ವೋಟ್​ ಮಾಡಿ ಡೈಮಂಡ್‌ ರಿಂಗ್‌ ಗೆದ್ರು.. – ಮನೆಗೆ ಹೋದ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್​!

ವೋಟ್​ ಮಾಡಿ ಡೈಮಂಡ್‌ ರಿಂಗ್‌ ಗೆದ್ರು.. – ಮನೆಗೆ ಹೋದ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್​!

ದೇಶದಲ್ಲಿ ಈಗಾಗಲೇ ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಮಧ್ಯಪ್ರದೇಶದಲ್ಲಿ ಚುನಾವಣಾ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಮತದಾರರಿಗೆ ಲಕ್ಕಿ ಡ್ರಾ ಗಳನ್ನು ನಡೆಸಿ ಆಕರ್ಷಕ ಉಡುಗೊರೆಗಳನ್ನು ಚುನಾವಣಾ ಅಧಿಕಾರಿಗಳು ನೀಡಿದ್ದರು.. ಅದೃಷ್ಟಶಾಲಿ ಮತದಾರರ ಪೈಕಿ ನಾಲ್ವರಿಗೆ ಡೈಮಂಡ್‌ ರಿಂಗ್ ಕೂಡ ಸಿಕ್ಕಿತ್ತು. ಇದೀಗ ಡೈಮಂಡ್‌ ರಿಂಗ್‌ ಹೊಸ ವಿವಾದ ಹುಟ್ಟುಹಾಕಿದೆ.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್‌! – ಜೂನ್‌ 1 ರ ವರೆಗೆ ಜಾಮೀನು ಮಂಜೂರು

ಇದು ನಿಜವಾದ ವಜ್ರಗಳಲ್ಲ ಎಂದು ವಿಜೇತರಿಗೆ ಅನುಮಾನ ಬಂದಿದೆ. ಹೊಳೆಯುವುದೆಲ್ಲವೂ ವಜ್ರವಲ್ಲ ಎನ್ನುವಂತೆ ಮಂಗಳವಾರ ಭೋಪಾಲ್‌ನಲ್ಲಿ ಮತದಾರರಿಗೆ ನೀಡಲಾದ ‘ಡೈಮಂಡ್’ ಉಂಗುರಗಳು ‘ಅಮೆರಿಕನ್ ವಜ್ರಗಳು ಎಂದು ತಿಳಿದುಬಂದಿದೆ. ಲಕ್ಕಿ ಜ್ಯುವೆಲರ್ಸ್ ಬೈರಾಗರ್ ಎಂಬ ಹೆಸರಿನ ಸಣ್ಣ ಪೆಟ್ಟಿಗೆಗಳಲ್ಲಿ ಉಂಗುರಗಳು ಬಂದಿದ್ದವು. ಶೀಘ್ರದಲ್ಲೇ, ಅದರ ಮಾಲೀಕ ಮಹೇಶ್ ದದ್ದಾನಿಗೆ ಕರೆಗಳು ಬರಲಾರಂಭಿಸಿದವು. ಆದರೆ, ಉಂಗುರಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ದದ್ಲಾನಿ ಹೇಳಿದ್ದಾರೆ.

ಈ ವಿವಾದ ಭುಗಿಲೇಳುತ್ತಿದ್ದಂತೆ ಅಲ್ಲಿನ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.  ಜನರು ಹೊರಗೆ ಬಂದು ಮತದಾನ ಮಾಡಲು ಉತ್ತೇಜನ ನೀಡುವ ಸಲುವಾಗಿ ಈ ಉಂಗುರ ಉಡುಗೊರೆಯಾಗಿ ನೀಡಲಾಗಿದೆ. ಈ ಉಂಗುರದಲ್ಲಿರುವ ವಜ್ರವು ನೈಸರ್ಗಿಕವೋ ಅಥವಾ ಲ್ಯಾಬ್ ನಿರ್ಮಿತವೋ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಅದರಲ್ಲಿ ಚಿನ್ನವಿದೆ ಎಂದು ಹೇಳಿದ್ದಾರೆ.

Shwetha M