ದೇಶಾದ್ಯಂತ 80 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ! – ಕೆಂಪುಕೋಟೆಯಲ್ಲಿ ಯುವಜನರಿಗೆ ಪ್ರಧಾನಿ ಮೋದಿ ಮಹತ್ವದ ಸಂದೇಶ!

ದೇಶಾದ್ಯಂತ 80 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ! – ಕೆಂಪುಕೋಟೆಯಲ್ಲಿ ಯುವಜನರಿಗೆ ಪ್ರಧಾನಿ ಮೋದಿ ಮಹತ್ವದ ಸಂದೇಶ!

ದೇಶದಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯೋತ್ಸವವು ರಾಷ್ಟ್ರೀಯ ಗೀತೆ ವಂದೇ ಮಾತರಂ ರಚನೆಯಾಗಿ 150 ವರ್ಷಗಳು ಪೂರೈಸಿದ ಐತಿಹಾಸಿಕ ಘಟ್ಟಕ್ಕೆ ಸಾಕ್ಷಿಯಾಗಿದ್ದು, ಕೆಂಪುಕೋಟೆಯ ಅಧಿಕೃತ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಗೀತೆಯ ಗಾಯನ ಮಾರ್ದನಿಸಿತು.

ಇದನ್ನೂ ಓದಿ: GBA ಹೊಸ ಪಾರ್ಕಿಂಗ್ ನೀತಿ ಜಾರಿ – ಯಾವ ರಸ್ತೆಗೆ ಎಷ್ಟು ಪಾರ್ಕಿಂಗ್ ಶುಲ್ಕ ಗೊತ್ತಾ?

ಇನ್ನು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅಭಿವೃದ್ಧಿಯ ವೇಗವನ್ನು ನಾವು ಹೆಚ್ಚಿಸಬೇಕು. ಯುವ ಜನರು ಮೇಕ್‌ ಇನ್‌ ಇಂಡಿಯಾದತ್ತ ಗಮನ ಹರಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಕಳೆದ 12 ವರ್ಷಗಳಿಂದ ದೇಶದಲ್ಲಿ ಅಭಿವೃದ್ದಿಯ ವೇಗ ಹೆಚ್ಚಿದೆ. ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತೇವೆ. 140 ಕೋಟಿ ಭಾರತೀಯರ ಪ್ರಯತ್ನಗಳೊಂದಿಗೆ, ನಾವು ಈ ಗುರಿಯನ್ನು ಸಾಧಿಸಬೇಕು. ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ನಾವು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಹೇಳಿದರು.

ಭಾರತದ ಯುವಜನರು ಈ ದೇಶದ ಆಸ್ತಿ ಎಂದು ಹೇಳಿದ್ದಾರೆ. ದೇಶದ ಕನಸುಗಳನ್ನು ನನಸಾಗಿಸಲು ಯುವ ಪೀಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನನ್ನ ದೇಶದ ಯುವಕರು, ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರು, ನನ್ನ ದೇಶದ ರೈತರು ಮತ್ತು ನನ್ನ ದೇಶದ ಕಾರ್ಮಿಕರಲ್ಲಿ ನನಗೆ ನಂಬಿಕೆ ಇದೆ, ನಾವು ಭಾರತವನ್ನು ಅಭಿವೃದ್ದಿ ಹೊಂದಿದ ದೇಶಗಳ ಸಾಲಿನಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನೋಡಬಹುದು ಎಂದು ಹೇಳಿದ್ದಾರೆ.

ವಿಕ್ಷಿತ್ ಭಾರತ್ 2047 ರ ಪ್ರಯಾಣದಲ್ಲಿ ‘ಯುವ ಶಕ್ತಿ’ಯ ಪಾತ್ರದ ಕುರಿತು ಮಾತನಾಡಿದ ಪ್ರಧಾನಿ, ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗದಾತರಾಗಿ ಹೊಸ ಉದ್ಯಮಗಳನ್ನು ಆರಂಭಿಸಬೇಕು. ಹೊಸ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ.

ಡೇಟಾ ಸೆಂಟರ್‌ಗಳು ಮತ್ತು ಚಿಪ್ ಉದ್ಯಮದ ವಿಸ್ತರಣೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಇಂಧನ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದರು. 2047 ರವರೆಗೆ ಭಾರತ 100 GW ವಿದ್ಯುತ್ ಉತ್ಪಾದಿಸಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ಇನ್ನೂ ಐದರಿಂದ ಎಂಟು ಸೆಮಿಕಂಡಕ್ಟರ್ ಸ್ಥಾವರಗಳು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಸೆಮಿಕಂಡಕ್ಟರ್ ಉತ್ಪಾದನೆಯ ವಿಸ್ತರಣೆಯು “ಆತ್ಮನಿರ್ಭರ ಭಾರತ”ದತ್ತ ಭಾರತದ ಪ್ರಯಾಣದ ಭಾಗವಾಗಿದೆ ಮತ್ತು “ವಿಕ್ಷಿತ ಭಾರತ”ಕ್ಕೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *