ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್- ಬೈಡನ್ ನಡುವೆ ಮತ್ತೆ ಸ್ಪರ್ಧೆ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್- ಬೈಡನ್ ನಡುವೆ ಮತ್ತೆ ಸ್ಪರ್ಧೆ!

ಯುನೈಟೆಡ್‌ ಸೇಟ್ಸ್‌ನಲ್ಲಿ ಚುನಾವಣಾ ಕಣ ರಂಗೇರಿದೆ. ಈ ವರ್ಷದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಡೆಮೋಕ್ರೆಟಿಕ್‌ ಪಾರ್ಟಿಯ ಅಭ್ಯರ್ಥಿಯಾಗಿ ಹಾಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ತಮ್ಮ ನಾಮ ನಿರ್ದೇಶನವನ್ನು ಬುಧವಾರ ಭದ್ರಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌ ಕೂಡ ಸ್ಥಾನ ಭದ್ರಪಡಿಸಿಕೊಳ್ಳುವ ಸಮೀಪದಲ್ಲಿದ್ದು, ಕಳೆದ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಟ್ರಂಪ್- ಬೈಡನ್ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತವಾಗಿದೆ.

ಇದನ್ನೂ ಓದಿ:  ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಕೆಗೆ ನಿಷೇಧ – ನಿಯಮ ಉಲ್ಲಂಘಿಸಿದರೆ 5,000 ರೂ. ದಂಡ

ಪ್ರಾಥಮಿಕ ಹಂತದಲ್ಲಿ ತಮ್ಮ ಪಕ್ಷಗಳಿಂದ ಬೈಡನ್ ಹಾಗೂ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಇದ್ದ ಸವಾಲುಗಳನ್ನು ಗೆದ್ದಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಜಾರ್ಜಿಯಾ, ಮಿಸ್ಸಿಸ್ಸಿಪ್ಪಿ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ಹೆಚ್ಚಿನ ಗೊಂದಲಗಳು ಇರಲಿಲ್ಲ. ತಮ್ಮ ತಮ್ಮ ಪಕ್ಷಗಳಿಂದ ಬೈಡನ್ (ಡೆಮಾಕ್ರಾಟ್) ಹಾಗೂ ಟ್ರಂಪ್ (ರಿಪಬ್ಲಿಕನ್) ಆಯ್ಕೆ ಸ್ಪಷ್ಟವಾಗಿತ್ತು. ಆದರೆ ಅವರ ಗೆಲುವಿನ ಅಂತರದ ಪ್ರಮಾಣ ರಾಷ್ಟ್ರೀಯ ಸಮಾವೇಶಗಳಲ್ಲಿ ತಮ್ಮ ಪಕ್ಷದ ನಾಮನಿರ್ದೇಶನವನ್ನು ಪಡೆಯಲು ಅಗತ್ಯವಿರುವ ಬಹುಮತವನ್ನು ನೀಡಿತು.

ಈ ಚುನಾವಣೆಯನ್ನು ಇಬ್ಬರು ಜನಪ್ರಿಯವಲ್ಲದ ಅಧ್ಯಕ್ಷರ ನಡುವಿನ ಮರು ಸ್ಪರ್ಧೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. 81 ವರ್ಷಗಳ ಬೈಡನ್ ಈಗಾಗಲೇ ಅಮೆರಿಕದ ವಯಸ್ಸಿನಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದರೆ, 77 ವರ್ಷದ ಟ್ರಂಪ್ ವಿರುದ್ಧ 4 ಕ್ರಿಮಿನಲ್ ಪ್ರಕರಣಗಳಿದ್ದು, ಜೈಲಿನ ಭೀತಿಯನ್ನೂ ಎದುರಿಸುತ್ತಿದ್ದಾರೆ.

ಬೈಡನ್ 2 ನೇ ಅವಧಿಗೆ ತಮ್ಮ ಸ್ಪರ್ಧೆಯನ್ನು ಖಚಿತಪಡಿಸುತ್ತಿದ್ದಂತೆಯೇ ಟ್ರಂಪ್ ನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ್ದಾರೆ.

Shwetha M