ನಿಂತುಹೋಯ್ತು ಹೃದಯ ಬಡಿತ.. ಕಂದಮ್ಮ ಉಳಿಯಲಿಲ್ಲ! – ಮಗು ಕಳೆದುಕೊಂಡ ಕರಾಳ ಅನುಭವ ಬಿಚ್ಚಿಟ್ಟ ಭಾವನ!    

ನಿಂತುಹೋಯ್ತು ಹೃದಯ ಬಡಿತ.. ಕಂದಮ್ಮ ಉಳಿಯಲಿಲ್ಲ! – ಮಗು ಕಳೆದುಕೊಂಡ ಕರಾಳ ಅನುಭವ ಬಿಚ್ಚಿಟ್ಟ ಭಾವನ!    

ಸ್ಯಾಂಡಲ್‌ವುಡ್‌ ನಟಿ ಭಾವನಾ ರಾಮಣ್ಣ ಅವರು 40ನೇ ವಯಸ್ಸಿನಲ್ಲಿ ಐವಿಎಫ್‌ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುವ ಕನಸು ಕಂಡಿದ್ದರು. ಅದ್ಧೂರಿ ಸೀಮಂತ ಕೂಡ ಮಾಡಿಕೊಂಡಿದ್ದ ಭಾವನಾ ಅವರಿಗೆ ಇತ್ತೀಚೆಗಷ್ಟೇ ಹೆರಿಗೆಯಾಗಿತ್ತು. ಆದರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ನಟಿಗೆ ಅವಧಿ ಪೂರ್ವ ಹೆರಿಯಾಗಿದೆ. ಭಾವನಾ ಕಣ್ಣ ಮುಂದೆಯೇ ಅವಳಿ ಮಕ್ಕಳಲ್ಲಿ ಒಂದು ಮಗು ಕೊನೆಯುಸಿರೆಳೆದಿದೆ. ಮಗು ಕಳೆದುಕೊಂಡ ನೋವಿನಿಂದ ಭಾವನಾ ಇನ್ನೂ ಹೊರಬಂದಿಲ್ಲ. ಇದೀಗ ಭಾವನಾ ಆ ದಿನ ಏನಾಯ್ತು? ಮಗುವಿನ ಆರೋಗ್ಯ ಸ್ಥಿತಿ ಹೇಗಿತ್ತು ಅನ್ನೋದನ್ನ ವಿವರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಫಂಗಸ್‌ ಬಂದಿದೆ.. ಬಟ್ಟೆ ವಾಸನೆ ಬರ್ತಿದೆ.. ದಯವಿಟ್ಟು ವಿಷ ಕೊಡಿ ಎಂದು ಜಡ್ಜ್‌ ಮುಂದೆ ನಟ ದರ್ಶನ್ ಮನವಿ !

ನಟಿ ಭಾವನ ನಾನು ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದೇನೆ ಎಂದು ಸೋಶಿಯಲ್‌ದಲ್ಲಿ ಪೋಸ್ಟ್‌ ಮಾಡಿ, ಖುಷಿ ವಿಚಾರ ಹಂಚಿಕೊಂಡಿದ್ರು. ಮದುವೆಯೇ ಆಗದ ಭಾವನಾ ಮಕ್ಕಳನ್ನ ಪಡೆಯೋದಕ್ಕೆ ಹೊರಟಿದ್ದರ ಬಗ್ಗೆ ಸಮಾಜದಲ್ಲಿ ಮೀಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವಾದ-ವಿವಾದಗಳ ನಡುವೆಯೇ ಭಾವನಾ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ರು. ಅವಳಿ ಮಕ್ಕಳನ್ನ ಸ್ವಾಗತಿಸೋದಕ್ಕೆ ಸಜ್ಜಾಗಿ ನಿಂತಿದ್ರು. ಆದ್ರೆ ವಿಧಿ ಭಾವನಾ ಬದುಕಲ್ಲಿ ವಿಚಿತ್ರ ತಿರುವನ್ನ ತಂದೊಡ್ಡಿದೆ. ಅವಳಿ ಮಕ್ಕಳ ಪೈಕಿ ಒಂದು ಮಗು ತೀರಿ ಹೋಗಿದ್ದು, ಇನ್ನೊಂದು ಭಾವನಾ ಮಡಿಲು ಸೇರಿದೆ. ಇದೀಗ ಸೀಮಂತದ ಬಳಿಕ ಏನಾಯ್ತು? ಆಸ್ಪತ್ರೆಯಲ್ಲಿ ನಡೆದಿದ್ದೇನು? ಮಗುವನ್ನ ಕಳ್ಕೊಂಡ ಕರಾಳ ಅನುಭವವನ್ನ ನಟಿ ಭಾವನಾ ರಾಮಣ್ಣ ಸಂದರ್ಶನವೊಂದ್ರಲ್ಲಿ ಬಿಚ್ಚಿಟ್ಟಿದ್ದಾರೆ.

ನಟಿ ಭಾವನ ಹೇಳಿದ್ದೇನು?

ನಾನು ಅವಳಿ ಮಕ್ಕಳನ್ನು ಬರಮಾಡಿಕೊಳ್ಳಲು ಸಿದ್ಧಳಾಗಿದ್ದೆ. ಆದರೆ ದುರದೃಷ್ಟವಶಾತ್, ಒಂದು ಮಗು ಉಳಿಯಲಿಲ್ಲ. ಆ ನೋವನ್ನು ಸಹಿಸುವುದು ಇಂದಿಗೂ ನನಗೆ ಕಷ್ಟವಾಗುತ್ತಿದೆ. ನನ್ನ ಪ್ರೆಗ್ನೆನ್ಸಿ ಜರ್ನಿ ಚೆನ್ನಾಗಿಯೇ ಇತ್ತು. ಆದರೆ, ಸೀಮಂತ ಮುಗಿದ ಮೇಲೆ ಹೆಚ್ಚು ಹೊತ್ತು ಕೂರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆನಂತರ ಕೊಂಚ ರಕ್ತಸ್ರಾವ ಶುರುವಾಯಿತು. ನಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಕೊಂಚ ದೂರ ಇತ್ತು. ಹೀಗಾಗಿ, ಫ್ಯಾಮಿಲಿಯ ಸಲಹೆ ಮೇರೆಗೆ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ತೆರಳಿದ್ವಿ. ಅಲ್ಲಿನ ಡಾಕ್ಟರ್‌ ನಮ್ಮ ಸಂಬಂಧಿಕರ ಹೆರಿಗೆಯನ್ನೂ ಮಾಡಿಸಿದ್ದಾರೆ. ಆ ವೈದ್ಯರು ನನ್ನನ್ನ ನೋಡುತ್ತಿದ್ದ ಹಾಗೆ ‘ಭಾವನಾ ನೀವು ಟೈಮ್‌ ಬಾಂಬ್ ಮೇಲೆ ಕೂತಿದ್ದೀರಿ’ ಎಂದುಬಿಟ್ಟರು. ‘ಮುಂದಿನ ಕೆಲವು ಗಂಟೆಗಳು ಕ್ರಿಟಿಕಲ್’ ಅಂತಲೂ ಹೇಳಿದ್ದರು.

ಡಾಕ್ಟರ್ ಕೆಲವು ಟೆಸ್ಟ್‌ಗಳನ್ನ ಮಾಡಿದರು. ಆನಂತರ ಮಗುವಿಗೆ ರಕ್ತ ಪೂರೈಸುವ ನಾಳ (umbilical cord) ರಿವರ್ಸ್ ಹರಿಯುತ್ತಿದೆ ಎಂಬುದು ಗೊತ್ತಾಯಿತು. ಒಂದು ಮಗುವಿನ ಹೃದಯ ಬಡಿತ ಅದಾಗಲೇ ಶೇ. 50 ರಷ್ಟಕ್ಕೆ ಇಳಿದುಹೋಗಿತ್ತು. ಇನ್ನೊಂದು ಮಗು ಆರೋಗ್ಯವಾಗಿತ್ತು. ಹಾಗೇ, ಒಂದು ಮಗುವಿನ ತೂಕ ಅಂಡರ್‌ವೇಯ್ಟ್‌ ಇದೆ ಎಂಬುದೂ ಗೊತ್ತಾಯಿತು. ಮಗುವಿನ ಆರೋಗ್ಯ ಸುಧಾರಿಸಲಿ ಅಂತ ನಾವು ಪ್ರಾರ್ಥಿಸಿದ್ವಿ. ಆದರೆ, ಸುಧಾರಿಸಲೇ ಇಲ್ಲ. ತುರ್ತು ಶಸ್ತ್ರಚಿಕಿತ್ಸೆಗೆ ನಾವು ಒಳಗಾಗಬೇಕಾಯಿತು

ಮಾನಿಟರ್‌ನಲ್ಲಿ ಒಂದು ಮಗುವಿನ ಹೃದಯ ಬಡಿತ ಸೊನ್ನೆಯತ್ತ ಕುಸಿಯುತ್ತಿರುವುದನ್ನು ನೋಡಿದಾಗ ನನಗಾದ ಆಘಾತವನ್ನ ವಿವರಿಸಲು ಸಾಧ್ಯವೇ ಇಲ್ಲ. ಒಂದು ಮಗುವನ್ನ ಉಳಿಸಲು ಆಗಲಿಲ್ಲ ಅಂತ ವೈದ್ಯರು ಹೇಳಿಬಿಟ್ಟರು. ಇನ್ನೊಂದು ಮಗುಗಾಗಿ ಫುಲ್ ಟರ್ಮ್‌ ಕಾಯುವ ಪರಿಸ್ಥಿತಿಯೂ ಇರಲಿಲ್ಲ. ಹೀಗಾಗಿ, 32 ವಾರಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು  ಎಂದು ನೋವಿನ ವಿಚಾರ ಬಿಚ್ಚಿಟ್ಟಿದ್ದಾರೆ.

Shwetha M