ಗಗನಾ ಡ್ರೋನ್‌ ವಿನ್ನರ್‌ ಅಲ್ವಾ?  – ರಕ್ಷಕ್‌, ಸುನೀಲ್‌.. ಯಾರಿಗೆ ಕಪ್?‌
ಭರ್ಜರಿ ಬ್ಯಾಚುಲರ್ಸ್‌ ಗೆಲುವು ಯಾರಿಗೆ?

ಗಗನಾ ಡ್ರೋನ್‌ ವಿನ್ನರ್‌ ಅಲ್ವಾ?  – ರಕ್ಷಕ್‌, ಸುನೀಲ್‌.. ಯಾರಿಗೆ ಕಪ್?‌ಭರ್ಜರಿ ಬ್ಯಾಚುಲರ್ಸ್‌ ಗೆಲುವು ಯಾರಿಗೆ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಭರ್ಜರಿಯಾಗೇ ಯಶಸ್ಸು ಕಂಡಿದೆ. ಇದೀಗ ಈ ಶೋ ಅಂತಿಮ ಹಂತಕ್ಕೆ ತಲುಪಿದೆ. ಇದೇ ವೀಕೆಂಡ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಇದೀಗ 10  ಬ್ಯಾಚುಲರ್ಸ್‌ ಗೆ ಹತ್ತು ಸುಂದರಿಯರು ಮೆಂಟರ್ಸ್‌ ಆಗಿ ಬಂದಿದ್ರು. ಬ್ಯಾಚುಲರ್ಸ್‌ಗೆ ಸಾಕಷ್ಟು ವಿಚಾರಗಳನ್ನ ಈ ಶೋ ಮೂಲಕ ಹೇಳಿಕೊಟ್ಟಿದ್ದಾರೆ. ಇದೀಗ ಯಾವ ಜೋಡಿಗೆ ವಿನ್ನರ್‌ ಪಟ್ಟ ಸಿಗಲಿದೆ? ಯಾರು ರನ್ನರ್‌ಅಪ್‌ ಸ್ಥಾನ ಸಿಗಲಿದೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇದೀಗ ವಿನ್ನರ್‌ ಯಾರು? ರನ್ನರ್‌ ಯಾರು ಅನ್ನೋದ್ರ ಬಗ್ಗೆ ಟಾಕ್‌ ಶುರುವಾಗಿದೆ. ಇದೀಗ ಮೂರು ಜೋಡಿ ಮಧ್ಯೆ ಟಫ್‌ ಫೈಟ್‌ ನಡಿತಾ ಇದೆ.

ಇದನ್ನೂ ಓದಿ: ದೂರವಾಗ್ತಾರಾ ಕಂಠಿ, ಸ್ನೇಹ? – ಸುಮಾ ಬಾಳಲ್ಲೂ ಬಿರುಗಾಳಿ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2 ಭರ್ಜರಿಯಾಗೇ ಯಶಸ್ಸು ಕಂಡಿದೆ. ಈ ಬಾರಿಯ  ಸೀಸನ್‌ ವಿಭಿನ್ನ ಮನರಂಜನೆಯ ಮೂಲಕ ಎಲ್ಲರಿಗೂ ನೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಈ ಸೀಸನ್‌ನಲ್ಲಿ ತಮ್ಮದೇ ಆದ ವಿಭಿನ್ನ ಸ್ಟೈಲ್‌, ಹಾಸ್ಯ ಮನೋಭಾವ ಸೇರಿದಂತೆ ವೇದಿಕೆಗಳ ಮೇಲೆ ಅನೇಕ ಥೀಮ್‌ಗಳಲ್ಲಿ ಸ್ಪರ್ಧಿಗಳು ಪರ್ಫಾಮೆನ್ಸ್‌ ನೀಡಿದ್ರು. ಈ ಮೂಲಕ ಕೆಲ ಸ್ಪರ್ಧಿಗಳು ವೀಕ್ಷಕರ ಮನಗೆದ್ದಿದ್ದಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್‌ ಶೋ ಫಿನಾಲೆ ಹಂತಕ್ಕೆ ತಲುಪಿದೆ. ಇದೇ ಭಾನುವಾರ ಸಂಜೆ 6 ಗಂಟೆಗೆ ಫಿನಾಲೆ ಪ್ರಸಾರಗೊಳ್ಳಲಿದೆ. ಇದೀಗ ಭರ್ಜರಿ ಬ್ಯಾಚುಲರ್ಸ್‌ ವಿನ್ನರ್‌ ಯಾರಾಗ್ಬೋದು ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ. ಈ ಸೀಸನ್‌ನಲ್ಲಿ ಮೂರು ಜೋಡಿ ಮಧ್ಯೆ ಟಫ್‌ ಫೈಟ್‌ ಇದೆ. ಆ ಮೂರು ಜೋಡಿ ಬೇರೆ ಯಾವುದೂ ಅಲ್ಲ.. ಗಗನಾ ಡೋನ್‌ ಪ್ರತಾಪ್..‌ ರಕ್ಷಕ್‌ ರಮೋಲಾ.. ಹಾಗೇ ಸುನೀಲ್‌ ಅಮ್ರಿಟಾ ಜೋಡಿ.. ಇದೀಗ ಈ ಮೂರು ಜೋಡಿಯಲ್ಲಿ ಯಾರು ವಿನ್‌ ಆಗ್ಬೋದು ಅನ್ನೋದ್ರ ಬಗ್ಗೆ ಚರ್ಚೆ ನಡಿತಾ ಇದೆ.

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌2 ನಲ್ಲಿ ಆರಂಭದಲ್ಲೇ ಸದ್ದು ಮಾಡಿದ್ದು ಅಂದ್ರೆ ಅದು ಡ್ರೋನ್‌ ಪ್ರತಾಪ್‌ ಹಾಗೂ ಗಗನಾ ಜೋಡಿ.. ಗಗನಾಳನ್ನ ಹೆಲಿಕಾಪ್ಟರ್‌ನಲ್ಲಿ ಕರ್ಕೊಂಡು ಹೋಗಿ ಡ್ರೋನ್‌ ಪ್ರತಾಪ್‌ ಅರಶಿನ ಕುಂಕುಮ ಕೊಟ್ಟಿದ್ರು.. ಅದಾದ್ಮೇಲೆ ಸಾಕಷ್ಟು ಸರ್‌ಪ್ರೈಸ್‌ಗಳನ್ನ ಕೊಟ್ಟು ಡ್ರೋನ್‌ ಪ್ರತಾಪ್‌ ಇಂಪ್ರೆಸ್‌ ಮಾಡಿದ್ರು.. ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಡ್ರೋನ್‌ ಪ್ರತಾಪ್‌ ಜೋಡಿ ಆಮೇಲೆ ಯಾಕೋ ಕೊಂಚ ಸೈಲೆಂಟ್‌ ಆದ್ರು.. ಹೀಗಾಗಿ ಈ ಸೀಸನ್‌ ಡ್ರೋನ್‌ ಪ್ರತಾಪ್‌ ಗಗನಾ ವಿನ್‌ ಆಗೋದು ಡೌಟ್‌.. ಆದ್ರೆ ವೋಟ್‌ ಮೂಲಕ ವಿನ್ನರ್‌ ನ ಸೆಲೆಕ್ಟ್‌ ಮಾಡಿದ್ರೆ, ಗಗನಾ ಡ್ರೋನ್‌ ವಿನ್‌ ಆಗೋ ಚಾನ್ಸ್‌ ಇದೆ.. ಯಾಕಂದ್ರೆ ಇವರಿಬ್ಬರಿಗೂ ಸಪರೇಟ್‌ ಫ್ಯಾನ್ಸ್‌ ಇದ್ದಾರೆ..

ಇನ್ನು ರಕ್ಷಕ್‌ ಹಾಗೂ ರಮೋಲಾ ಜೋಡಿ ಆರಂಭದಿಂದಲೂ ಸಾಕಷ್ಟು ಹೈಲೈಟ್‌ ಆಗಿದೆ.. ರಕ್ಷಕ್‌ ತುಂಬಾ ರೂಡ್‌ ಮನುಷ್ಯ ಆಗಿದ್ರು.. ಮಾತು ಮಾತಿಗೂ ರೇಗ್ತಿದ್ರು.. ಆದ್ರೆ ಈ ವ್ಯಕ್ತಿಯನ್ನ ಬದಲಾಯಿಸಿದ್ದು ರಮೋಲಾ.. ರಮೋಲಾ ಬಂದ್ಮೇಲೆ ರಕ್ಷಕ್‌ ಕಂಪ್ಲೀಟ್‌ ಚೇಂಜ್‌ ಆಗಿದ್ದಾರೆ.. ಈಗ ರಕ್ಷಕ್‌ ಕೂಲ್‌ ಮನುಷ್ಯ ಆಗಿದ್ದಾರೆ.. ಇವರಿಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್‌ ಇದೆ.. ಇವರಿಬ್ರು ವಿನ್‌ ಆಗ್ಲಿ.. ಹಾಗೇ ರಿಯಲ್‌ ಜೀವನದಲ್ಲೂ ಜೊತೆಗಿದ್ರೆ ಒಳ್ಳೆದು ಅಂತಾ ಫ್ಯಾನ್ಸ್‌ ಬಯಸ್ತಿದ್ದಾರೆ.

ಸುನೀಲ್‌ ಹಾಗೂ ಅಮ್ರಿಟಾ.. ಈ ಜೋಡಿ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ನಲ್ಲಿ ಸಖತ್‌ ಹೈಲೈಟ್‌.. ಅಮ್ರಿಟಾ ಕ್ಯೂಟ್‌ ಮಾತು.. ಅಮ್ರಿಟಾಗಾಗಿ ಸುನೀಲ್‌ ಹಾಡೋ ಹಾಡು ಎಲ್ಲವೂ ವೀಕ್ಷಕರಿಗೆ ಅಚ್ಚುಮೆಚ್ಚು. ಇವರಿಬ್ರ ಮಧ್ಯೆ ಸಮ್‌ಂಥಿಂಗ್‌ ಸಮ್‌ಂಥಿಗ್‌ ನಡಿತಾ ಇದೆ ಅಂತಾ ವೀಕ್ಷಕರು ಹೇಳ್ತಾನೆ ಬಂದಿದ್ದಾರೆ.  ಈ ಜೋಡಿ ಕಾಂಬಿನೇಷನ್‌ ಚೆನ್ನಾಗಿದೆ ಇವ್ರು ಕೂಡ ವಿನ್‌ ಆಗ್ಬೇಕು ಅಂತ ವೀಕ್ಷಕರು ಹೇಳ್ತಿದ್ದಾರೆ.

ಒಟ್ಟಾರೆ ಭರ್ಜರಿ ಬ್ಯಾಚುಲರ್‌ ಸೀಸನ್‌ 2 ವಿನ್ನರ್‌ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಿಗಿದೆ. 10 ಜೋಡಿಗಳಲ್ಲಿ ಈ ಮೂರು ಜೋಡಿ ಮಧ್ಯೆ ಟಫ್‌ ಫೈಟ್‌ ಇದೆ.. ಬಹುತೇಕ ಈ ಮೂರು ಜೋಡಿಗಳಲ್ಲಿ ಒಂದು ಜೋಡಿ ಕಪ್‌ ಗೆಲ್ಲಲಿದೆ ಎಂದು ವೀಕ್ಷಕರೇ ಭವಿಷ್ಯ ನುಡಿಯುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೂ ಭಾನುವಾರ ಸಂಜೆ ಉತ್ತರ ಸಿಗಲಿದೆ.

Shwetha M