ಕಪ್ ಗೆದ್ದಿದ್ದು ರೋಹಿತ್ ಅಲ್ಲ ಗಿಲ್ – ನಮನ್ ಅವಾರ್ಡ್ಸ್ ನಲ್ಲಿ ಬ್ಲಂಡರ್
ವೈಭವ್ ಸಿಕ್ಸರ್ ಸೀಕ್ರೆಟ್ ಹೇಳಿದ ಸಂಜು

ಕಪ್ ಗೆದ್ದಿದ್ದು ರೋಹಿತ್ ಅಲ್ಲ ಗಿಲ್ – ನಮನ್ ಅವಾರ್ಡ್ಸ್ ನಲ್ಲಿ ಬ್ಲಂಡರ್ವೈಭವ್ ಸಿಕ್ಸರ್ ಸೀಕ್ರೆಟ್ ಹೇಳಿದ ಸಂಜು

ಕಳೆದ ಮೂರು ವರ್ಷಗಳಿಂದ ಭಾರತ ಐಸಿಸಿ ಟೂರ್ನಮೆಂಟ್​ಗಳಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ನೀಡ್ತಾನೇ ಬಂದಿದೆ. ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಬಿಟ್ರೆ ಕಳೆದ ನಾಲ್ಕು ಐಸಿಸಿ ಈವೆಂಟ್​ಗಳಲ್ಲೂ ಫೈನಲ್​ಗೆ ಬಂದು ಮೂರು ಕಪ್​ಗಳನ್ನ ಗೆದ್ದಿದೆ. ವುಮೆನ್ಸ್ ವಿಶ್ವಕಪ್ ಹಾಗೇ ಅಂಡರ್ 19ನಲ್ಲೇ ಟ್ರೋಫಿಗೆ ಮುತ್ತಿಟ್ಟಿದೆ. ಭಾರತದ ಈ ಗೋಲ್ಡನ್ ಜರ್ನಿಯನ್ನ ಬಿಸಿಸಿಐ ನಮನ್ ಅವಾರ್ಡ್ಸ್​ನಲ್ಲಿ ಸೆಲೆಬ್ರೇಟ್ ಕೂಡ ಮಾಡಿದೆ. ಆದ್ರೆ ಈ ಸೆಲೆಬ್ರೇಷನ್​ನಲ್ಲಿ ದೊಡ್ಡ ಬ್ಲಂಡರ್ ಆಗೋಗಿದೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲೇ ನಡೆಯಲಿದೆ 2026ರ IPL ಫೈನಲ್!‌ – ಬೆಂಗಳೂರಿನಲ್ಲಿ RCB ಎಷ್ಟು ಪಂದ್ಯಗಳನ್ನು ಆಡಲಿದೆ?

ವಿಶ್ವಕ್ರಿಕೆಟ್​ನ ಡಾಮಿನೇಷನ್ ಮಾಡ್ತಿರೋ ಭಾರತ ಐಸಿಸಿ ಟೂರ್ನಮೆಂಟ್​ಗಳಲ್ಲಿ ಟ್ರೋಫಿಗಳನ್ನ ಬೇಟೆಯಾಡ್ತಾ ಹೊರಟಿದೆ. ಌಂಡ್ ಅತೀಹೆಚ್ಚು ಐಸಿಸಿ ಟ್ರೋಫಿ ಗೆದ್ದ ನೇಷನ್ ಎನ್ನೋ ದಾಖಲೆ ಬರೆದಿದೆ. ಭಾನುವಾರ  ದೆಹಲಿಯಲ್ಲಿ ಬಿಸಿಸಿಐ ಕಡೆಯಿಂದ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಡಿಸ್ಟ್ರಿಬ್ಯೂಟ್ ಮಾಡಿದ್ರು. ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್​ ಅವರಿಗೆ ಪ್ರತಿಷ್ಠಿತ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಚಾಂಪಿಯನ್ ಪ್ಲೇಯರ್​ಗಳನ್ನೂ ಸನ್ಮಾನಿಸಲಾಯ್ತು. ಆದ್ರೆ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾದವೇ ನಡೆದು ಹೋಗಿದೆ.

ಚಾಂಪಿಯನ್ಸ್ ಟ್ರೋಫಿ ವಿನ್ನಿಂಗ್ ಕ್ಯಾಪ್ಟನ್ ಗಿಲ್!

ಆಗಿದ್ದೇನಂದ್ರೆ ಕಾರ್ಯಕ್ರಮದಲ್ಲಿ ಕ್ಯಾಪ್ಟನ್​ಗಳನ್ನ ಸ್ಟೇಜ್​ ಮೇಲೆ ಕರೆದು ಅವ್ರ ಜರ್ನಿ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನ ಕೇಳಲಾಗ್ತಿತ್ತು. ಹಾಗೇ ಅವ್ರ ಎಕ್ಸ್​ಪೀರಿಯನ್ಸ್​ನ ಶೇರ್ ಮಾಡಿಕೊಳ್ತಿದ್ರು. ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಳೆದ ವರ್ಷ ತಮ್ಮ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಬಗ್ಗೆ ತಮ್ಮ ಥಾಟ್ಸ್ ಹೇಗಿತ್ತು ಅನ್ನೋದನ್ನ ಹೇಳಿದ್ರು. ಇನ್ನು ಸೂರ್ಯಕುಮಾರ್ ಯಾದವ್ ಭಾರತದ ಇತ್ತೀಚಿನ ಟಿ20 ವಿಶ್ವಕಪ್ ಸಕ್ಸಸ್ ಬಗ್ಗೆ ಮಾತಾಡಿದ್ರು. ಆದ್ರೆ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಗ್ಗೆ ಗಿಲ್ ಅವರನ್ನು ಕೇಳುವಾಗ ಎಡವಟ್ಟಾಗಿದೆ. ಏನಂದ್ರೆ ಸ್ಕ್ರೀನ್ ಮೇಲೆ ಗ್ರಾಫಿಕ್ಸ್​ನಲ್ಲಿ ಅವ್ರ ಹೆಸ್ರನ್ನು ಪ್ಲೇ ಮಾಡುವಾಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತನಾಯಕ 2025 ಅಂತಾ ಮೆನ್ಶನ್ ಮಾಡಿದ್ದಾರೆ. ಇದೇ ಸೆಂಟೆನ್ಸ್ ರೋಹಿತ್ ಅಭಿಮಾನಿಗಳನ್ನ ಕೆರಳಿಸಿದೆ.

ರೋಹಿತ್ ಕ್ಯಾಪ್ಟನ್ಸಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ!

ಌಕ್ಚುಲಿ 2025ರ ಮಾರ್ಚ್ 9ರಂದು ಭಾರತ ತಂಡ ರೋಹಿತ್ ಶರ್ಮಾ ಅವ್ರ ಕ್ಯಾಪ್ಟನ್ಸಿಯಲ್ಲಿ  ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಶುಭ್​ಮನ್ ಗಿಲ್ ತಂಡದ ಭಾಗವಾಗಿದ್ರು. ಆ ನಂತ್ರ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕನಾಗಿ ಗಿಲ್ ನೇಮಕ ಆದ್ರು. ಹೀಗಿದ್ರೂ ಚಾಂಪಿಯನ್ಸ್ ಟ್ರೋಫಿ ವಿನ್ನಿಂಗ್ ಕ್ಯಾಪ್ಟನ್ ಅಂತಾ ಗಿಲ್ ಹೆಸರು ಹಾಕಿದ್ದಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬಿಸಿಸಿಐ ಬ್ಲಂಡರ್​ಗೆ ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಒಂದ್ಕಡೆಯಾದ್ರೆ ಮತ್ತೊಂದೆಡೆ ವೈಭವ್ ಸೂರ್ಯವಂಶಿ ಡೇರಿಂಗ್​ನೆಸ್ ಬಗ್ಗೆ ಸಂಜು ಸ್ಯಾಮ್ಸನ್ ಸೀಕ್ರೆಟ್ ಒಂದನ್ನ ರಿವೀಲ್ ಮಾಡಿದ್ದಾರೆ.

ದ್ರಾವಿಡ್ ಮುಂದೆ ಫಿಯರ್ ಲೆಸ್ ಆಗಿ ನಿಂತಿದ್ದ ಸೂರ್ಯವಂಶಿ!

ಇನ್ನು ನಮನ್ ಅವಾರ್ಡ್ಸ್​ನಲ್ಲಿ ಭಾಗಿಯಾಗಿದ್ದ ಟಿ-20 ವಿಶ್ವಕಪ್ ಚಾಂಪಿಯನ್ ತಂಡದ ರೂವಾರಿ ಸಂಜು ಸ್ಯಾಮ್ಸನ್ 2025ರ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಬಗೆಗಿನ ಸೀಕ್ರೆಟ್ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಜೊತೆ ಅದೆಷ್ಟು ಕ್ಯಾಶುಯಲ್ ಆಗಿ ಬಿಹೇವ್ ಮಾಡಿದ್ರು ಅನ್ನೋದನ್ನ ಹೇಳಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ವೈಭವ್‌ಗೆ ಕೆಲ ಸಲಹೆಗಳನ್ನ ನೀಡ್ಬೇಕು ಅಂತಾ ಅಂದಿನ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರನ್ನು ಕರೆದಿದ್ದರಂತೆ.  ಸಂಜು, ನಾವು ವೈಭವ್ ಜೊತೆ ಮಾತಾಡಬೇಕು. ಅವನು ತುಂಬಾ ಚಿಕ್ಕ ಹುಡುಗ, ಹೇಗೆ ಆಡಬೇಕು ಅಂತ ನಾವು ಹೇಳಿಕೊಡಬೇಕು ಅಂದಿದ್ರಂತೆ. ಇದಾದ ಮೇಲೆ ವೈಭವ್ ಕರೆದು, ವೈಭವ್, ನಿನ್ನ ಪ್ಲಾನ್ ಏನು?’ ಅಂತ ಕೇಳಿದ್ದಾರೆ. ಅದಕ್ಕೆ ವೈಭವ್ ‘ಏನಿಲ್ಲ ಸರ್, ನನ್ನ ಆಟ ನಾನು ಆಡ್ತೀನಿ ಎಂದಿದ್ದಾನೆ. ಆಗ ದ್ರಾವಿಡ್ ಮತ್ತೆ ಗೇಮ್ ಪ್ಲಾನ್ ಬಗ್ಗೆ ಕೇಳಿದಾಗ, ಫಸ್ಟ್ ಬಾಲ್ ನನ್ನ ಜೋನ್‌ನಲ್ಲಿ ಬಂದ್ರೆ, ಅದನ್ನು ಸಿಕ್ಸರ್‌ಗೆ ಎತ್ತುತ್ತೇನೆ ಅಂತಾ ವೈಭವ್ ಕೂಲ್ ಆಗಿ ಹೇಳಿದ್ನಂತೆ. ಸೋ ವೈಭವ್ ಮಾತು ಕೇಳಿ ನಾವೇ ಶಾಕ್ ಆಗಿದ್ವಿ. ಅವನು ವಿಡಿಯೋ ಗೇಮ್ ಆಡಿದಷ್ಟೇ ಸುಲಭವಾಗಿ ಕ್ರಿಕೆಟ್‌ ಅನ್ನೂ ನೋಡುತ್ತಾನೆ ಎಂದಿದ್ದಾರೆ. ಒಟ್ನಲ್ಲಿ ಭಾರತ ಕ್ರಿಕೆಟ್​ನಲ್ಲೀಗ ಹಿರಿಯರು, ಕಿರಿಯರು, ವುಮೆನ್ಸ್ ಟೀಂ ಹೀಗೆ ಎಲ್ಲದ್ರಲ್ಲೂ ಗೋಲ್ಡನ್ ಎರಾ ಆಗ್ತಿದೆ.

Shantha Kumari