ಹಗಲೇ ಎಟಿಎಂ ರಾಬರಿ ನಡೆದಿದ್ದೇಗೆ? – 93 ಲಕ್ಷದ ಜೊತೆ ಕಳ್ಳರು ಜೂಟ್!!
ದರೋಡೆಕೋರರ ಸ್ಕೆಚ್ ಹೇಗಿತ್ತು ಗೊತ್ತಾ?
ಇಡೀ ದೇಶವೇ ಬೆಚ್ಚಿ ಬೀಳುವ ಎಟಿಎಂ ದರೋಡೆ ಬೀದರ್‌ನಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಈ ಎಟಿಎಂ ಕಳ್ಳತನ ನಡೆದಿದ್ದು. ಎಸ್‌ಬಿಐ ಬ್ಯಾಂಕ್ ಮತ್ತು ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ಈ ದರೋಡೆ ನಡೆದಿದೆ. ಬ್ಯಾಂಕ್‌ಗೆ ಹಣ ತುಂಬಿಸುವುದಕ್ಕೆ ಸಿಬ್ಬಂದಿ ಬಂದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ, ಹಣ ದೋಚಿ ದುರೋಡೆಕೋರರು ಪರಾರಿಯಾಗಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲದೆ ಈ ಶೂಟೌಟ್ ಪ್ರಕರಣದಲ್ಲಿ ಒಬ್ಬ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಬ್ಯಾಂಕ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ಆಗಿದ್ದು ಹೇಗೆ?
ಪ್ರತಿ ದಿನ ಹೇಗೆ ಬರ್ತಾ ಇದ್ರೋ ಹಾಗೇ ಏಜೆನ್ಸಿ ಸಿಬ್ಬಂದಿ ಎಟಿಎಂಗೆ ಹಣ ತುಂಬುವುದಕ್ಕೆ ಬೀದರ್‌ನ ಹೃದಯ ಭಾಗ ಶಿವಾಜಿ ಚೌಕ್ನ ಎಸ್‌ಬಿಐ ಎಟಿಎಂಗೆ ಬಂದಿದ್ದಾರೆ. ಜನ ಎಂದಿನಂತೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು. ಎಟಿಎಂಗಳಿಗೆ ಹಣ ತುಂಬುವ ವಾಹನವೊಂದು ಅಲ್ಲಿಗೆ ಬಂದಿದೆ. ಹಣ ತುಂಬಿದ ಏಜೆನ್ಸಿ ವಾಹನ ಅಲ್ಲಿಗೆ ಬರುವುದನ್ನೇ ದುಷ್ಕರ್ಮಿಗಳು ಕಾಯ್ತಾ ಇದ್ರು. ಈ ವೇಳೆ ಬೈಕ್‌ನಲ್ಲಿ ಎಂಟ್ರಿಕೊಟ್ಟ ಪಾಪಿಗಳು ಮೊದಲು ಸಿಬ್ಬಂದಿಯಿಂದ ಹಣ ಕಸಿದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ. ಸಿಬ್ಬಂದಿ ಹಣ ಕೊಡುವುದಕ್ಕೆ ನಿರಾಕರಿಸಿದ್ದಾರೆ. ಆಗ ಏಜೆನ್ಸಿ ಹಾಗೂ ದರೋರೆಕೋರರ ನಡುವೆ ಗುದ್ದಾಟ ಏರ್ಪಟ್ಟಿದೆ. ಬ್ಯಾಂಕ್‌ನ ಏಜೆನ್ಸಿ ದುಡ್ಡುಗಳನ್ನು ತುಂಬಿಸಿದ್ದ ದುಡ್ಡಿನ ಬಾಕ್ಸ್ ಕೊಡುವುದಕ್ಕೆ ನಿರಾಕರಿಸಿದ ಕೂಡಲೇ ದರೋಡೆಕೋರರು ಏಜೆನ್ಸಿಗಳ ಮೇಲೆ ಮನಸೋಇಚ್ಛೆ ಖಾರದ ಪುಡಿಯನ್ನು ಎರಚಿದ್ದಾರೆ. ನಂತ್ರ ಗನ್‌ನಿಂದ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದಂತೆಯೇ ವಾಹನದಲ್ಲಿದ್ದ ಹಣದ ಬಾಕ್ಸ್ ಅನ್ನು ಬೈಕ್‌ನಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಈ ವಿಡಿಯೋ ನೋಡಿದವರು ಸಾಮಾನ್ಯವಾಗಿ ಒಂದು ಪ್ರಶ್ನೆ ಬರೋದು ಸಹಜ.. ಅಲ್ಲಿದ್ದ ಜನ ಏನ್ ಮಾಡ್ತಾ ಇದ್ರು.. ಹೋಗಿ ಬಿಡಿಸಿದ್ರೆ ಒಂದು ಪ್ರಾಣವಾದ್ರು ಉಳಿತಾ ಇತ್ತು ಅನ್ನೋದು. ಆದ್ರೆ ಅದು ಬಾಯಿಲ್ಲಿ ಹೇಳಿದಷ್ಟು ಸುಲಭವಲ್ಲ.. ಯಾಕಂದ್ರೆ ಆ ದರೋಡೆಕೋರರ ಕೈಯಲ್ಲಿ ಗನ್ ಇದ್ದಿತ್ತು. ಒಂದು ವೇಳೆ ಯಾರದ್ರೂ ಆ ವೇಳೆ ಮಧ್ಯ ಹೋಗಿದ್ರೆ ಗುಂಡು ಹಾರಿಸುತ್ತಿದ್ರು. ಹೀಗಾಗಿ ಹೆದರಿ ಜನ ಕೈ ಸಿಕ್ಕ ಕಲ್ಲು ತೂರಿ, ದುರ್ಷರ್ಮಿಗಳನ್ನು ತಡೆಯಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಾಗೇ 93 ಲಕ್ಷ ವಿದ್ದ ಬಾಕ್ಸ್ ಎತ್ತಿ ಬೈಕ್ ಮೇಲೆ ಇಡೋ ವೇಳೆಗೆ 2-3 ಸರಿ ಕೆಳಗೆ ಬಿದ್ದಿದ್ದಾರೆ.. ನಂತ್ರ ಇಬ್ಬರು ಬೈಕ್ ಹತ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಗುಂಡೇಟು ತಿಂದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ರೆ, ಘಟನೆಯಲ್ಲಿ ಗಾಯಗೊಂಡಿದ್ದ 26 ವರ್ಷದ ಶಿವಕುಮಾರ್ ಅವರನ್ನು ಚಿಕಿತ್ಸೆಗಾಗಿ ಬೀದರ್‌ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಮೃತ ಕುಟುಂಬದ ಆಕ್ರಂದನ ಮುಗಿಲು ಮಟ್ಟಿದ್ದು, ಈ ದೃಶ್ಯವನ್ನ ನೋಡಿದವರಿಗೆ ಕಣ್ಣೀರು ಬರುವಂತಿಗೆ. ಸದ್ಯ ಆರೋಪಿಗಳಿಗಾಗಿ ಬೀದರ್ ಪೊಲೀಸರು ಬಲೆ ಬಿಸಿದ್ದಾರೆ. ಬೈಕ್ ವಾಹನದ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.
ಇನ್ನು ಹಾಡುಹಗಲಲ್ಲೇ ಈ ರೀತಿಯ ಘಟನೆ ನಡೆದಿದೆ ಎನ್ನುವುದು ಒಂದು ಕಡೆಯಾದರೆ. ಬೀದರನ ಪ್ರಮುಖ ಸರ್ಕಾರಿ ಕಚೇರಿಗಳ ಹೃದಯಭಾಗದಲ್ಲೇ ಈ ಘಟನೆ ನಡೆದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕ್‌ನ ಸಮೀಪದಲ್ಲೇ ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯೂ ಇದೆ. ಇಂತಹ ಪ್ರಮುಖ ಕಚೇರಿಗಳು ಸುತ್ತಮುತ್ತ ಇರುವ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಆತಂಕ ಹಾಗೂ ಆಶ್ಚರ್ಯಕ್ಕೂ ಕಾರಣವಾಗಿದೆ. ಇನ್ನೂ ಎಟಿಎಂ ಹಣ ತುಂಬುವ ಸಿಬ್ಬಂದಿ ಬಳಿ ಗನ್ ಕೂಡ ಇರುತ್ತೆ. ಆದ್ರೆ ಇಲ್ಲಿ ಸಿಬ್ಬಂದಿ ಹಾಡ ಹಗಲು ಈ ಜಾಗದಲ್ಲಿ ನಮ್ಮನ್ನ ಏನ್ ಮಾಡ್ತಾರೆ ಅನ್ನೋ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿ, ವಾಹನದೊಳಗೆ ಗನ್ ಇಟ್ಟಿದ್ರಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಒಟ್ನಲ್ಲಿ ಬೀದರ್‌ನಲ್ಲಿ ನಡೆದ ಘಟನೆ ಇಡೀ ಕರ್ನಾಟಕವನ್ನ ಬೆಚ್ಚಿ ಬೀಳಿಸಿದ್ದು, ಪೊಲೀಸರು ಆದಷ್ಟು ಬೇಗ ಆರೋಪಿಗಳುನ್ನ ಹಿಡಿದು ಅವರಿಗೆ ತಕ್ಕ ಶಿಕ್ಷೆಯನ್ನ ಕೊಡಿಸಬೇಕಿದೆ..