ಉಕ್ರೇನ್‌ಗೆ ಜೋ ಬೈಡನ್ ಬಲ – ಕೊನೆ ಕ್ಷಣದಲ್ಲಿ ಟ್ರಂಪ್‌ಗೆ ಶಾಕ್ 
ರಷ್ಯಾ Vs ಉಕ್ರೇನ್‌ ವಾರ್‌.. ಉ.ಕೊ ಎಂಟ್ರಿ 

ಉಕ್ರೇನ್‌ಗೆ ಜೋ ಬೈಡನ್ ಬಲ – ಕೊನೆ ಕ್ಷಣದಲ್ಲಿ ಟ್ರಂಪ್‌ಗೆ ಶಾಕ್ ರಷ್ಯಾ Vs ಉಕ್ರೇನ್‌ ವಾರ್‌.. ಉ.ಕೊ ಎಂಟ್ರಿ 

ರಷ್ಯಾ ಹಾಗೂ ಉಕ್ರೇನ್‌ನ ನಡುವೆ ನಡೆಯುತ್ತಿರೋ ಭೀಕರ ಯುದ್ಧ ನಿಂತೇ ಇಲ್ಲ. ಆದ್ರೆ  ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಅಧಿಕಾರಕ್ಕೆ ಬಂದ್ರೆ ವಿಶ್ವದಲ್ಲಿ ಯುದ್ಧಗಳು ನಿಲ್ಲಲಿವೆ ಎಂದೇ ಹೇಳಲಾಗಿತ್ತು.  ಆದ್ರೆ ಈ ಬಗ್ಗೆ ಟ್ರಾಂಪ್ ಇನ್ನೂ ಯಾವುದೇ ಮಾತುಗಳನ್ನ ಆಡಿಲ್ಲ. ಈ ನಡುವೆ ಕೊನೆಯ ಕ್ಷಣದಲ್ಲೂ ರಷ್ಯಾ ಮೇಲೆ ದಾಳಿ ನಡೆಸುವುದಕ್ಕೆ ಅಮೆರಿಕದ ಹಂಗಾಮಿ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ಸೂಚನೆ ನೀಡಿದ್ದಾರೆ. ಜೋ ಬೈಡನ್ ಅವರು ಕೊನೆ ಟ್ರೈಂನಲ್ಲಿ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡ್ರು? ಇದ್ರಿಂದ ಟ್ರಂಪ್‌ಗೆ ಏನೆಲ್ಲಾ ಎಫೆಕ್ಟ್ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ಪ್ಲೇಯಿಂಗ್ 11 ಸ್ಲಾಟ್ ಫಿಕ್ಸ್ – ಓಪನರ್ TO ಡೆತ್ ಓವರ್ ಬೌಲರ್

ಜೋ ಬೈಡನ್ ಅವರು ಅಮೆರಿಕದ ದೀರ್ಘ ಶ್ರೇಣಿಯ ಹಾಗೂ ಬಲಿಷ್ಠ ಕ್ಷಿಪಣಿಗಳನ್ನು ಬಳಸಲು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ರಷ್ಯಾದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವಂತೆ ಉಕ್ರೇನ್‌ಗೆ ಸೂಚಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳೇ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಬೈಡನ್ ನಿರ್ಧಾರ, ಟ್ರಂಪ್‌ಗೆ ತಲೆನೋವು

ಅಂದಹಾಗೇ  ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ರಷ್ಯಾದ ಮಿಲಿಟರಿ ಭಾಗವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಕ್ಕೆ ಪ್ರಬಲ ಮಿಸೈಲ್‌ಗಳನ್ನು ಬಳಸುವುದಕ್ಕೆ ಅನುಮತಿ ನೀಡುವಂತೆ ಮನವಿ ಮಾಡುತ್ತಲ್ಲೇ ಇದ್ದರು. ಇದೀಗ ಕೊನೆಯ ಹಂತದಲ್ಲಿ ಜೋ ಬೈಡನ್ ಅವರು, ಈ ಮಿಸೈಲ್‌ಗಳ ದಾಳಿಗೆ ಅನುಮತಿ ಸೂಚಿಸಿದ್ದಾರೆ. ಆದರೆ, ಅಧಿಕಾರ ಸ್ವೀಕರಿಸುವ ಹಂತದಲ್ಲಿ ಇರುವ ಡೊಲಾಲ್ಡ್‌ ಟ್ರಂಪ್‌ಗೆ ಇದು ಹೊಸ ಸವಾಲು ತಂದೊಡ್ಡಿದೆ. ಚುನಾವಣೆ ಸಂದರ್ಭದಲ್ಲಿ ಅವರು ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಆದರೆ, ಅವರ ಲೆಕ್ಕಾಚಾರಗಳು ಈಗ ತಲೆಕೆಳಗಾಗುತ್ತಿದ್ದು, ಆತಂಕ ಸೃಷ್ಟಿ ಮಾಡಿದೆ.  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ಗೆ ನ್ಯಾಟೋದೊಂದಿಗೆ ಸೇರುವುದು ವಿರೋಧಿಸಿದ್ದರು. ಇದೇ ಯುದ್ಧಕ್ಕೆ ಮುಖ್ಯಕಾರಣವಾಗಿತ್ತು. ಅಲ್ಲದೇ ಮುಂದುವರಿದು ಉಕ್ರೇನ್‌ಗೆ ಅಮೆರಿಕದಿಂದ ಹೆಚ್ಚಿನ ಮಿಲಿಟರಿ ಸಹಾಯ ಸಿಗಲು ಶುರುವಾಗಿದ್ದು, ರಷ್ಯಾವನ್ನು ಕೆರಳಿಸಿತ್ತು.

ಇದೀಗ ರಷ್ಯಾಗೆ ಉತ್ತರ ಕೊರಿಯಾದ ಮಿಲಿಟರಿ ಆಗಮಿಸಿದೆ. ಗುಪ್ತಚರ ವರದಿಗಳ ಪ್ರಕಾರ, ಉತ್ತರ ಕೊರಿಯಾದ 10,000 ಸೈನಿಕರು ರಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ  ನಾನು ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ನಿಲ್ಲಿಸಲಿದ್ದೇನೆ ಎಂದು ಟ್ರಂಪ್ ಹೇಳಿದ್ದರು. ಆದರೆ, ಇದೀಗ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ ಹಿಂದೆಂದಿಗಿಂತಲೂ ತೀಕ್ಷ್ಣವಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿಯನ್ನು ನೂತನ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಹೇಗೆ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ಎದುರಾಗಿದೆ.

Shwetha M

Leave a Reply

Your email address will not be published. Required fields are marked *