ಎಷ್ಟು ಎಚ್ಚರಿಕೆ ನೀಡಿದ್ದರೂ ಬುದ್ಧಿ ಕಲಿಯದ ಹೌತಿಗಳು! – ಬಂಡುಕೋರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಬೈಡನ್!

ಎಷ್ಟು ಎಚ್ಚರಿಕೆ ನೀಡಿದ್ದರೂ ಬುದ್ಧಿ ಕಲಿಯದ ಹೌತಿಗಳು! – ಬಂಡುಕೋರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಬೈಡನ್!

ಯಾವಾಗ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ತಾರಕಕ್ಕೇರಿತೋ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಬಾಲ ಬಿಚ್ಚಿದ್ದಾರೆ. ಪದೇ ಪದೇ ಹಡಗುಗಳ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಜಾಗತಿಕ ಸಮುದಾಯದ ಎಚ್ಚರಿಕೆ ನಡುವೆಯೂ ಹೌತಿ ಬಂಡುಕೋರರು ಪದೇ ಪದೇ ಹಡಗುಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಎಚ್ಚರಿಕೆಯ ನಡುವೆಯೂ ಹಡಗುಗಳ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಮತ್ತು ಲಂಡನ್ ದಾಳಿ ನಡೆಸಿದೆ.

ಇದನ್ನೂ ಓದಿ: ಇನ್ಮುಂದೆ ದೇಗುಲಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ – ರೂಲ್ಸ್‌ ಫಾಲೋ ಮಾಡಿಲ್ಲಂದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ!

ದಾಳಿ ಮಾಡಿರುವ ಬಗ್ಗೆ ಯೆಮೆನ್​​ ಕನ್ಫರ್ಮ್ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಡವಾಗಿ ಹೇಳಿಕೆ ನೀಡಿದ್ದು,  ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯಲ್ಲ. ಯುನೈಟೆಡ್ ಸ್ಟೇಟ್ಸ್ ಹಾಗೂ ಪಾಲುದಾರರು ನಮ್ಮ ಸಿಬ್ಬಂದಿ ಮೇಲಿನ ದಾಳಿಯನ್ನು ಸಹಿಸಲ್ಲ. ಕಡಲಿನ ನ್ಯಾವಿಗೇಷನ್ ಆಫ್ ಫ್ರೀಡಂ ಹಾಳು ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನ ರಕ್ಷಣಾ ಸಚಿವಾಲಯ ಕೂಡ ಹೇಳಿಕೆ ನೀಡಿದ್ದು, ಹೌತಿಗಳು ವ್ಯಾಪಾರಿ ಶಿಪ್ಪಿಂಗ್‌ಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಟ್ಯಾಕ್ ಮಾಡಲಾಗಿದೆ ಎಂದಿದೆ.

ಯೆಮೆನ್‌ನ ಹೆಚ್ಚಿನ ಭಾಗವನ್ನು ಹೌತಿಗಳು ನಿಯಂತ್ರಿಸುತ್ತಿದ್ದಾರೆ. ಅಂತೆಯೇ ಕೆಂಪು ಸಮುದ್ರದ ಹಡಗು ಮಾರ್ಗಗಳಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಅಂತಾರಾಷ್ಟ್ರೀಯ ಹಡಗುಗಳಿಗೆ ತೊಂದರೆ ನೀಡುತ್ತಿದ್ದಾರೆ. ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಯುರೋಪ್ ಮತ್ತು ಏಷ್ಯಾ ನಡುವಿನ ಪ್ರಮುಖ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಅಡ್ಡಿಪಡಿಸ್ತಿದ್ದಾರೆ. ಇದನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಮತ್ತು ಇತರೆ ದೇಶಗಳು ಕರೆ ಮಾಡಿ ಎಚ್ಚರಿಕೆ ನೀಡಿದ್ದವು. ಆದರೂ ಹೌತಿಗಳು ತಮ್ಮ ಅಟ್ಟಹಾಸ ನಿಲ್ಲಿಸದ ಹಿನ್ನೆಲೆಯುಲ್ಲಿ ದಾಳಿಯಾಗಿದೆ.

Shwetha M