‘ಸ್ವರೂಪ್ ನನ್ನ ಮಗ ಇದ್ದಂತೆ, ನಿದ್ದೆ ಬಿಟ್ಟು ಗೆಲ್ಲಿಸಿ’ – ಭವಾನಿ ರೇವಣ್ಣ ಮಾತು ಅಚ್ಚರಿ ಮೂಡಿಸಿದ್ದೇಕೆ?

‘ಸ್ವರೂಪ್ ನನ್ನ ಮಗ ಇದ್ದಂತೆ, ನಿದ್ದೆ ಬಿಟ್ಟು ಗೆಲ್ಲಿಸಿ’ – ಭವಾನಿ ರೇವಣ್ಣ ಮಾತು ಅಚ್ಚರಿ ಮೂಡಿಸಿದ್ದೇಕೆ?

ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ವಿಚಾರವಾಗಿ ಹಾಸನ ಕ್ಷೇತ್ರ ಭಾರೀ ಹಲ್​ಚಲ್ ಸೃಷ್ಟಿಸಿತ್ತು.. ನಾನೇ ಸ್ಪರ್ಧಿ, ನನಗೇ ಟಿಕೆಟ್ ಎಂದು ಸ್ವಯಂಘೋಷಣೆ ಮಾಡಿಕೊಂಡಿದ್ದ ಭವಾನಿ ರೇವಣ್ಣ ತಿಂಗಳಿಂದ್ಲೂ ಪಟ್ಟು ಕದಲಿಸಿರಲಿಲ್ಲ. ಆದರೆ ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸ್ವರೂಪ್ ಪ್ರಕಾಶ್​ಗೆ ಟಿಕೆಟ್ ಅನೌನ್ಸ್ ಮಾಡಿ ಹೆಚ್.ಡಿ ಕುಮಾರಸ್ವಾಮಿ ಟ್ವಿಸ್ಟ್ ಕೊಟ್ಟಿದ್ರು.. ಇಷ್ಟು ದಿನ ಟಿಕೆಟ್ ವಿಚಾರವಾಗಿ ಮಾತನಾಡದ ಭವಾನಿ ಕೊನೆಗೂ ಮೌನ ಮುರಿದಿದ್ದಾರೆ.. ಅದೂ ಕೂಡ ಸ್ವರೂಪ್ ಪ್ರಕಾಶ್ ಬಗೆಗಿನ ಹೇಳಿಕೆಯೇ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ : ‘ಸಾಮ್ರಾಟ್​’ಗೆ ಡಿಕೆ ಬ್ರದರ್ಸ್ ಡಿಚ್ಚಿ – ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಸುರೇಶ್ ಸ್ಪರ್ಧೆ?

ಹೌದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ನನ್ನ ಮಗ ಇದ್ದಂತೆ. ಕ್ಷೇತ್ರದ ಕಾರ್ಯಕರ್ತರು ನಿದ್ದೆ ಬಿಟ್ಟು ಕೆಲಸ ಮಾಡಬೇಕು. ಅವರನ್ನ ಗೆಲ್ಲಿಸಿಕೊಂಡು ಬರಬೇಕು ಅಂತಾ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್ ಮಿಸ್ ಆಗಿದ್ದರ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹೆಚ್.ಡಿ ದೇವೇಗೌಡರ ಆರೋಗ್ಯವೇ ನನಗೆ ಮುಖ್ಯವಾಗಿತ್ತು. ಹಾಗೇ ಹೆಚ್ ​ಡಿಡಿ ಮತ್ತು ಜೆಡಿಎಸ್ ಪಕ್ಷಕ್ಕಿಂತ ನಾನು ದೊಡ್ಡವಳಾ ಅನ್ಕೊಂಡೆ. ಯಾರಿಗೆ ಟಿಕೆಟ್ ನೀಡೋದು ಅನ್ನೋ ಚರ್ಚೆ ನಡೆಯುತ್ತಿರುವಾಗ ನಾನೇ ತೀರ್ಮಾನ ಮಾಡಿ ಸ್ವರೂಪ್ ಹೆಸರನ್ನ  ಅನೌನ್ಸ್ ಮಾಡಿಸಿದೆ. ಈ ಬಗ್ಗೆ 3 ಸಲ ಫೋನ್ ಮಾಡಿ ಸ್ವರೂಪ್​ಗೆ ಟಿಕೆಟ್ ಕೊಡಿ ಅಂತಾ ಕುಮಾರಣ್ಣಗೆ ನಾವೇ ಹೇಳಿದ್ವಿ. ನನಗೆ ಟಿಕೆಟ್ ಇಲ್ಲ ಅಂತಾ ನಾನು ಹಾಸನ ಕಡೆಗಣಿಸಿಲ್ಲ. ಬಿಜೆಪಿಯನ್ನ ಕ್ಷೇತ್ರದಿಂದ ತೆಗೆಯಲು ನಾನು ಟಿಕೆಟ್​ಗಾಗಿ ಹೋರಾಟ ಮಾಡಿದ್ದೆ ಅಷ್ಟೇ. ಈಗ ಸ್ವರೂಪ್ ಗೆಲ್ಲಿಸಲು ನಿದ್ರೆ ಬಿಟ್ಟು ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರೋ ಭವಾನಿ ರೇವಣ್ಣ ಸ್ವರೂಪ್ ನನ್ನ ಮಗ ಇದ್ದಂತೆ. ಬಿಜೆಪಿ ಅಭ್ಯರ್ಥಿ ಪ್ರೀತಂರನ್ನ ಸೋಲಿಸಿ ಸ್ವರೂಪ್​ರನ್ನ ಗೆಲ್ಲಿಸೋಣ ಎಂದಿದ್ದಾರೆ. ಮೇಲ್ನೋಟಕ್ಕೆ ಭವಾನಿ ಏನೋ ಎಲ್ಲಾ ಕ್ಲಿಯರ್ ಆಗಿದೆ. ಸ್ವರೂಪ್​ರನ್ನ ಗೆಲ್ಲಿಸೋಣ ಅಂತಿದ್ದಾರೆ. ಆದರೆ ಟಿಕೆಟ್ ಸಿಗದೇ ಇರೋ ನೋವು ಮರೆತು ಸ್ವರೂಪ್ ಗೆಲುವಿಗೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಅನ್ನೋದನ್ನ ಯೋಚನೆ ಮಾಡಬೇಕಾಗುತ್ತೆ. ಇದಕ್ಕೆಲ್ಲಾ ಚುನಾವಣಾ ಫಲಿತಾಂಶವೇ ಉತ್ತರ ನೀಡುತ್ತೆ.

ಇನ್ನು ದೊಡ್ಡಗೌಡ್ರ ಮನೆಯ ಸೋದರರ ಜಟಾಪಟಿ ರಾಜ್ಯಾದ್ಯಂತ ಭಾರೀ ಹಲ್​ಚಲ್​ ಸೃಷ್ಟಿಸಿತ್ತು. ಭವಾನಿಗೇ ಟಿಕೆಟ್ ಕೊಡ್ಬೇಕು ಅಂತಾ ಹೆಚ್.ಡಿ ರೇವಣ್ಣ ಫ್ಯಾಮಿಲಿ ಪಟ್ಟು ಹಿಡಿದು ಕುಳಿತಿದ್ರೆ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಸ್ವರೂಪ್ ಪ್ರಕಾಶ್​ಗೇ ಟಿಕೆಟ್ ಕೊಡೋದು ಅಂತಾ ಹಠಕ್ಕೆ ಬಿದ್ದಿದ್ರು. ತಿಂಗಳಿಂದ್ಲೂ ನಡೆಯುತ್ತಿದ್ದ ಈ ಹಗ್ಗಜಗ್ಗಾಟಕ್ಕೆ ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ ಮೂಲಕ ತೆರೆ ಬಿದ್ದಿತ್ತು. ಕೊನೆಗೂ ಸ್ವರೂಪ್ ಪ್ರಕಾಶ್​ಗೆ ಹೆಚ್​ಡಿಕೆ ಟಿಕೆಟ್ ಫೈನಲ್ ಮಾಡಿ ಬಿ ಫಾರಂ ಕೊಟ್ಟಿದ್ರು.

suddiyaana