ಅರೆಬರೇ ಕ್ರಿಕೆಟರ್ ಅಬ್ರಾರ್ – ಪಾಕ್ ಬೌಲರ್ ಅಹಂಗೆ ಪೆಟ್ಟು!
IND ಕೆಣಕಿ ಹೋಯ್ತು ಮಾನ

. ಸೋಲುವ ಹಂತದಲ್ಲಿದ್ದರೂ, ಪಾಕ್ ಬೌಲರ್ ಅಬ್ರಾರ್ ಅಹ್ಮದ್ ತೋರಿದ ವರ್ತನೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ತಾನೇ ಪಂದ್ಯನೇ ಗೆದ್ದು ಬಿಟ್ಟೇ ಅನ್ನೋ ರೇಂಜ್‌ಗೆ ಗಿಲ್‌ಗೆ ಕ್ವಾಟ್ಲೆ ಕೊಟ್ಟ ಅಬ್ರಾರ್ ಬಗ್ಗೆ ನಿಮಗೆ ಗೊತ್ತಿಲ್ಲ ಒಂದಷ್ಟು ಇಂಟ್ರಸ್ಟಿಂಗ್ ವಿಷ್ಯವನ್ನ ನೋಡೋಣ ..
ಕುತ್ತಿಗೆ ತಿರುಗಿಸಿ ಅಬ್ರಾರ್ ವಿಚಿತ್ರ ವರ್ತನೆ
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ನಮ್ಮ ಬೌಲರ್ಸ್ ಗಳು ಹೇಗೆ ಬೌಲ್ ಮಾಡುತ್ತಾರೆ ಎನ್ನುವುದು ಹೆಡ್ ಕೋಚ್ ಗೌತಂ ಗಂಭೀರ್ ಅವರಿಗೆ ದೊಡ್ಡ ಚಿಂತೆಯಾಗಿತ್ತು. ಆದರೆ, ರೋಹಿತ್ ಶರ್ಮಾ ಮಾಡುತ್ತಿದ್ದ ಬೌಲಿಂಗ್ ಬದಲಾವಣೆ, ಫೀಲ್ಡ್ ಪ್ಲೇಸ್ಮೆಂಟ್ ಸರಿಯಾಗಿ ಭಾರತದ ಪರವಾಗಿ ವರ್ಕ್ ಆಯಿತು. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಶತಕಗಳಿಸಿದ್ದ ಶುಭ್ಮನ್ ಗಿಲ್, ಅದೇ ಬ್ಯಾಟಿಂಗ್ ಲಯದಲ್ಲಿ ಆಡುತ್ತಿದ್ದರು. ಇನ್ನಿಂಗ್ಸನ 18ನೇ ಓವರ್ ಅನ್ನು ಸ್ಪಿನ್ನರ್ ಅಬ್ರಾರ್ ಅಹ್ಮದ್ ಎಸೆಯುತ್ತಿದ್ದರು. ಮೂರನೇ ಬಾಲಿನ ಮರ್ಮವನ್ನು ಅರಿಯಲಾರದೇ, ಶುಭ್ಮನ್ ಗಿಲ್ ಬೌಲ್ಡ್ ಆದರು. ಗಿಲ್, 46 ರನ್ ಗಳಿಗೆ ಪೆವಲಿಯನ್ ಕಡೆ ತೆರಳಿದರು. ಔಟಾದ ನಂತರ ಸುಖಾಸುಮ್ಮನೆ ಗಿಲ್ ಅನ್ನು ಕೆಣಕಿದ ಅಬ್ರಾರ್ ಅಹ್ಮದ್, ಕೈಕಟ್ಟಿಕೊಂಡು ಮುಖದಲ್ಲೇ ವಾಪಸ್ ಹೋಗು ಎಂದು ಮೂರು ಬಾರಿ ಸನ್ನೆ ಮಾಡಿದರು. ಗಿಲ್, ಅವರ ಹತ್ತಿರ ತಿರುಗಿ ನೋಡಿ, ಪೆವಲಿಯನ್ ಕಡೆ ಹೋದರು. ಅಬ್ರಾರ್ ವಿಚಿತ್ರ ವರ್ತನೆಯನ್ನು ಕೈತಟ್ಟಿ ಇಮಾಮ್-ಉಲ್-ಹಕ್ ಬೆಂಬಲಿಸಿದರು. ಗಿಲ್ ಔಟಾಗುವ ವೇಳೆ, ಭಾರತ 100 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಇನ್ನೊಂದು ಕಡೆ, 31 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ತಂಡವನ್ನು ಗೆಲುವಿನತ್ತು ಕೊಂಡೊಯ್ಯುತ್ತಿದ್ದರು. ಅಬ್ರಾರ್ ಅಹ್ಮದ್ ಅವರ ವಿಚಿತ್ರ ವರ್ತನೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ, ಅವರನ್ನು ಸಮರ್ಥಿಸಿಕೊಂಡಂತಿತ್ತು. ಹತ್ತು ಓವರ್ ಎಸೆದ ಅಬ್ರಾಹ್ ಅಹ್ಮದ್, ಒಂದು ಹಂತಕ್ಕೆ ಟೀಂ ಇಂಡಿಯಾದ ಆಟಗಾರರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. 10 ಓವರ್ ನಲ್ಲಿ ಕೇವಲ 28 ರನ್ ನೀಡಿ, ಗಿಲ್ ವಿಕೆಟ್ ಅನ್ನು ಪಡೆದರು. ಅಬ್ರಾರ್ ಅಹ್ಮದ್ ದುರಂಹಕಾರದ ವರ್ತನೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಗುರಿಯಾಗಿದೆ. ಮ್ಯಾಚ್ ಮುಗಿದು 4-5 ದಿನವಾದ್ರು ಈ ಬಗ್ಗೆ ಚರ್ಚೆ ಆಗುತ್ತಲೇ ಇದೆ.
ಪ್ರಿನ್ಸ್ ನ ಕೆಣಕಿ ಕ್ರೀಸ್ ನಲ್ಲಿ ಕಿಂಗ್ ಇರೋದನ್ನೇ ಮರೆತ..
ಇನ್ನು ಅಬ್ರಾರ್ ರ ಈ ವರ್ತನೆಗೆ ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ.. ಪಾಕಿಸ್ತಾನದ ಅಭಿಮಾನಿಗಳೂ ಕೂಡ ಕೆಂಡಕಾರುತ್ತಿದ್ದಾರೆ. ಪ್ರಿನ್ಸ್ ನ ಕೆಣಕಿ ಕ್ರೀಸ್ ನಲ್ಲಿ ಕಿಂಗ್ ಇರೋದನ್ನೇ ಅಬ್ರಾರ್ ಮರೆತ.. ಈತನಿಂದಲೇ ಫಾರ್ಮ್ ನಲ್ಲೇ ಇಲ್ಲದ ಕೊಹ್ಲಿ ರೊಚ್ಚಿಗೆದ್ದು ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದರು ಎನ್ನುವ ಅರ್ಥದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ. ಗಿಲ್ ಔಟ್ ಆದಾಗ ಅಭಿಮಾನಿಗಳು ಪಾಕ್ ಸ್ಪಿನ್ನರ್ ನನ್ನು ಕೇವಲ ಪೋಸ್ಸ್‌ಗಳ ಮೂಲಕ ಟ್ರೋಲ್ ಮಾಡುವುದಲ್ಲದೆ, ಮೀಮ್‌ಗಳನ್ನು ಸಹ ಬಿಡುಗಡೆ ಮಾಡುತ್ತಿದ್ದಾರೆ.
ಅಬ್ರಾರ್‌ಗೆ ವಾಸೀಂ ಅಕ್ರಂ ಕ್ಲಾಸ್
ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಕತ್ತು ತಿರುಗಿಸಿ ಅಬ್ರಾರ್ ವಿಚಿತ್ರ ಸೆಲಿಬ್ರೇಷನ್ ಮಾಡಿದ್ದು, ವಾಸೀಂ ಅಕ್ರಂ ಅವರ ಕೆಂಗಣ್ಣಿಗೆ ಗುರಿಯಾಗಿದೆ. ‘ಅಬ್ರಾರ್ ಎಸೆದ ಆ ಚೆಂಡು ನನ್ನನ್ನು ನಿಜಕ್ಕೂ ಪ್ರಭಾವಿಸಿತು, ಆದರೆ ಆತನ ಸೆಲಿಬ್ರೇಷನ್ ನನಗಂತೂ ಇಷ್ಟವಾಗಲಿಲ್ಲ. ತಂಡ ಮುಳುಗುವ ಹಂತದಲ್ಲಿ ಈ ರೀತಿಯ ಸಂಭ್ರಮಾಚರಣೆಯ ಅಗತ್ಯವಿತ್ತಾ? ಎಲ್ಲದಕ್ಕೂ ಸಮಯ ಸಂದರ್ಭ ಅಂತ ಇರುತ್ತೆ. ತಂಡ ಸೋಲುವ ಒತ್ತಡದಲ್ಲಿತ್ತು, ಆಗ ನೀವು 5 ವಿಕೆಟ್ ಪಡೆದಾಗ ಮಾಡುವ ಸಂಭ್ರಮಾಚರಣೆ ಇದ್ದಂತೆ ಇತ್ತು. ಇಂತಹ ಸಂಭ್ರಮಾಚರಣೆ ಟಿವಿಯಲ್ಲಿ ಚೆನ್ನಾಗಿ ಕಾಣೊಲ್ಲ ಎಂದು ವಾಸೀಂ ಅಕ್ರಂ ಯುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಕಿವಿ ಹಿಂಡಿದ್ದಾರೆ.
ಅಬ್ರಾರ್ ಅಹ್ಮದ್ ಸಾಧನೆ ಏನು?
ಡಿಸೆಂಬರ್ 2022 ರಲ್ಲಿ, ಇಂಗ್ಲೆಂಡ್ ವಿರುದ್ಧದ ಸರಣಿಯ 2 ನೇ ಟೆಸ್ಟ್ ಪಂದ್ಯದಲ್ಲಿ ಅಹ್ಮದ್ ಪಾಕಿಸ್ತಾನ ಪರ ಪಾದಾರ್ಪಣೆ ಮಾಡಿದರು . ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಮೊದಲ ಪಾಕಿಸ್ತಾನಿ ಬೌಲರ್ ಆದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟಾರೆಯಾಗಿ 114 ರನ್‌ಗೆ 7 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 120 ರನ್‌ಗೆ 4 ವಿಕೆಟ್ ಪಡೆದರು. ಇನ್ನು ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಪಡೆದ ಹದಿಮೂರನೇ ಪಾಕಿಸ್ತಾನಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನವೆಂಬರ್ 26, 2024 ರಂದು ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಬ್ರಾರ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದರು. ಚೊಚ್ಚಲ ಸ್ಪಿನ್ನರ್ ಕೇವಲ 33 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು, ಜಿಂಬಾಬ್ವೆಯನ್ನು 145 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ ಇವರು ತಂದೆ ತಾಯಿಗೆ 8 ಜನ ಮಕ್ಕಳಲ್ಲಿ ಕೊನೆಯವರು ಅಬ್ರಾರ್ ಅಹ್ಮದ್.. ಹೇಳಿಕೊಳ್ಳುವಂತಹ ಸಾಧನೆ ಮಾಡದಿದ್ರು, ಆಡಿಕೊಳ್ಳುವುದನ್ನ ಮಾತ್ರ ಈ ಅಹ್ಮದ್ ಅಬ್ರಾರ್ ಬಿಟ್ಟಿಲ್ಲ..