ಭಾವಿ ಪತ್ನಿಗೆ ಭರ್ಜರಿ ಗಿಫ್ಟ್ ಕೊಟ್ಟ ಭುವನ್! – ಮದುವೆಗೂ ಮುನ್ನವೇ ಹೊಸ ಮನೆ ಗೃಹಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ನಡುವಲ್ಲೇ ಭುವನ್ ಪೊನ್ನಣ್ಣ ತೋಟದ ಮನೆ ಕಟ್ಟಿಸಿದ್ದು, ಮದುವೆ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಸಂಪ್ರದಾಯದಂತೆ ಹರ್ಷಿಕಾ ಪೂಣಚ್ಚ ದೀಪ ಹಿಡಿದು ಮನೆ ಒಳಗೆ ಪ್ರವೇಶ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಭಾರಿ ವೈರಲ್ ಆಗಿದೆ.
ಆಗಸ್ಟ್ 24, 25 ರಂದು ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡವ ಸಂಪ್ರದಾಯದಂತೆ ಕೊಡಗಿನಲ್ಲಿ ಈ ಜೋಡಿಯ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಭುವನ್ ಹರ್ಷಿಕಾಗಾಗಿಯೇ ತೋಟದ ಮನೆ ಕಟ್ಟಿಸಿದ್ದಾರೆ. ಹರ್ಷಿಕಾ ಪೂಣಚ್ಚ ಮದುವೆಗೂ ಮುನ್ನವೇ ಭುವನ್ ಅವರ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: ಮುದ್ದಿನ ಮಡದಿಯ ಅಗಲಿಕೆ ನೋವಲ್ಲಿ ರಾಘು – ವಿಜಯ ರಾಘವೇಂದ್ರ ಅಭಿನಯದ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ
ಮನೆಯ ಗೃಹ ಪ್ರವೇಶ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಬಾವಿ ಪತ್ನಿ ಹರ್ಷಿಕಾ ಪೂಣಚ್ಚ ಎಂಟ್ರಿಕೊಟ್ಟಿದ್ದಾರೆ. ಭುವನ್ ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ. ಈ ಸಂಭ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ. ತಮ್ಮ ಪ್ರೀತಿಯನ್ನು ಬಹುತೇಕ ಗುಟ್ಟಾಗಿಯೇ ಇರಿಸಿದ್ದ ಈ ಜೋಡಿ ಇದೀಗ ಮದುವೆ ಆಗುತ್ತಿದ್ದಾರೆ. ಸದ್ಯ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಅವರುಗಳು ತಮ್ಮ ಮದುವೆಯ ಆಹ್ವಾನ ಪತ್ರಿಕೆ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರರಂಗದ ಹಲವು ಗಣ್ಯರನ್ನು ತಮ್ಮ ವಿವಾಹಕ್ಕೆ ಹರ್ಷಿಕಾ ಹಾಗೂ ಭುವನ್ ಆಹ್ವಾನಿಸುತ್ತಿದ್ದಾರೆ. ಹಿರಿಯ, ಕಿರಿಯ ಹೀಗೆ ಎಲ್ಲ ನಟ-ನಟಿಯರನ್ನು ತಮ್ಮ ಮದುವೆಗೆ ಈ ಜೋಡಿ ಆಹ್ವಾನಿಸುತ್ತಿದ್ದಾರೆ.