ತಾಯಿಯಾಗೋ ಖುಷಿಯಲ್ಲಿ ಭಾವನ – ಹುಟ್ಟೋ ಅವಳಿ ಮಕ್ಕಳಿಗೆ ಹೆಸರಿಟ್ಟ ನಟಿ!

ಸ್ಯಾಂಡಲ್ವುಡ್ ನಟಿ ಭಾವನ ಈಗ ತಾಯಿಯಾಗೋ ಖುಷಿಯಲ್ಲಿದ್ದಾರೆ. ಇದೀಗ ನಟಿ 6 ತಿಂಗಳ ಗರ್ಭಿಯಾಗಿದ್ದು, ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದೀಗ ನಟಿ ಭಾವನ ಹುಟ್ಟೋ ಮಕ್ಕಳಿಗೆ ಹೆಸರು ಇಟ್ಟಿದ್ದಾರೆ.
ಇದನ್ನೂ ಓದಿ:ಕ್ಯಾಚ್.. ಬೌಂಡರಿ ಲೈನ್ ಟಚ್.. ಮಿಸ್ಟೇಕ್ – ಮೊಹಮ್ಮದ್ ಸಿರಾಜ್ ಎಡವಟ್ಟಿಗೆ ಸೋಲುತ್ತಾ ಭಾರತ?
ನಟಿ ಭಾವನ ಮದುವೆಯಾಗದೇ ತಾಯಿಯಾಗ್ತಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭ ಧರಿಸಿದ್ದಾರೆ. ಮೊನ್ನೆಯಷ್ಟೇ ಅವರ ಸೀಮಂತ ಶಾಸ್ತ್ರ ಕೂಡ ನೆರವೇರಿತ್ತು. ಅವರ ಮನೆಯಲ್ಲೇ ಸರಳವಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಇದೀಗ ಹುಟ್ಟೋ ಮಕ್ಕಳಿಗೆ ನಟಿ ಏನು ಹೆಸರು ಇಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಹೆಣ್ಣು ಮಗು ಹುಟ್ಟಿದರೇ ರುಕ್ಮಿಣಿ ಅಂತ ಇಡುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಭಾವನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈಗ ಹೆಣ್ಣು ಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಗಂಡು ಮಗುವಿನ ಹೆಸರನ್ನು ಇನ್ನೂ ಯೋಚಿಸಿಲ್ಲ ಎಂದಿದ್ದಾರೆ.
ಚಿಕ್ಕಂದಿನಿಂದಲೂ ಭಾವನಾ, ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40ನೇ ವಯಸ್ಸಿಗೆ ತಲುಪಿದಾಗ ತಾಯಿಯಾಗಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವನಾ ಈ ಹಿಂದೆ ಹೇಳಿದ್ರು.

ನೋಡಿರಿ

