ಬೀದರ್ನಲ್ಲಿ ಆನ್ಲೈನ್ಗೇಮ್ಗೆ MBBS ವಿದ್ಯಾರ್ಥಿ ಬಲಿ – 80 ಸಾವಿರಕ್ಕೆ ಜೀವ ಕಳೆದುಕೊಂಡ್ನಾ?

ಆನ್ಲೈನ್ ಗೇಮ್ ಗೀಳು ಸಾಕಷ್ಟು ಜನರ ಜೀವನವನ್ನ ಬೀದಿಗೆ ತಂದಿದೆ. ಸಾಕಷ್ಟು ಜನ ಮನೆಯ ಜೊತೆ ಜೀವವನ್ನ ಕಳೆದುಕೊಂಡಿದ್ದಾರೆ. ಈಗ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಬೀದರ್ನಲ್ಲಿ ಈ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ವಸತಿ ನಿಲಯದಲ್ಲಿ ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ದೊಡ್ಡ ಆಘಾತ ಮೂಡಿಸಿದೆ. ಯುವ ವೈದ್ಯಕೀಯ ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ವಿದ್ಯಾರ್ಥಿ ಸಮುದಾಯ ಆಘಾತಗೊಂಡಿದೆ.
ಇದನ್ನೂ ಓದಿ: ಬಿಗ್ಬಾಸ್ ಧನರಾಜ್ ಜೋಡಿಗೆ ಬಂಪರ್ ಚಾನ್ಸ್ – ಮದುವೆಯಾದ ವಾರದಲ್ಲೇ ರುದ್ರಮಾಸ್ಟರ್ಗೆ ಸಿಕ್ತು ಮತ್ತೊಂದು ರಿಯಾಲಿಟಿ ಶೋ
21 ವರ್ಷದ ಅನಿಷ್ಕಾರ್ ಚೌಹಾಣ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾ ಗ್ರಾಮದ ನಿವಾಸಿಯಾಗಿದ್ದು, ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ವೈದ್ಯರಾಗುವ ಕನಸು ಹೊತ್ತಿದ್ದ ಯುವಕನ ಬದುಕು ಹೀಗೆ ದುರಂತ ಅಂತ್ಯ ಕಂಡಿದೆ.
ಅನಿಷ್ಕಾರ್ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ನೇಹಿತರು ಹಾಗೂ ಹಾಸ್ಟೆಲ್ ಸಿಬ್ಬಂದಿ ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತಿಳಿದುಕೊಂಡ ಕೂಡಲೇ ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದರು. ಎಸ್ಪಿ ಪ್ರದೀಪ್ ಗುಂಟಿ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡಿದ್ದ ಕಾರಣ ಅನಿಷ್ಕಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಾಹಿತಿಯಂತೆ, ಅನಿಷ್ಕಾರ್ ಆನ್ಲೈನ್ ಗೇಮ್ ಆಡುತ್ತಿದ್ದು, ಅದರ ಮೂಲಕ ಸುಮಾರು ₹80 ಸಾವಿರದಷ್ಟು ಹಣ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ವಿಷಯದಿಂದ ಆತ ತೀವ್ರವಾಗಿ ಮನನೊಂದಿದ್ದು, ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಈ ಮಾನಸಿಕ ಒತ್ತಡವೇ ಅವರನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ತಳ್ಳಿದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನೋಡಿರಿ

