಂಭದ ಸೀಸನ್‌ ಗಳಲ್ಲಿ ಅಮಿತ್‌ ಭಾರ್ಗವ್‌ ಬಿಗ್‌ ಬಾಸ್‌ ಗೆ ಧ್ವನಿ ನೀಡ್ತಾ ಇದ್ರು.. ಅಮಿತ್‌ ಭಾರ್ಗವ್‌ ಅವರು 2013ರಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 1 ಹಾಗೂ 2014 ರಲ್ಲಿ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 2 ಕ್ಕೆ ಧ್ವನಿ ನೀಡಿದ್ದರು.

ಇನ್ನು ಕನ್ನಡದ ಹೆಸರಾಂತ ನಟ ಬಿಎಂ ವೆಂಕಟೇಶ್‌ ಅನೇಕ ಸಿನಿಮಾ, ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯಲ್ಲೂ ಝೇಂಡೆ ಪಾತ್ರ ನಿರ್ವಹಿಸಿದ್ದರು ವೆಂಕಟೇಶ್‌.. ಇವರು 2015ರಲ್ಲಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ ಬಾಸ್‌ ಕನ್ನಡ ಸೀಸನ್‌ 3ಗೆ ಧ್ವನಿ ನೀಡಿದ್ದರು.

ಇನ್ನು 2016ರಿಂದ ಸೀಸನ್‌ 10 ವರೆಗೂ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದು  ಶ್ರೀನಿವಾಸ್‌ ಪ್ರಸಾದ್ ಎಂಬವರು.‌ ಆದರೆ ವಾಹಿನಿ ಇವರ ಮುಖ ಪರಿಚಯ ಇನ್ನೂ ಮಾಡಿಲ್ಲ.

ನಟ, ಮಾಡೆಲ್, ಕಂಠದಾನ ಕಲಾವಿದ ಬಡೆಕ್ಕಿಲ ಪ್ರದೀಪ್ ಅವರು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ವೃತ್ತಿ ಪ್ರಾರಂಭಿಸಿದ ಪ್ರದೀಪ್, ಬಳಿಕ ತಮಿಳು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ಇವರು ಬಿಗ್‌ ಬಾಸ್‌ ಶೋಗೆ ಹಿನ್ನೆಲೆ ಧ್ವನಿ ನೀಡುತ್ತಾ ಬಂದಿದ್ರು.. ಬಿಗ್ ಬಾಸ್ನಲ್ಲಿ ನರೇಟರ್ ಆಗಿದ್ದ ಪ್ರದೀಪ್ ಅವರು, ಕೊನೆಯಲ್ಲಿ ಬರುವ ಕೆಲವು ಚೆಂದದ ಸಾಲುಗಳನ್ನು ಅವರು ಹೇಳುತ್ತಿದ್ರು.. ಅವರ ಧ್ವನಿಗೆ ದೊಡ್ಡ ಅಭಿಮಾನಿ ಬಳಗ ಈಗಲೂ ಇದೆ. ಆದ್ರೀಗ ಈ ಸೀಸನ್‌ ನಲ್ಲಿ ಬಡೆಕ್ಕಿಲ ವಾಯ್ಸ್‌ ಆಗೋಮ್ಮೆ ಈಗೊಮ್ಮೆ ಕೇಳಿಸುತ್ತಿದೆ. ಇದೀಗ ಬೇರೆ ವಾಯ್ಸ್‌ಓವರ್‌ ಆರ್ಟಿಸ್ಟ್‌ ಬಿಗ್‌ ಬಾಸ್‌ ಗೆ ಧ್ವನಿ ನೀಡುತ್ತಿದ್ದಾರೆ. ಆ ವಾಯ್ಸ್‌ ಓವರ್‌ ಆರ್ಟಿಸ್ಟ್‌ ಯಾರು ಅಂತ ರಿವೀಲ್‌ ಆಗಿಲ್ಲ.

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಬಡೆಕ್ಕಿಲ ಪ್ರದೀಪ್ ವಾಯ್ಸ್‌ ಕೊಡಿ.. ಬೇರೆಯವರ ವಾಯ್ಸ್‌ ಕೇಳೋಕೆ ಆಗ್ತಿಲ್ಲ.. ವಾಯ್ಸ್‌ ಕರ್ಕಶವಾಗಿದೆ.. ಈ ವಾಯ್ಸ್‌ ನಲ್ಲಿ ಕಮಾಂಡಿಂಗ್​ ಇಲ್ಲವೇ ಇಲ್ಲ.. ಎಂದು ಕೆಲವರು ಬೇಸರ ಹೊರ ಹಾಕಿದ್ದಾರೆ.. ಅಷ್ಟೇ ಅಲ್ಲ ಈ ವಾಯ್ಸ್‌ ಈ ಟ್ರೋಲರ್ಸ್‌ಗಳಿಗೆ ಆಹಾರ ಆಗಿದೆ. ಅರ್ಜೆಂಟ್‌ ನಲ್ಲಿ ಸ್ವರ ಬದಲಾಯ್ತಾ ಅಂತಾ ಕೇಳ್ತಿದ್ದಾರೆ. ಮುಂದಿನ ಸೀಸನ್‌ ಗಳಲ್ಲಾದ್ರೂ ಬೇರೆಯವರು ಧ್ವನಿ ನೀಡಲಿ ವೀಕ್ಷಕರು ಹೇಳ್ತಿದ್ದಾರೆ.

ಇನ್ನು  ಬಡೆಕ್ಕಿಲ ಪ್ರದೀಪ್ ಬಿಗ್‌ ಬಾಸ್‌ ನಲ್ಲಿ ವಾಯ್ಸ್‌ ನೀಡೋದ್ರ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಾನು ಸೀಸನ್‌ 1 ನಿಂದಲೂ ವಾಯ್ಸ್‌ ಕೊಡ್ತಾ ಬಂದಿದ್ದೇನೆ.. ನಾನು ಜಸ್ಟ್‌ ಶೋ ನ ನರೇಟರ್‌ ಅಷ್ಟೇ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *