ಚೆನ್ನೈ ವಿರುದ್ಧ ಕಣಕ್ಕಿಳೀತಾರೆ ಸ್ವಿಂಗ್ ಕಿಂಗ್ ಭುವನೇಶ್ವರ್ – ಪಂದ್ಯಕ್ಕೆ ಟಿಕೆಟ್ ಬೆಲೆ ಎಷ್ಟು?

ಕೆಕೆಆರ್ ವಿರುದ್ಧ ಇನಾಗುರೇಷನ್ ಪಂದ್ಯದಲ್ಲೇ ಗೆದ್ದು ಬೀಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಚೆನ್ನೈ ವಿರುದ್ಧ ತನ್ನ ಎರಡನೇ ಪಂದ್ಯಕ್ಕೆ ರೆಡಿಯಾಗ್ತಿದೆ. ಅತ್ತ ಮುಂಬೈ ತಂಡವನ್ನ ಮಣಿಸಿರೋ ಸಿಎಸ್ಕೆ ಕೂಡ ಗೆಲುವಿನ ಜರ್ನಿ ಕಂಟಿನ್ಯೂ ಮಾಡೋ ನಿರೀಕ್ಷೆಯಲ್ಲಿದೆ. ಮಾರ್ಚ್ 28 ಅಂದ್ರೆ ಇದೇ ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಈ ಎರಡೂ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಲಾಸ್ಟ್ ಸೀಸನಲ್ಲಿ ಚೆನ್ನೈ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಎಂಟ್ರಿ ಪಡೆದಿದ್ದ ಆರ್ಸಿಬಿ, ಇದೀಗ ಮತ್ತೊಮ್ಮೆ ಚೆನ್ನೈ ವಿರುದ್ಧ ಗೆಲ್ಲೋ ಉತ್ಸಾಹದಲ್ಲಿದೆ. ಈಗಾಗ್ಲೇ ಚೆನ್ನೈ ಫ್ರಾಂಚೈಸಿ ಟಿಕೆಟ್ಗಳನ್ನೂ ಮಾರಾಟ ಮಾಡ್ತಿದೆ. ಸ್ಟಾರ್ಟಿಂಗ್ ಪ್ರೈಸ್ ₹1,700 ರೂಪಾಯಿ ಫಿಕ್ಸ್ ಮಾಡ್ಲಾಗಿದೆ. ಸಿಎಸ್ಕೆ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಕೆಎಂಕೆ ಟೆರೆಸ್ ಟಿಕೆಟ್ ಬೆಲೆ 7,500 ರೂಪಾಯಿಗಳಿದೆ.
ಇದನ್ನೂ ಓದಿ : CSK ಟೀಂನಿಂದ ಬಾಲ್ ಟ್ಯಾಂಪರಿಂಗ್? – ಸೋಶಿಯಲ್ ಮೀಡಿಯಾದಲ್ಲಿ ಬ್ಯಾನ್ ಟ್ರೆಂಡಿಂಗ್
ಆರ್ಸಿಬಿ ಬೌಲಿಂಗ್ ಟೀಂ ಮುನ್ನಡೆಸೋ ಜವಾಬ್ದಾರಿ ಹೊತ್ತಿರುವಂತ ಭುವನೇಶ್ವರ್ ಕುಮಾರ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಬಟ್ ಈಗ ಅದೇ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಪ್ರಾಕ್ಟೀಸ್ ಟೈಮಲ್ಲಿ ಸಣ್ಣ ಗಾಯಕ್ಕೆ ತುತ್ತಾಗಿದ್ದ ಭುವಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಕಂಪ್ಲೀಟ್ ಫಿಟ್ ಆಗಿದ್ದು ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ತಂಡದ ಪ್ರಮುಖ ಬೌಲರ್ ಆಗಿರುವ ಭುವನೇಶ್ವರ್ಗೆ, ಜೋಶ್ ಹೇಜಲ್ವುಡ್ ಮತ್ತು ಯಶ್ ದಯಾಳ್ ಪೇಸರ್ಗಳಾಗಿ ಸಾಥ್ ನೀಡಲಿದ್ದಾರೆ. ಭುವಿ ತಂಡಕ್ಕೆ ಎಂಟ್ರಿ ಕೊಟ್ಟರೆ ರಸಿಕ್ ದಾರ್ ಸಲಾಮ್ ಹೊರಗುಳಿಯಲಿದ್ದಾರೆ. ಈ ಒಂದು ಬದಲಾವಣೆ ಹೊರತು ಪಡಿಸಿ ಉಳಿದಂತೆ ಮೊದಲ ಪಂದ್ಯದಲ್ಲಿ ಆಡಿರುವ ತಂಡವೆ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ನಲ್ಲಿ ಈ ವರೆಗೂ ಭುವನೇಶ್ವರ್ ಕುಮಾರ್ 176 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 181 ವಿಕೆಟ್ಗಳನ್ನು ಪಡೆದಿದ್ದಾರೆ. 19 ರನ್ಗಳಿಗೆ 5 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಸ್ಪೆಲ್ ಆಗಿದೆ.
ಬೆಂಗಳೂರು ಮತ್ತು ಚೆನ್ನೈ ಮ್ಯಾಚ್ ಅಂದ್ರೆ ಅದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲೇ ಇರುತ್ತೆ. ಐಪಿಎಲ್ನಲ್ಲಿ ಈ ತಂಡಗಳ ನಡುವೆ ಇದುವರೆಗೆ 33 ಪಂದ್ಯಗಳ ನಡೆದಿವೆ. ಇದರಲ್ಲಿ ಚೆನ್ನೈ ತಂಡ ಹೆಚ್ಚಿನ ಪಂದ್ಯ ಗೆದ್ದು ಆರ್ಸಿಬಿ ಮೇಲೆ ಪ್ರಾಬಲ್ಯ ಮೆರೆದಿದೆ. ಚೆನ್ನೈ ಒಟ್ಟು 21 ಬಾರಿ ಆರ್ಸಿಬಿ ವಿರುದ್ಧ ಗೆಲವು ಸಾಧಿಸಿದೆ. ಆರ್ಸಿಬಿ ತಂಡ ಗೆಲುವಿನ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದಿದ್ದು 11 ಪಂದ್ಯಗಳಲ್ಲಿ ಮಾತ್ರ ಸಿಎಸ್ಕೆ ವಿರುದ್ಧ ಗೆಲ್ಲಲು ಸಾಧ್ಯವಾಗಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಬಟ್ ಈ ಸಲ ಹೊಸ ಕ್ಯಾಪ್ಟನ್, ಹೊಸ ಟೀಂ ಜೊತೆ ಫಸ್ಟ್ ಮ್ಯಾಚಲ್ಲೇ ಗೆದ್ದಿರೋ ಆರ್ಸಿಬಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಕಾಣ್ತಿದೆ.