ಕಾವ್ಯ-ಗಿಲ್ಲಿ ಫ್ರೆಂಡ್‌ಶಿಪ್‌ ಕಟ್!‌ – ರಿಷಾ, ರಾಶಿಕಾ, ಅಶ್ವಿನಿ ಪ್ಲ್ಯಾನ್ಸ್‌ ಸಕ್ಸಸ್‌?

ಕಾವ್ಯ-ಗಿಲ್ಲಿ ಫ್ರೆಂಡ್‌ಶಿಪ್‌ ಕಟ್!‌ – ರಿಷಾ, ರಾಶಿಕಾ, ಅಶ್ವಿನಿ ಪ್ಲ್ಯಾನ್ಸ್‌ ಸಕ್ಸಸ್‌?

ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ಮೊದಲ ದಿನದಿಂದಲೂ ಸಖತ್‌ ಹೈಲೈಟ್‌. ಬಿಗ್‌ ಬಾಸ್‌ ಮನೆಗೆ ಬರೋ ಮುನ್ನ ಇವರಿಬ್ಬರು ಪರಿಚಯ ಇದ್ರೂ ದೊಡ್ಮನೆಗೆ ಬಂದ್ಮೇಲೆ ಗಿಲ್ಲಿ ಕಾವ್ಯ ಮತ್ತಷ್ಟು ಕ್ಲೋಸ್‌ ಆಗಿದ್ದಾರೆ. ಫ್ರೆಂಡು ಅಂತಾ ಕಾವ್ಯ ಗಿಲ್ಲಿನ ಕರೆದ್ರೆ, ಕಾವು ಕಾವು ಅಂತ ಗಿಲ್ಲಿ ಕಾವ್ಯ ಜೊತೆ ಇರ್ತಾರೆ. ಇದೀಗ ಗಿಲ್ಲಿ ಕಾವ್ಯ ಫ್ರೆಂಡ್‌ಶಿಪ್‌ ಕಟ್‌ ಆಯ್ತಾ ಅನ್ನೋ ಡೌಟ್‌ ವೀಕ್ಷಕರನ್ನ ಕಾಡ್ತಿದೆ. ಇದಕ್ಕೆ ಕಾರಣ ನಿನ್ನೆ ನಡೆದ ಅವರಿಬ್ಬರ ಸಂಭಾಷಣೆ.

ಇದನ್ನೂ ಓದಿ: ಉಪೇಂದ್ರ, ಪ್ರಿಯಾಂಕ ಮೊಬೈಲ್‌ ಹ್ಯಾಕ್‌ ಕೇಸ್!‌ – ಆರೋಪಿ ಅರೆಸ್ಟ್‌ ಆಗ್ತಿದ್ದಂತೆ ರಿವೀಲ್‌ ಆಯ್ತು ಶಾಕಿಂಗ್‌ ವಿಚಾರ!

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ, ಕಾವ್ಯ ಪ್ಯೂರ್‌ ಫ್ರೆಂಡ್‌ಶಿಪ್‌. ಇಲ್ಲಿವರೆಗೂ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಗಿಲ್ಲಿ ಬಗ್ಗೆ ಯಾರಾದ್ರೂ ಮಾತನಾಡಿದ್ರೆ, ಕಾವ್ಯ ಸ್ಟ್ಯಾಂಡ್‌ ತಗೊತಾರೆ. ಕಾವ್ಯ ಬಗ್ಗೆ ಯಾರಾದ್ರೂ ಮಾತನಾಡಿದ್ರೆ, ಅವರನ್ನ ಗಿಲ್ಲಿ ಮಾತಲ್ಲೇ ರೋಸ್ಟ್‌ ಮಾಡ್ತಾರೆ. ಸೋತಾ ಇಬ್ಬರು ಸಮಾಧಾನ ಹೇಳ್ತಾರೆ. ಗೆದ್ದಾಗ ಖುಷಿ ಪಡ್ತಾರೆ. ಈ ಸ್ನೇಹ ವೀಕ್ಷಕರಿಗೂ ಸಖತ್‌ ಇಷ್ಟ. ಆದ್ರೆ ದೊಡ್ಮನೆಯಲ್ಲಿ ಇವರನ್ನ ಕಂಡ್ರೆ ಆಗದೇ ಇವರುವವರು ಕೆಲವರು ಇದ್ದಾರೆ. ಅಶ್ಬಿನಿ ಗ್ಯಾಂಗ್‌ ಇವರಿಬ್ಬರನ್ನ ದೂರ ಮಾಡಲು ಸಾಕಷ್ಟು ಬಾರಿ ಪ್ರಯತ್ನಿಸ್ಬೇಕು. ಇನ್ನು ರಿಷಾ, ರಾಶಿ ಒಟ್ಟಿಗೆ ಕೂತು ಗಿಲ್ಲಿ, ಕಾವ್ಯಳನ್ನ ಹೇಗಾದ್ರೂ ಮಾಡಿ ದೂರ ಮಾಡ್ಬೇಕು ಅಂತಾ ಈಗಾಗಲೇ ಮಾತನಾಡಿಕೊಂಡಿದ್ದಾರೆ. ಆದ್ರೂ ಇಷ್ಟು ದಿನ ಇವರಿಬ್ಬರ ಸ್ನೇಗ ಗಟ್ಟಿಯಾಗೇ ಇತ್ತು. ಆದ್ರೀಗ ಕಾವ್ಯಗೆ ಈ ಸ್ನೇಹ ಆಟದ ಮೇಲೆ ಪರಿಣಾಮ ಬೀರಿದೆ ಎಂದೆನಿಸಿದೆ. ಹಾಗಾಗಿ ಗಿಲ್ಲಿ ಜೊತೆ ಕಾವ್ಯ ಚರ್ಚಿಸಿದ್ದಾರೆ. ಗಿಲ್ಲಿ ಕೂಡ ಕಾವ್ಯ ಬಳಿ ಇನ್ನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಕಾವ್ಯ ಮಾತನಾಡಿ, ರಿಷಾ ಒಮ್ಮೊಮ್ಮೆ ಕಾವ್ಯಳಿಂದ ಗಿಲ್ಲಿ ಅಂತಾಳೆ. ಇನ್ನೊಂದು ಸಲ, ಗಿಲ್ಲಿನೇ ಕಾವ್ಯಳನ್ನ ಸೆಮಿಫೈನಲ್‌ವರೆಗೆ ಕರೆದುಕೊಂಡು ಹೋಗ್ತಾ ಇದ್ದಾರೆ ಅಂತಾಳೆ ಅಂತ ಎಂದರು. ಅದಕ್ಕೆ ಗಿಲ್ಲಿ ಮಾತನಾಡಿ, ನಾನು ಕಾವು ಕಾವು ಅಂತ ಹೇಳಿ ಹೇಳಿ, ಒಂದು ದಿನ ಕಾವ್ಯಳನ್ನ ಮನೆಗೆ ಆಚೆ ಹಾಕ್ತೀನಿ ಅನ್ನೋ ಅರ್ಥದಲ್ಲಿ ರಿಷಾ ಹೇಳಿದ್ದು ಎಂದು ಹೇಳಿದ್ದಾರೆ. ಅದಕ್ಕೆ ಕಾವ್ಯ ಉತ್ತರ ನೀಡಿ, ಕೆಲವೊಂದು ಸಲ ಎಲ್ಲದಕ್ಕೂ ಉತ್ತರ ನೀಡಬೇಕಾ ಅಂತ ಅನ್ನಿಸತ್ತೆ. ನಿಂಗೆ ತುಂಬಾ ಸಲ ನಾನು ರೇಗಿಸ್ತೀರ್ತಿನಿ. ಆದರೆ ಇನ್ನು ನೀನು ಇನ್ನು ನನ್ನನ್ನು ರೇಗಿಸಬೇಡ. ಕಾವು ಕಾವು ಅನ್ನಬೇಡ. ಅದು ನನಗೆ ಇಷ್ಟ ಆಗೋದಿಲ್ಲ. ಅದು ನನಗೆ ಎಫೆಕ್ಟ್‌ ಆಗಿದೆ. ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ಕಾವ್ಯಾ ಅವರು ಗಿಲ್ಲಿಗೆ ಹೇಳಿದರು.

ಆದರೆ, ಗಿಲ್ಲಿ ಕಾವ್ಯ ಮಾತನ್ನು ಒಪ್ಪಲಿಲ್ಲ. ಗಿಲ್ಲಿ ಕೂಡ ನಾನು ನಿನ್ನ ರೇಗಿಸಿಯೇ ರೇಗಿಸುತ್ತೇನೆಎಂದರು. ಸರಿ ನಾನು ಇನ್ಮುಂದೆ ನಿನ್ನ ಬಳಿ ಮಾತನಾಡುವುದೇ ಇಲ್ಲಎಂದರು ಗಿಲ್ಲಿ. ಅದಕ್ಕೆ ಗಿಲ್ಲಿ ಅವರಿಗೆ ಕಾವ್ಯ ಅವರು, ಮಾತನಾಡಿಸದೇ ಇರೋದು ತುಂಬಾ ತಪ್ಪಾಗತ್ತೆ ಎಂದರು. ಅದಕ್ಕೆ ಗಿಲ್ಲಿ ಅವರು, ರೂಲ್ಸ್‌ಬುಕ್‌ ಅಲ್ಲಿ ಎಲ್ಲರ ಜೊತೆ ಮಾತನಾಡಿ ಅಂತ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ಸ್ಪರ್ಧಿಗಳು ಅನೇಕ ಬಾರಿ ಗಿಲ್ಲಿ ಹಾಗೂ ಕಾವ್ಯ ಅವರ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿಕೊಂಡಿದ್ದರು. ಆದರೆ, ಇವರ ಗೆಳೆತನ ಅದೆಷ್ಟು ಸ್ಟ್ರಾಂಗ್ ಆಗಿತ್ತು ಎಂದರೆ ಎಂತಹುದೇ ಪರಿಸ್ಥಿತಿ ಬಂದರೂ ಇವರು ಬೇರೆ ಆಗಿರಲಿಲ್ಲ. ಆದರೀಗ ಈ ಮಾತುಕತೆ ಕಂಡು ವೀಕ್ಷಕರು ಶಾಕ್‌ ಆಗಿದ್ದಾರೆ.

Shwetha M